ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊರೊನಾವೈರಸ್‌ನಿಂದ ಯುರೋಪಿಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ರದ್ದು

European Athletics Championships cancelled due to coronavirus

ಪ್ಯಾರಿಸ್, ಏಪ್ರಿಲ್ 24: ಆಗಸ್ಟ್ ತಿಂಗಳಲ್ಲಿ ಪ್ಯಾರಿಸ್‌ನಲ್ಲಿ ನಡೆಯಬೇಕಿದ್ದ 2020ರ ಯುರೋಪಿಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್ ರದ್ದಾಗಿದೆ. ಕೊರೊನಾವೈರಸ್‌ ಸೋಂಕಿನ ಕಾರಣ ಕ್ರೀಡಾಕೂಟವು ರದ್ದಾಗಿರುವುದಾಗಿ ಆಯೋಜಕರು ಗುರುವಾರ (ಏಪ್ರಿಲ್ 23) ಮಾಹಿತಿ ನೀಡಿದ್ದಾರೆ.

ಆರ್‌ಸಿಬಿ ಪರ ಕ್ರಿಸ್‌ ಗೇಲ್ ಸಿಡಿದಿದ್ದು, ದಾಖಲೆ ರನ್ ಗಳಿಸಿದ್ದು ಇದೇ ಆರ್‌ಸಿಬಿ ಪರ ಕ್ರಿಸ್‌ ಗೇಲ್ ಸಿಡಿದಿದ್ದು, ದಾಖಲೆ ರನ್ ಗಳಿಸಿದ್ದು ಇದೇ

ಕೋವಿಡ್‌-19ನಿಂದಾಗಿ ವಿಶ್ವದಾದ್ಯಂತ ಅನೇಕ ಕ್ರೀಡಾಕೂಟಗಳು ರದ್ದು ಇಲ್ಲವೆ ಮುಂದೂಡಲ್ಪಟ್ಟಿವೆ. ಒಲಿಂಪಿಕ್ಸ್ ಕ್ರೀಡಾಕೂಟ, ಯುರೋಪಿಯನ್ ಫುಟ್ಬಾಲ್ ಚಾಂಪಿಯನ್‌ಶಿಪ್, ಕೋಪಾ ಅಮೆರಿಕಾ ಇವೆಲ್ಲವೂ ಹತ್ತಿರ ಒಂದು ವರ್ಷದವರೆಗೆ ಮುಂದೂಡಲ್ಪಡ್ಡಿವೆ.

ಸಹ ಆಟಗಾರರ ಹೊಟ್ಟೆಕಿಚ್ಚಿಗೆ ಕಾರಣವಾಯ್ತು ಪೀಟರ್‌ಸನ್ ಯಶಸ್ಸು: ಮೈಕಲ್ ವಾನ್ಸಹ ಆಟಗಾರರ ಹೊಟ್ಟೆಕಿಚ್ಚಿಗೆ ಕಾರಣವಾಯ್ತು ಪೀಟರ್‌ಸನ್ ಯಶಸ್ಸು: ಮೈಕಲ್ ವಾನ್

ಮಾರಕ ಸೋಂಕಿನ ಕಾರಣ ಇತ್ತೀಚೆಗೆ ರದ್ದಾದ ದೊಡ್ಡ ಕ್ರೀಡಾಕೂಟದ ಸಾಲಿಗೆ ಯುರೋಪಿಯನ್ ಅಫ್ಲೆಟಿಕ್ಸ್ ಚಾಂಪಿಯನ್‌ಶಿಪ್ ಸೇರಿಕೊಂಡಿದೆ. ಫ್ರೆಂಚ್‌ ಅಥ್ಲೆಟಿಕ್ಸ್ ಫೆಡರೇಶನ್‌ನ ವೈದ್ಯಕೀಯ ಆಯೋಗ ಪರಿಸ್ಥಿತಿ ಪರಿಶೀಲಿಸಿ ಕ್ರೀಡಾಕೂಟ ನಡೆಸಿದರೆ ಸಮಸ್ಯೆ ಎಂದು ಎಚ್ಚರಿಸಿದ ಬಳಿಕ ಯುರೋಪಿಯನ್ ಕ್ರೀಡಾಕೂಟ ರದ್ದುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಕನ್ನಡಿಗನನ್ನು ಟೀಮ್ ಇಂಡಿಯಾದ 'ಬೆಸ್ಟ್ ಕ್ಯಾಪ್ಟನ್' ಎಂದ ಗೌತಮ್ ಗಂಭೀರ್ಕನ್ನಡಿಗನನ್ನು ಟೀಮ್ ಇಂಡಿಯಾದ 'ಬೆಸ್ಟ್ ಕ್ಯಾಪ್ಟನ್' ಎಂದ ಗೌತಮ್ ಗಂಭೀರ್

'ಕೊರೊನಾವೈರಸ್ ಪಿಡುಗಿನಿಂದಾಗಿ ಈಗ ಪರಿಸ್ಥಿತಿ ಚೆನ್ನಾಗಿಲ್ಲವಾದ್ದರಿಂದ ಕ್ರೀಡಾಕೂಟ ನಡೆಸಿ ಸಮಸ್ಯೆಗೆ ಸಿಲುಕದಿರಲು ಆಯೋಜಕರು ಯೋಚಿಸಿದ್ದಾರೆ. ಫ್ರಾನ್ಸ್‌ನಲ್ಲಿ ಜನ ಒಟ್ಟು ಸೇರುವುದನ್ನೂ ನಿಷೇಧಿಸಲಾಗಿರುವುದರಿಂದ ಕ್ರೀಡಾಕೂಟವನ್ನು ರದ್ದು ಮಾಡುವ ನಿರ್ಧಾರ ತಾಳಲಾಗಿದೆ,' ಎಂದು ಯುರೋಪಿಯನ್ ಅಥ್ಲೆಟಿಕ್ಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

Story first published: Friday, April 24, 2020, 9:24 [IST]
Other articles published on Apr 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X