Flashback 2019: WWE ರೆಸ್ಲಿಂಗ್ ಸೂಪರ್ ದಾಖಲೆಗಳು

ವರ್ಲ್ಡ್ ರೆಸ್ಲಿಂಗ್ ಎಂಟರ್‌ಟೇನ್‌ಮೆಂಟ್ ಪಂದ್ಯಾವಳಿಗಳು ಯಾವುದೇ ಬ್ರೇಕ್ ಇಲ್ಲದೆ 2019ರ ಇಡೀ ವರ್ಷದುದ್ದಕ್ಕೂ ಕ್ರೀಡಾಭಿಮಾನಿಗಳನ್ನು ರಂಜಿಸಿದವು. ಈ ಪಂದ್ಯಾವಳಿಗಳಲ್ಲಿ ಜಗಜಟ್ಟಿಗಳು ತಮ್ಮ ಅದ್ಭುತ ಕೌಶಲದಿಂದ ರೋಮಾಂಚಕ ಆಟವಾಡಿ ಜನರಿಗೆ ಭರ್ತಿ ಮನರಂಜನೆಯನ್ನೂ ನೀಡಿದರು.

ಹಾಗೆಯೇ 2019 ರಲ್ಲಿ ಈ ಜಟ್ಟಿಗಳು ಹಲವಾರು ಹಳೆಯ ದಾಖಲೆಗಳನ್ನು ಮುರಿದು ಹೊಸ ದಾಖಲೆಗಳನ್ನು ನಿರ್ಮಿಸಿದ್ದು ಇತಿಹಾಸ. ವರ್ಷಾಂತ್ಯವಾಗುತ್ತಿರುವ ಈ ಸಂದರ್ಭದಲ್ಲಿ 2019 ರಲ್ಲಿ WWE ನಲ್ಲಿ ಸ್ಥಾಪಿತವಾದ ಸೂಪರ್ ದಾಖಲೆಗಳತ್ತ ಒಂದು ಕಣ್ಣು ಹಾಯಿಸೋಣ ಬನ್ನಿ.

2018 ರಲ್ಲಿ ಡೀನ್ ಆಂಬ್ರೋಸ್ ಅವರೊಂದಿಗೆ ರಾಲಿನ್ಸ್ ಅವರು ಇಂಟರಕಾಂಟಿನೆಂಟಲ್ ಟೈಟಲ್ ಹಾಗೂ ರಾ ಟ್ಯಾಗ್ ಟೈಟಲ್ ಎರಡನ್ನೂ ತಮ್ಮ ಹೆಸರಿನಲ್ಲಿ ಹೊಂದಿದ್ದರು. ಎರಡು ದೊಡ್ಡ PPV (ರೆಸಲ್‌ಮೇನಿಯಾ ಹಾಗೂ ಸಮ್ಮರಸ್ಲ್ಯಾಮ್) ಗಳಲ್ಲಿ ಲೆಸ್ನರ್ ಅವರನ್ನು ಸೋಲಿಸಿದ್ದು ಮತ್ತು ಎರಡೂ ವಿಭಾಗಗಳಲ್ಲಿ ಅವರನ್ನು ಸೋಲಿಸಿ ಯುನಿವರ್ಸಲ್ ಟೈಟಲ್ ಗೆದ್ದುಕೊಂಡಿದ್ದು ಇವರ ಸಾಧನೆಯಾಗಿದೆ. ಇದೇ ಕಾರಣಕ್ಕಾಗಿ ಇವರಿಗೆ ದಿ ಬೀಟ್‌ಸ್ಲೇಯರ್ ಎಂಬ ನಿಕ್‌ನೇಮ್ ಸಹ ಸಿಕ್ಕಿತ್ತು.

