ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫೋರ್ಬ್ಸ್ ಪಟ್ಟಿಯಲ್ಲಿ ಫೆಡರರ್ ದಾಖಲೆ, ನೂರು ಕ್ರೀಡಾಪಟುಗಳಲ್ಲಿ ಓರ್ವ ಕ್ರಿಕೆಟರ್‌ಗೆ ಮಾತ್ರ ಸ್ಥಾನ

Federer Tops Ronaldo, Messi, virat kohli On Forbes List

ಫೋರ್ಬ್ಸ್ ನಿಯತಕಾಲಿಕೆ ಕಳೆದ ಒಂದು ವರ್ಷದ ಅವಧಿಯಲ್ಲಿ ಅತಿ ಹೆಚ್ಚಿ ಆದಾಯ ಗಳಿಸಿದ ಕ್ರೀಡಾಪಡುಗಳ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ನೂರು ಕ್ರೀಡಾಪಡುಗಳ ಪಟ್ಟಿ ಇದಾಗಿದ್ದು ಎಲ್ಲಾ ಕ್ರೀಡಾ ಕ್ಷೇತ್ರವನ್ನು ಗಮನದಲ್ಲಿಟ್ಟುಕೊಂಡು ಈ ಪಟ್ಟಿಯನ್ನು ಫೋರ್ಬ್ಸ್ ಪ್ರಕಟಿಸಿದೆ. ಕಳೆದ ಒಂದು ವರ್ಷಗಳ ಅವಧಿಯಲ್ಲಿ ಕ್ರೀಡಾ ಕೂಟಗಳಿಂದ ಗಳಿಸಿದ ಹಣ ಮತ್ತು ಜಾಹೀರಾತಿ ಒಪ್ಪಂದಗಳನ್ನು ಆಧಾರವಾಗಿಟ್ಟುಕೊಂಡು ಫೋರ್ಬ್ಸ್ ಈ ಪಟ್ಟಿಯನ್ನು ಸಿದ್ದಪಡಿಸಿದೆ.

ಜೂನ್ 20ರಂದು ಇಟಲಿಯ ಸೀರೀ ಎ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್ಜೂನ್ 20ರಂದು ಇಟಲಿಯ ಸೀರೀ ಎ ಪುನರಾರಂಭಕ್ಕೆ ಗ್ರೀನ್ ಸಿಗ್ನಲ್

ನೂರು ಕ್ರೀಡಾಪಟುಗಳ ಈ ಪಟ್ಟಿಯಲ್ಲಿ ಕ್ರಿಕೆಟ್‌ನಿಂದ ಕೇವಲ ಓರ್ವ ಆಟಗಾರ ಮಾತ್ರವೇ ಸ್ಥಾನ ಪಡೆದುಕೊಂಡಿದ್ದಾರೆ. ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನವನ್ನು ಪಡೆದುಕೊಂಡಿರುವ ಏಕೈಕ ಕ್ರಿಕೆಟರ್ ಆಗಿದ್ದಾರೆ.

ಸ್ಥಾನ ಉತ್ತಮಪಡಿಸಿಕೊಂಡ ವಿರಾಟ್

ಸ್ಥಾನ ಉತ್ತಮಪಡಿಸಿಕೊಂಡ ವಿರಾಟ್

ವಿರಾಟ್ ಕೊಹ್ಲಿ ಈ ಪಟ್ಟಿಯಲ್ಲಿ 66ನೇ ಸ್ಥಾನದಲ್ಲಿದ್ದಾರೆ. 26 ಮಿಲಿಯನ್ ಡಾಲರ್ ವಾಋ್ಷಿಕ ಆದಾಯವನ್ನು ಗಳಿಸಿದ್ದಾರೆ ಎಂದು ಫೋರ್ಬ್ಸ್ ಲೆಕ್ಕಾಚಾರ ಹಾಕಿದೆ. ಈ ಪಟ್ಟಿಯಲ್ಲಿ ವಿರಾಟ್ 2018ರಲ್ಲಿ 83ನೇ ಸ್ಥಾನದಲ್ಲಿದ್ದರು. ಆದರೆ ಕಳೆದ ವರ್ಷ 100ನೇ ಸ್ಥಾನಕ್ಕೆ ಜಾರಿದ್ದರು. ಈ ವರ್ಷ ತನ್ನ ಸ್ಥಾನವನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡಿದ್ದಾರೆ.

ಮೊದಲ ಟೆನ್ನಿಸ್ ಪ್ಲೇಯರ್

ಮೊದಲ ಟೆನ್ನಿಸ್ ಪ್ಲೇಯರ್

ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡ ಕ್ರೀಡಾಪಟು ಅಂದರೆ ಅದು ಟೆನಿಸ್ ದಿಗ್ಗಜ ರೋಜರ್ ಫೆಡರರ್. ಇದೇ ಮೊದಲ ಬಾರಿಗೆ ಟೆನ್ನಿಸ್ ಆಟಗಾರನೋರ್ವ ಈ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದು ಫೆಡರರ್ ದಾಖಲೆ ಬರೆದಿದ್ದಾರೆ. 106.3 ಮಿಲಿಯನ್ ಡಾಲರ್ ವಾರ್ಷಿಕ ಆದಾಯದೊಂದಿಗೆ ಫೆಡರರ್ ಮೊದಲ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾರೆ.

ರೊನಾಲ್ಡೋ, ಮೆಸ್ಸಿಗೆ ನಂತರದ ಸ್ಥಾನ

ರೊನಾಲ್ಡೋ, ಮೆಸ್ಸಿಗೆ ನಂತರದ ಸ್ಥಾನ

ಫುಟ್ಬಾಲ್ ದಿಗ್ಗಜರಾದ ಕ್ರಿಶ್ಚಿಯಾನೋ ರೊನಾಲ್ಡೋ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದರೆ ಮೂರನೇ ಸ್ಥಾನದಲ್ಲಿ ಲಿಯೋನೆಲ್ ಮೆಸ್ಸಿ, ನಾಲ್ಕನೇ ಸ್ಥಾನದಲ್ಲಿ ನೇಮಾರ್ ಇದ್ದಾರೆ. ಬಾಸ್ಕೆಟ್ ಬಾಲ್ ದಿಗ್ಗಜನಾದ ಅಮೆರಿಕಾದ ಲಿಬ್ರಾನ್ ಜೇಮ್ಸ್ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾರೆ.

ನವೋಮಿ ಒಸಕಾ ನಂ 1

ನವೋಮಿ ಒಸಕಾ ನಂ 1

ಮಹಿಳಾ ಕ್ರೀಡಾಪಟುಗಳ ಪಟ್ಟಿಯಲ್ಲಿ ಜಪಾನ್‌ನ ನವೋಮಿ ಒಸಕಾ ಮೊದಲ ಸ್ಥಾನವನ್ನು ಸಂಪಾದಿಸಿಕೊಂಡಿದ್ದಾರೆ. ಸೆರೆನಾ ವಿಲಿಯಮ್ಸ್ ಎರಡನೇ ಸ್ಥಾನಕ್ಕೆ ಜಾರಿದ್ದಾರೆ. ಮಹಿಳಾ ಕ್ರೀಡಾಪಟುಗಳ ಪಟ್ಟಿಯಲ್ಲಿ ಈ ವರ್ಷವೂ ಟೆನ್ನಿಸ್ ಆಟಗಾರರ ಪ್ರಾಬಲ್ಯ ಮುಂದಿವರಿದಿದೆ.

Story first published: Saturday, May 30, 2020, 11:06 [IST]
Other articles published on May 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X