ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ದೀಪಿಕಾಳ ಆರ್ಚರಿ ಸ್ಪರ್ಧೆಯ ಪ್ರಸಾರ ಕಡೆಗಣನೆಗೆ ಅಭಿಮಾನಿಗಳ ಅಸಮಾಧಾನ

Fans were not happy with the coverage of Deepika Kumari’s Women’s Archery Event

ಟೋಕಿಯೋ: ವಿಶ್ವ ನಂ.1 ಬಿಲ್ಲುಗಾರ್ತಿ ಭಾರತದ ದೀಪಿಕಾ ಕುಮಾರಿ ಪಾಲ್ಗೊಂಡಿದ್ದ ಮಹಿಳಾ ಆರ್ಚರಿ ಸ್ಪರ್ಧೆಯ ಪ್ರಸಾರ ಕಡೆಗಣನೆಗೆ ಟೋಕಿಯೋ ಒಲಿಂಪಿಕ್ಸ್‌ನ ಅಧಿಕೃತ ಪ್ರಸಾರಕ ಸೋನಿನೆಟ್ವರ್ಕ್ ವಿರುದ್ಧ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇಸ್ರೇಲಿಗರು ಕೊಲ್ಲಲ್ಪಟ್ಟ ಕರಾಳ ಘಟನೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಮರಣೆಇಸ್ರೇಲಿಗರು ಕೊಲ್ಲಲ್ಪಟ್ಟ ಕರಾಳ ಘಟನೆ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಸ್ಮರಣೆ

ಮಹಿಳಾ ಆರ್ಚರಿಯಲ್ಲಿ ವೈಯಕ್ತಿಕ 9ನೇ ಸ್ಥಾನದೊಂದಿಗೆ ದೀಪಿಕಾ ಕುಮಾರಿ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದರು. ಒಲಿಂಪಿಕ್ಸ್ ಅಧಿಕೃತ ಉದ್ಘಾಟನೆ ದಿನವಾದ ಜುಲೈ 23ರಂದು ಮುಂಜಾನೆ ದೀಪಿಕಾರಿಗೆ ಸ್ಪರ್ಧೆಯಿತ್ತು. ಮೊದಲ ಸುತ್ತಿನ ಸ್ಪರ್ಧೆಯಲ್ಲಿ ದೀಪಿಕಾ ದ್ವಿತೀಯ ಸುತ್ತಿಗೆ ಲಗ್ಗೆಯಿಟ್ಟಿದ್ದರು.

ಆದರೆ ಮಹಿಳಾ ಆರ್ಚರಿ ಸ್ಪರ್ಧೆಯನ್ನು ಸೋನಿನೆಟ್ವರ್ಕ್ ಪ್ರಸಾರಗೊಳಿಸಿರಲಿಲ್ಲ. ಭಾರತೀಯ ಸ್ಪರ್ಧಿಯಿದ್ದ ಈ ಈವೆಂಟನ್ನು ವೀಕ್ಷಿಸಲು ಕಾದಿದ್ದ ಅಭಿಮಾನಿಗಳಿಗೆ ಇದರಿಂದ ನಿರಾಸೆಯಾಗಿದೆ. ಹೀಗಾಗಿ ಅಧಿಕೃತ ಪ್ರಸಾರಕ ಸೋನಿ ನೆಟ್ವರ್ಕ್ಸ್ ವಿರುದ್ಧ ಕ್ರೀಡಾಭಿಮಾನಿಗಳು ಕಿಡಿಕಾರಿದ್ದಾರೆ. ಟ್ವಿಟರ್ ಮೂಲಕ ಹೆಚ್ಚಿನವರು ಅಸಮಾಧಾನ ಹೊರಹಾಕಿದ್ದಾರೆ.

ಫೆರ್ನಾಂಡೋ, ರಾಜಪಕ್ಸ ಅರ್ಧ ಶತಕ, ಭಾರತ ವಿರುದ್ಧ ಶ್ರೀಲಂಕ್ಕಾಕ್ಕೆ ಜಯಫೆರ್ನಾಂಡೋ, ರಾಜಪಕ್ಸ ಅರ್ಧ ಶತಕ, ಭಾರತ ವಿರುದ್ಧ ಶ್ರೀಲಂಕ್ಕಾಕ್ಕೆ ಜಯ

ವೈಯಕ್ತಿಕ ವಿಭಾಗದ ಮೊದಲ ಸುತ್ತಿನ ಸ್ಪರ್ಧೆಯಲ್ಲಿ ದೀಪಿಕಾ 72 ಶಾಟ್‌ಗಳಲ್ಲಿ 663 ಅಂಕ ಕಲೆಹಾಕಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ. ಮುಂದಿನ ಸುತ್ತಿನಲ್ಲಿ ದೀಪಿಕಾ ಭೂತಾನ್‌ನ ಕರ್ಮ ಅವರನ್ನು ಎದುರಿಸಲಿದ್ದಾರೆ. ಅಂದ್ಹಾಗೆ ಜುಲೈ 23ರಂದು ಟೋಕಿಯೋ ಒಲಿಂಪಿಕ್ಸ್‌ಗೆ ಜಪಾನ್‌ನ ಟೆನಿಸ್ ತಾರೆ ನವೋಮಿ ಒಸಾಕಾ ಅಧಿಕೃತ ಚಾಲನೆ ನೀಡಿದ್ದಾರೆ.

Story first published: Saturday, July 24, 2021, 2:40 [IST]
Other articles published on Jul 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X