ಅಂತಾರಾಷ್ಟ್ರೀಯ ಏರ್ ರೈಫಲ್ ಚಾಂಪಿಯನ್‌ಷಿಪ್‌ನಲ್ಲಿ ಎಲಾವೆನಿಲ್‌ಗೆ ಚಿನ್ನ

ನವದೆಹಲಿ: ಶೈಕ್ ರಸೆಲ್ ಇಂಟರ್ ನ್ಯಾಷನಲ್ ಏರ್ ರೈಫಲ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ನಂ.1 ಶೂಟರ್, ಭಾರತದ ಎಲಾವೆನಿಲ್ ವಲಾರಿವನ್ ಬಂಗಾರ ಗೆದ್ದಿದ್ದಾರೆ. ಭಾರತದವರೇ ಆದ ಶಾಹು ತುಷಾರ್ ಮಾನೆ ಬೆಳ್ಳಿ ಪದಕ ಜಯಿಸಿದ್ದಾರೆ. ಭಾನುವಾರ ನಡೆದ ವರ್ಚುಯಲ್ ಸ್ಪರ್ಧೆಯಲ್ಲಿ ಭಾರತೀಯರಿಗೆ ಪದಕ ಲಭಿಸಿದೆ.

ಚಾಂಪಿಯನ್‌ಷಿಪ್‌ ಅನ್ನು ಬಾಂಗ್ಲಾದೇಶ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ (ಬಿಎಸ್‌ಎಸ್‌ಎಫ್‌) ಆಯೋಜಿಸಿತ್ತು. ಬಂಗಾರ ಗೆದ್ದಿರುವ ಎಲಾವೆನಿಲ್‌ಗೆ USD 1000 (73,443 ರೂ.) ಮತ್ತು ಶಾಹು ಮಾನೆಗೆ USD 700 (51,410 ರೂ.) ನಗದು ಬಹುಮಾನ ಸಿಕ್ಕಿದೆ.

ಅಲಿ ಖಾನ್ ಬದಲಿಗೆ ಕೆಕೆಆರ್ ಸೇರಲಿದ್ದಾರೆ ನ್ಯೂಜಿಲೆಂಡ್ ಬ್ಯಾಟ್ಸ್ ಮನ್?

60 ಶಾಟ್‌ಗಳ ಸ್ಪರ್ಧೆಯಲ್ಲಿ ಒಟ್ಟು 6 ರಾಷ್ಟ್ರಗಳು ಪಾಲ್ಗೊಂಡಿದ್ದವು. ಸ್ಪರ್ಧೆಯಲ್ಲಿ ಪಾಲ್ಗೊಂಡ ದೇಶಗಳಲ್ಲಿ ಭಾರತ ಮತ್ತು ಆತಿಥೇಯ ಬಾಂಗ್ಲಾದೇಶ ಕೂಡ ಇತ್ತು. ಇದರಲ್ಲಿ ಎಲಾವೆನಿಲ್ 627.5 ಪಾಯಿಂಟ್ಸ್‌ ಕಲೆ ಹಾಕಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಇನ್ನು ಜಪಾನ್‌ನ ಶಿಯೋರಿ ಹಿರಾಟಾ 622.6 ಪಾಯಿಂಟ್ಸ್‌ನೊಂದಿಗೆ ಬೆಳ್ಳಿ, ಇಂಡೋನೇಷ್ಯಾದ ವಿದ್ಯಾ ತೊಯ್ಯಿಬ 621.1 ಅಂಕಗಳೊಂದಿಗೆ ಕಂಚಿನ ಪದಕ ಜಯಿಸಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Sunday, October 18, 2020, 22:53 [IST]
Other articles published on Oct 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X