ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಭಾರತದ ಏಕ್ತಾಗೆ ಚಿನ್ನ ಮತ್ತು ಕಂಚು

By Prasad
Ekta Bhyan wins Gold medal at Para Athletics Grand Prix Tunisia

ಬೆಂಗಳೂರು, ಜುಲೈ 13 : ಟ್ಯುನೀಶಿಯಾದಲ್ಲಿ ನಡೆದಿರುವ ಪ್ಯಾರಾ ಅಥ್ಲೆಟಿಕ್ ಗ್ರಾನ್ ಪ್ರಿ ಕ್ರೀಡಾಸ್ಪರ್ಧೆಯಲ್ಲಿ ಭಾರತದ ಏಕ್ತಾ ಭಿಯಾನ್ ಅವರು ಒಂದು ಚಿನ್ನದ ಪದಕ ಮತ್ತು ಒಂದು ಕಂಚಿನ ಪದಕ ಗೆದ್ದು ದೇಶಕ್ಕೆ ಹೆಮ್ಮೆ ತಂದಿದ್ದಾರೆ.

ಇಂಗ್ಲೆಂಡ್ ನಲ್ಲಿ ನಡೆದಿರುವ ಕ್ರಿಕೆಟ್ ಏಕದಿನ ಸರಣಿ ಮತ್ತು ರಷ್ಯಾದಲ್ಲಿ ನಡೆದಿರುವ ಫೀಫಾ ವಿಶ್ವಕಪ್ ಫುಟ್ಬಾಲ್ ಚಾಂಪಿಯನ್‌ಶಿಪ್ ನಡುವೆ ಟ್ಯುನೀಶಿಯಾದಲ್ಲಿ ನಡೆದಿರುವ ಕ್ರೀಡಾಕೂಟ ಮತ್ತು ಅದರ ವರದಿಗಾರಿಕೆ ಮರೆತುಹೋಗಿರುವುದು ನಿಜಕ್ಕೂ ದುರ್ದೈವದ ಸಂಗತಿ.

ಕಾಮನ್ ವೆಲ್ತ್ ಬಂಗಾರ ವಿಜೇತ ಅಥ್ಲೀಟ್ ವಿಕಾಸ್ ಗೌಡ ನಿವೃತ್ತಿಕಾಮನ್ ವೆಲ್ತ್ ಬಂಗಾರ ವಿಜೇತ ಅಥ್ಲೀಟ್ ವಿಕಾಸ್ ಗೌಡ ನಿವೃತ್ತಿ

ಕ್ರೀಡಾ ಚಟುವಟಿಕೆಗಳ ಸ್ಟಾರ್ಟ್ ಅಪ್ ಕಂಪನಿಯ ಸಹ ಸಂಸ್ಥಾಪಕರಾಗಿರುವ ಸಂಚಿತ್ ಮಲಿಕ್ ಅವರು ತಮ್ಮ ಸಹೋದರಿ ಏಕ್ತಾ ಭಿಯಾನ್ ಅವರು ಪದಕ ಗೆದ್ದಿರುವ ಬಗ್ಗೆ ಟ್ವೀಟ್ ಮಾಡಿದ್ದು, ನನ್ನ ತಂಗಿಯ ಸ್ಫೂರ್ತಿಯುತ ಸಾಧನೆಯನ್ನು ಒಂದಿಲ್ಲೊಂದು ದಿನ ಮಾಧ್ಯಮಗಳು ವರದಿ ಮಾಡುತ್ತವೆ ಎಂದು ವ್ಯಂಗ್ಯವಾಗಿ ಹೇಳಿದ್ದಾರೆ.

ಬೆನ್ನುಹುರಿಯ ತೊಂದರೆಯಿಂದ ಬಳಲುತ್ತಿರುವ 31 ವರ್ಷದ ಸೋನಿಪತ್ ನ ಏಕ್ತಾ ಅವರು ಡಿಸ್ಕಸ್ ಥ್ರೋ ಮತ್ತು ಕ್ಲಬ್ ಥ್ರೋನಲ್ಲಿ ಭಾಗವಹಿಸಿದ್ದರು. 2003ರಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಅವರ ಬೆನ್ನುಹುರಿಗೆ ಭಾರೀ ಪೆಟ್ಟು ಬಿದ್ದಿದ್ದಲ್ಲದೆ, ಸೊಂಟದ ಕೆಳಭಾಗ ನಿಷ್ಕ್ರಿಯವಾಯಿತು.

ಆದರೂ ಧೃತಿಗೆಡದ ಏಕ್ತಾ ಅವರು, 2014ರಲ್ಲಿ ಕ್ರೀಡೆಯಲ್ಲಿ ಭಾಗವಹಿಸಲು ತರಬೇತಿ ಪಡೆದುಕೊಳ್ಳಲು ಆರಂಭಿಸಿದರು. ಮತ್ತೊಬ್ಬ ಪ್ಯಾರಾ ಅಥ್ಲಿಟ್ ಆಗಿರುವ ಅಮಿತ್ ಸರೋಹಾ ಅವರನ್ನು ಭೇಟಿಯಾದ ನಂತರ ಏಕ್ತಾ ಅವರ ಬದುಕಿನ ದಿಕ್ಕೇ ಬದಲಾಯಿತು. ಅವರು ಡಿಸ್ಕರ್ ಥ್ರೋ ಮತ್ತು ಕ್ಲಬ್ ಥ್ರೋನಲ್ಲಿ ತರಬೇತಿ ಪಡೆಯಲು ಆರಂಭಿಸಿದರು.

ಎರಡು ಶಸ್ತ್ರಚಿಕಿತ್ಸೆ ಮತ್ತು ಹಲವಾರು ತಿಂಗಳ ಆರೈಕೆಯ ನಂತರ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಮತ್ತಷ್ಟು ಬಲಿಷ್ಠವಾಗಿದ್ದಾರೆ. ಸತತ ತರಬೇತಿ ಮತ್ತು ಛಲದಿಂದಾಗಿ 2016ರಲ್ಲಿ ಬರ್ಲಿನ್ ನಲ್ಲಿ ನಡೆದ ಐಪಿಸಿ ಪ್ಯಾರಾ ಅಥ್ಲೆಟಿಕ್ಸ್ ಗ್ರಾನ್ ಪ್ರಿ ಕ್ರೀಡಾಕೂಟದಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.

Story first published: Friday, July 13, 2018, 12:52 [IST]
Other articles published on Jul 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X