528 ದಿನಗಳವರೆಗೆ ಚಾಂಪಿಯನ್ ಆಗಿದ್ದ ಪೀಟ್ ಡ್ಯುನ್ನೆ

528 ದಿನಗಳವರೆಗೆ ಚಾಂಪಿಯನ್ ಆಗಿದ್ದ ಪೀಟ್ ಡ್ಯುನ್ನೆ

ಪೀಟ್ ಡ್ಯುನ್ನೆ ಹೆಚ್ಚು ಅವಧಿಗೆ ಚಾಂಪಿಯನ್ ಆಗಿ ಉಳಿದ ದಾಖಲೆಯನ್ನು ತಮ್ಮ ಹೆಸರಿಗೆ ಬರೆಸಿಕೊಂಡರು. ಆದರೆ ಬ್ರುನೋ ಸಮರ್ಟಿನೊ ಅವರ 2803 ದಿನಗಳವರೆಗೆ ಸತತ ಚಾಂಪಿಯನ್ ಆಗಿದ್ದ ದಾಖಲೆಯನ್ನು ಮುರಿಯುವುದು ಮಾತ್ರ ತೀರಾ ಕಷ್ಟದ ಕೆಲಸ. ಆದರೂ ಇಂದಿನ ಸಮಯದಲ್ಲಿ ಪೀಟ್ ಡ್ಯುನ್ನೆ 528 ದಿನಗಳವರೆಗೆ ಸತತವಾಗಿ ಚಾಂಪಿಯನ್ ಆಗಿದ್ದು 2019ರ ಸೂಪರ್ ದಾಖಲೆಯಾಗಿದೆ. ಇವರು NXT UK ಚಾಂಪಿಯನ್‌ಶಿಪ್‌ನಲ್ಲಿ ಸತತ 528 ದಿನಗಳ ಕಾಲ ಚಾಂಪಿಯನ್ ಆಗಿ ಜಗತ್ತಿನ ಗಮನ ಸೆಳೆದರು. 2017-18 ರ ಅವಧಿಯಲ್ಲಿ 503 ದಿನಗಳ ಕಾಲ ಯುನಿವರ್ಸಲ್ ಚಾಂಪಿಯನ್ ಆಗಿದ್ದ ಬ್ರೋಕ್ ಲೆಸ್ನರ್ ಅವರ ದಾಖಲೆಯನ್ನು ಪೀಟ್ ಧೂಳಿಪಟ ಮಾಡಿದರು.

ಟ್ರಿಪಲ್ ಕ್ರೌನ್ ಚಾಂಪಿಯನ್ ಬೈಲೆ

ಟ್ರಿಪಲ್ ಕ್ರೌನ್ ಚಾಂಪಿಯನ್ ಬೈಲೆ

2019ರ ಅವಧಿಗೆ ಪರಿಗಣಿಸಿದಲ್ಲಿ WWE ಮಹಿಳಾ ವಿಭಾಗದಲ್ಲಿ ಮೂರು ಪ್ರಮುಖ ಟೈಟಲ್‌ಗಳನ್ನು ಹೊಂದಿದೆ. (ರಾ, ಸ್ಮ್ಯಾಕ್ ಡೌನ್ ಹಾಗೂ ಟ್ಯಾಗ್ ಟೀಂ ಚಾಂಪಿಯನ್ಸ್). ಈ ಮುನ್ನ ಕೆಲ ಮಹಿಳಾ ಸೂಪರಸ್ಟಾರ್ ಜಟ್ಟಿಗಳು ರಾ ಹಾಗೂ ಸ್ಮ್ಯಾಕ್ ಡೌನ್ ಟೈಟಲ್ ಎರಡನ್ನೂ ಗೆದ್ದು ದಾಖಲೆ ಬರೆದಿದ್ದರು. ಆದರೆ ಬೈಲೆ ಮಾತ್ರ ಮೂರನೇ ವಿಭಾಗವಾದ ಟ್ಯಾಗ್ ಟೀಂ ಚಾಂಪಿಯನ್ ಟೈಟಲ್ ಅನ್ನೂ ಎಲಿಮಿನೇಶನ್ ಚೇಂಬರ್‌ನಲ್ಲಿ ಗೆದ್ದು ಇತಿಹಾಸ ಬರೆದರು. ಇವರು ಬ್ಲ್ಯೂ ಸ್ಟ್ರಾಪ್ಡ್ ಮಹಿಳಾ ಟೈಟಲ್ ಅನ್ನು ಬ್ಯಾಂಕ್ ಕಾಂಟ್ರ್ಯಾಕ್ಟ್ ನಲ್ಲಿ ಹಾಗೂ ರೆಡ್ ಸ್ಟ್ರಾಪ್ಡ್ ಬೆಲ್ಟ್ ಅನ್ನು 2017 ರಲ್ಲಿ ಗೆದ್ದುಕೊಂಡಿದ್ದರು. ಹಾಗಾಗಿ ಇವರು ಪ್ರಥಮ ಟ್ರಿಪಲ್ ಕ್ರೌನ್ ಚಾಂಪಿಯನ್ ಆಗಿ ಹೊಹೊಮ್ಮಿದರು. ನಂತರ 2019ರಲ್ಲಿ ಅಲೆಕ್ಸಾ ಬ್ಲಿಸ್ ಸಹ ಇದೇ ಸಾಧನೆಯನ್ನು ಪುನರಾವರ್ತಿಸಿದರು.

