ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಶೂಟಿಂಗ್‌: ವಿಶ್ವ ದಾಖಲೆಯೊಂದಿಗೆ ಚಿನ್ನಕ್ಕೆ ಗುರಿಯಿಟ್ಟ ಎಲಾವಿನಿಲ್‌

Elavenil wins gold; India bag 10m air rifle team gold with world record

ಸುಲ್‌ (ಜರ್ಮನಿ), ಜುಲೈ 16: ಭಾರತದ ಯುವ ಹಾಗೂ ಪ್ರತಿಭಾನ್ವಿತ ಶೂಟರ್‌ ಎಲಾವೆನಿಲ್‌ ವಲಾರಿವನ್‌ ಜೂನಿಯರ್‌ ವಿಶ್ವಕಪ್‌ ಶೂಟಿಂಗ್‌ನಲ್ಲಿ ನೂತನ ವಿಶ್ವ ದಾಖಲೆಯೊಂದಿಗೆ ಸತತ ಎರಡನೇ ಬಾರಿ ಸ್ವರ್ಣ ಸಾಧನೆ ಮಾಡಿದ್ದಾರೆ.

19 ವರ್ಷದ ಯುವ ಶೂಟರ್‌ ಭಾರತಕ್ಕೆ ಒಲಿಂಪಿಕ್ಸ್‌ ಪದಕ ಗೆದ್ದುಕೊಡಬಲ್ಲಿ ಸಾಮರ್ಥ್ಯ ಹೊಂದಿದ್ದು, ಸೋಮವಾರ ನಡೆದ ಮಹಿಳಾ ವಿಭಾಗದ ಏರ್‌ ರೈಫಲ್‌ ಸ್ಪರ್ಧೆಯಲ್ಲಿ ಭಾರತದವರೇ ಆದ ಮೆಹುಲಿ ಘೋಷ್‌ (630.4) ಅವರನ್ನು 1.4 ಅಂಕಗಳಿಂದ ಹಿಂದಿಕ್ಕಿ ಚಿನ್ನದ ಪದಕ್ಕೆ ಕೊರಳೊಡ್ಡಿದ್ದಾರೆ. ಫೈನಲ್‌ನಲ್ಲಿ ಎಲಾವಿನಿಲ್‌ ಒಟ್ಟು 251.6 ಅಂಕಗಳನ್ನು ಗಳಿಸಿದರು.

<strong>ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ ಸೋಲಿಗೆ ಅಂಪೈರ್‌ ಪ್ರಮಾದ ಕಾರಣ?</strong>ಇಂಗ್ಲೆಂಡ್‌ ವಿರುದ್ಧ ನ್ಯೂಜಿಲೆಂಡ್‌ ಸೋಲಿಗೆ ಅಂಪೈರ್‌ ಪ್ರಮಾದ ಕಾರಣ?

ಪ್ರಥಮಿಕ ಹಂತದಲ್ಲಿ ಎಲಾವೆನಿಲ್‌ ಗಮನಾರ್ಹ ಪ್ರದರ್ಶನ ನೀಡಲು ಸಾಧ್ಯವಾಗದೆ 124 ಶೂಟರ್‌ಗಳ ನಡುವೆ 8ನೇ ಸ್ಥಾನಿಯಾಗಿ ಫೈಲ್‌ ತಲುಪಿದ್ದರು. ಬಳಿಕ ಫೈನಲ್‌ನಲ್ಲಿ ತಮ್ಮ ಶ್ರೇಷ್ಠ ಪ್ರದರ್ಶನ ಹೊರತಂದು ಬಂಗಾರದ ಸಾಧನೆ ಮೆರೆದರು.

ಇದೇ ವೇಳೆ ತಂಡ ವಿಭಾಗದಲ್ಲಿ ಎಲಾವೆನಿಲ್‌, ಮೆಹುಲಿ ಮತ್ತು ಶ್ರೇಯಾ ಅಗರ್ವಾಲ್‌ ( 625.4 ) ಅವರನ್ನೊಳಗೊಂಡ ಭಾರತ ತಂಡ ಒಟ್ಟು 1883.3 ಅಂಕಗಳನ್ನು ಗಳಿಸುವ ಮೂಲಕ ಚಿನ್ನ ಗೆದ್ದುಕೊಂಡಿದೆ. ಇದು ತಂಡ ವಿಭಾಗದಲ್ಲಿ ದಾಖಲಾದ ನೂತನ ವಿಶ್ವ ದಾಖಲೆಯಾಗಿದೆ. ಈ ಮೂಲಕ ಕೂಟದಲ್ಲಿ ಭಾರತ ತಂಡ ಒಟ್ಟು 6 ಚಿನ್ನ, 6 ಬೆಳ್ಳಿ ಮತ್ತು ಎರಡು ಕಂಚಿನ ಪದಕ ಗೆದ್ದಿದ್ದಾರೆ.

ವಿಶ್ವಕಪ್‌: ಮೈಖೇಲ್‌ ಕನಸಿನ ತಂಡದಲ್ಲಿ ಯಾರೆಲ್ಲಾ ಇದ್ದಾರೆ?ವಿಶ್ವಕಪ್‌: ಮೈಖೇಲ್‌ ಕನಸಿನ ತಂಡದಲ್ಲಿ ಯಾರೆಲ್ಲಾ ಇದ್ದಾರೆ?

ರಷ್ಯಾ ಮತ್ತು ನಾರ್ವೆ ತಂಡ ಎರಡು ಚಿನ್ನ ಗೆದ್ದರೆ, ಚೀನಾ, ಆಸ್ಟ್ರೇಲಿಯಾ, ಥಾಯ್ಲೆಂಡ್‌ ಮತ್ತು ಆತಿಥೇಯ ಜರ್ಮನಿ ತಲಾ ಒಂದು ಪದಕ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮತ್ತೊಂದೆಡೆ ಪುರುಷರ ಟ್ರ್ಯಾಪ್‌ ಶೂಟಿಂಗ್‌ನಲ್ಲಿ ಭುವನೀಶ್‌ ಮೆಂದೀರಥ 116 ಅಂಕಗಳನ್ನು ಗಳಿಸುವ ಮೂಲಕ ಕೇವಲ 3 ಅಂಕಗಳ ಅಂತರದಲ್ಲಿ ಫೈನಲ್‌ ಹಂತಕ್ಕೇರುವಲ್ಲಿ ವಿಫಲರಾದರು.

Story first published: Tuesday, June 29, 2021, 14:05 [IST]
Other articles published on Jun 29, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X