3ನೇ ಬಾರಿ ಯುನಿವರ್ಸಲ್ ಟೈಟಲ್ ಗೆದ್ದ ಬ್ರೋಕ್ ಲೆಸ್ನರ್

3ನೇ ಬಾರಿ ಯುನಿವರ್ಸಲ್ ಟೈಟಲ್ ಗೆದ್ದ ಬ್ರೋಕ್ ಲೆಸ್ನರ್

ಬೀಸ್ಟ್ ಇನ್ಕಾರ್ನೇಟ್ ನಲ್ಲಿ ಸಾಕಷ್ಟು ದಾಖಲೆಗಳು ನಿರ್ಮಾಣವಾಗುತ್ತಲೇ ಬಂದಿವೆ. ಸ್ಮ್ಯಾಕ್ ಡೌನ್ ಪಂದ್ಯಾವಳಿಯ ಉದ್ಘಾಟನಾ ಪಂದ್ಯದಲ್ಲಿ ಬ್ರೋಕ್ ಲೆಸ್ನರ್ ಅವರು ಕೋಫಿ ಕಿಂಗಸ್ಟನ್ ಅವರನ್ನು ಕೇವಲ 8 ಸೆಕೆಂಡುಗಳಲ್ಲಿ ಸೋಲಿಸಿ ಸಾರ್ವಕಾಲಿಕ WWE ಚಾಂಪಿಯನ್‌ಶಿಪ್ ತಮ್ಮದಾಗಿಸಿಕೊಂಡರು. ಸ್ಮ್ಯಾಕ್ ಡೌನ್ ಮಾದರಿಯಲ್ಲಿ ಎರಡನೇ ಬಾರಿಗೆ ಈ ಸಾಧನೆ ಮಾಡಿದ ಏಕೈಕ ಸೂಪರಸ್ಟಾರ್ ಎನಿಸಿಕೊಂಡರು ಲೆಸ್ನರ್. ಇದು ಮಾತ್ರವಲ್ಲದೆ ಎಕ್ಸಟ್ರೀಮ್ ರೂಲ್ಸ್ ವಿಭಾಗದಲ್ಲಿ ಬ್ಯಾಂಕ್ ಬ್ರೀಫ್‌ಕೇಸ್ ಮೂಲಕ ಹಣ ಗೆದ್ದುಕೊಂಡರು. ಇದು ಅವರ ಮೂರನೇ ವಿಶ್ವ ಚಾಂಪಿಯನ್ ಶಿಪ್ ಟೈಟಲ್ ಗೆಲುವು. ಇಂಥದೊಂದು ಸಾಧನೆಯನ್ನು ಈವರೆಗೂ ಯಾರೂ ಮಾಡಿರಲಿಲ್ಲ.

ರೊಂಡಾ ರೌಸಿ ರೆಕಾರ್ಡ್ ಹಿಮ್ಮೆಟ್ಟಿಸಿದ ಬೆಕಿ ಲಿಂಚ್

ರೊಂಡಾ ರೌಸಿ ರೆಕಾರ್ಡ್ ಹಿಮ್ಮೆಟ್ಟಿಸಿದ ಬೆಕಿ ಲಿಂಚ್

ರೊಂಡಾ ರೌಸಿ ಇವರು WWE ರಾ ವುಮೆನ್ಸ್ ಚಾಂಪಿಯನ್‌ಶಿಪ್ ಅನ್ನು 2018 ರ ಸಮ್ಮರಸ್ಲ್ಯಾಮ್ ನಿಂದ ರೆಸಲ್‌ಮೇನಿಯಾ ೩೫ ವರೆಗೂ ಹಿಡಿದಿಟ್ಟುಕೊಂಡಿದ್ದರು. ಆದರೆ ಇವರ 231 ದಿನಗಳ ದಾಖಲೆಯನ್ನು ಬೆಕಿ ಲಿಂಚ್ ಮುರಿದರು. ಅಲ್ಲದೆ ರಾ ವುಮೆನ್ಸ್ ಚಾಂಪಯನ್‌ಶಿಪ್‌ನ ಅತಿ ದೀರ್ಘಾವಧಿ ಚಾಂಪಿಯನ್ ಆಗಿ ಇವರು 2019 ರ ನವೆಂಬರ್‌ನಲ್ಲಿ ದಾಖಲೆ ಬರೆದರು. ರೊಂಡಾ ರೌಸಿಯವರನ್ನು ಸೋಲಿಸಿದ ಲಿಂಚ್, ರೆಸಲ್‌ಮೇನಿಯಾದ ಪ್ರಮುಖ ವಿಭಾಗ ಗೆದ್ದ ಪ್ರಥಮ ಮಹಿಳಾ ರೆಸ್ಲರ್ ಹಾಗೂ ಮಾಜಿ ಯುಎಫ್‌ಸಿ ಬಾಂಟಮ್‌ವೇಟ್ ಚಾಂಪಿಯನ್‌ರನ್ನು ಸೋಲಿಸಿದ ಮಹಿಳೆಯಾಗಿ ಗುರುತಿಸಿಕೊಂಡರು.

WWE ಅತಿ ಹಿರಿಯ ಚಾಂಪಿಯನ್ ಆದ ಪ್ಯಾಟ್

WWE ಅತಿ ಹಿರಿಯ ಚಾಂಪಿಯನ್ ಆದ ಪ್ಯಾಟ್

ಹೊಸದಾಗಿ ಪರಿಚಯಿಸಲಾದ ರಾ ಎಪಿಸೋಡ್‌ನ 24/7 ಚಾಂಪಿಯನ್‌ಶಿಪ್‌ನ WWE ಯುನಿವರ್ಸ್ ಟೈಟಲ್ ಗೆಲ್ಲುವ ಮೂಲಕ ಪ್ರಖ್ಯಾತ ಜಟ್ಟಿ ಪ್ಯಾಟ್ ಪ್ಯಾಟರ್ಸನ್ ಇಡೀ WWE ವಿಶ್ವದಲ್ಲಿ ಸಂಚಲನವನ್ನೇ ಸೃಷ್ಟಿಸಿದರು. ಈ ಮೂಲಕ ಡ್ರೇಕ್ ಮಾವೆರಿಕ್ ಹೆಸರಿನಲ್ಲಿದ್ದ ದಾಖಲೆಯನ್ನು (78 ವರ್ಷ ವಯಸ್ಸು) ಅಳಿಸಿ ತಮ್ಮ ಹೆಸರಿಗೆ ಬರೆದುಕೊಂಡರು. ಅಂದು ರಾತ್ರಿ ಪಂದ್ಯದಲ್ಲಿ ಪ್ಯಾಟ್ ವಿಜಯಿಯಾಗಿ ಬೆಲ್ಟ್ ತಮ್ಮದಾಗಿಸಿಕೊಂಡರು.

ಟ್ರಿಪಲ್ ಡಬಲ್ ಚಾಂಪಿಯನ್ ಆದ ಸೇಥ್ ರಾಲಿನ್ಸ್

ಟ್ರಿಪಲ್ ಡಬಲ್ ಚಾಂಪಿಯನ್ ಆದ ಸೇಥ್ ರಾಲಿನ್ಸ್

WWE ಪಂದ್ಯಗಳ ದಿಗ್ಗಜ ಸೇಥ್ ರಾಲಿನ್ಸ್, 2019ರ ಸಮ್ಮರಸ್ಲ್ಯಾಮ್‌ನಲ್ಲಿ ಬ್ರೋಕ್ ಲೆಸ್ನರ್ ಅವರನ್ನು ಸೋಲಿಸಿ ಯುನಿವರ್ಸಲ್ ಟೈಟಲ್ ತಮ್ಮದಾಗಿಸಿಕೊಂಡರು. ನಂತರ ಬ್ರಾನ್ ಸ್ಟ್ರೋಮನ್ ಅವರೊಂದಿಗೆ ಸೇರಿಕೊಂಡು ರಾ ಟ್ಯಾಗ್ ಟೀಂ ಟೈಟಲ್ ಅನ್ನು ಸಹ ಗೆದ್ದರು. ಇದಕ್ಕೂ ಮುನ್ನ 2015 ರ Winner-Takes-All match ಸಮ್ಮರಸ್ಲ್ಯಾಮ್ ನಲ್ಲಿ ಜಾನ್ ಸೆನಾ ಅವರನ್ನು ಹಿಂದಿಕ್ಕಿ WWE ಮತ್ತು ಯುಎಸ್ ಟೈಟಲ್ ಎರಡನ್ನೂ ಗೆದ್ದುಕೊಂಡಿದ್ದರು. 2018 ರಲ್ಲಿ ಡೀನ್ ಆಂಬ್ರೋಸ್ ಅವರೊಂದಿಗೆ ರಾಲಿನ್ಸ್ ಅವರು ಇಂಟರಕಾಂಟಿನೆಂಟಲ್ ಟೈಟಲ್ ಹಾಗೂ ರಾ ಟ್ಯಾಗ್ ಟೈಟಲ್ ಎರಡನ್ನೂ ತಮ್ಮ ಹೆಸರಿನಲ್ಲಿ ಹೊಂದಿದ್ದರು. ಎರಡು ದೊಡ್ಡ PPV (ರೆಸಲ್‌ಮೇನಿಯಾ ಹಾಗೂ ಸಮ್ಮರಸ್ಲ್ಯಾಮ್) ಗಳಲ್ಲಿ ಲೆಸ್ನರ್ ಅವರನ್ನು ಸೋಲಿಸಿದ್ದು ಮತ್ತು ಎರಡೂ ವಿಭಾಗಗಳಲ್ಲಿ ಅವರನ್ನು ಸೋಲಿಸಿ ಯುನಿವರ್ಸಲ್ ಟೈಟಲ್ ಗೆದ್ದುಕೊಂಡಿದ್ದು ಇವರ ಸಾಧನೆಯಾಗಿದೆ. ಇದೇ ಕಾರಣಕ್ಕಾಗಿ ಇವರಿಗೆ ದಿ ಬೀಟ್‌ಸ್ಲೇಯರ್ ಎಂಬ ನಿಕ್‌ನೇಮ್ ಸಹ ಸಿಕ್ಕಿತ್ತು.

10ನೇ ಬಾರಿಗೆ ವುಮೆನ್ಸ್ ಟೈಟಲ್ ಗೆದ್ದ ಚಾರ್ಲೊಟ್ಟೆ

10ನೇ ಬಾರಿಗೆ ವುಮೆನ್ಸ್ ಟೈಟಲ್ ಗೆದ್ದ ಚಾರ್ಲೊಟ್ಟೆ

ಚಾರ್ಲೊಟ್ಟೆ ಫ್ಲೇರ್ ಅವರನ್ನು ಬಿಟ್ಟರೆ WWE ವಿಶ್ವದಾಖಲೆಗಳ ಪುಸ್ತಕ ಅಪೂರ್ಣವೆನಿಸುತ್ತದೆ. ಹಿಂದೆ 7 ಬಾರಿ ವಿಶ್ವ ಚಾಂಪಿಯನ್ ಆದ ಕಿರೀಟದೊಂದಿಗೆ 2019ರ ವರ್ಷವನ್ನು ಆರಂಭಿಸಿದ ಚಾರ್ಲೊಟ್ಟೆ ಈ ವರ್ಷ ಮತ್ತೆ ಮೂರು ಬಾರಿ ಚಾಂಪಿಯನ್ ಆಗುವ ಮೂಲಕ ಒಟ್ಟು 10 ಬಾರಿ ಚಾಂಪಿಯನ್ ಆದ ಅಭೂತಪೂರ್ವ ದಾಖಲೆ ಬರೆದರು. ಇದು ಅತಿ ಹೆಚ್ಚು ಬಾರಿ ಚಾಂಪಿಯನ್‌ಶಿಪ್ ಗೆದ್ದ ಸಾರ್ವಕಾಲಿಕ ದಾಖಲೆಯಾಗಿದೆ. ಇವರು 2019ರ ಮಾರ್ಚ 26 ರಂದು Money in the Bank and Hell in a Cell 2019 2019 ಸ್ಮ್ಯಾಕ್‌ಡೌನ್ ವುಮೆನ್ಸ್ ಟೈಟಲ್ ಗೆಲ್ಲುವ ಮೂಲಕ ಅವರು 10 ಬಾರಿ ಚಾಂಪಿಯನ್ ಆದ ಸಾಧನೆ ಮಾಡಿದರು.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

Story first published: Tuesday, December 24, 2019, 15:25 [IST]
Other articles published on Dec 24, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more