ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಇಂದು 5 PMಗೆ ಚಂಡೀಗಢದಲ್ಲಿ ಮಿಲ್ಖಾ ಸಿಂಗ್ ಅಂತ್ಯ ಸಂಸ್ಕಾರ

Flying Sikh Milkha Singhs cremation in Chandigarh at 5pm

ಚಂಡೀಗಢ: ಭಾರತದ ಖ್ಯಾತ ಅಥ್ಲೀಟ್ (ಓಟಗಾರ) ಮಿಲ್ಖಾ ಸಿಂಗ್ ಅವರ ಅಂತ್ಯ ಸಂಸ್ಕಾರ ಚಂಡೀಗಢದಲ್ಲಿ ಜೂನ್ 19ರ ಶನಿವಾರ ಸಂಜೆ PMಗೆ ಸಕಲ ಗೌರವದೊಂದಿಗೆ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ. ಕೋವಿಡ್-19 ಸೋಂಕಿಗೀಡಾಗಿದ್ದ ಮಿಲ್ಖಾ ಶುಕ್ರವಾರ ತಡರಾತ್ರಿ ಕೊನೆಯುಸಿರೆಳೆದಿದ್ದರು.

ಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ರೋಮ್ ಒಲಿಂಪಿಕ್ಸ್‌ನಲ್ಲಿ ಓಡಿರುವ ರೋಚಕ ವಿಡಿಯೋಫ್ಲೈಯಿಂಗ್ ಸಿಖ್ ಮಿಲ್ಖಾ ಸಿಂಗ್ ರೋಮ್ ಒಲಿಂಪಿಕ್ಸ್‌ನಲ್ಲಿ ಓಡಿರುವ ರೋಚಕ ವಿಡಿಯೋ

91 ವರ್ಷ ವಯಸ್ಸಾಗಿದ್ದ ಮಿಲ್ಖಾ ಚಂಡೀಗಢ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದರು. ಆದರೆ ಶುಕ್ರವಾರದ ವೇಳೆ ಅವರ ಆರೋಗ್ಯ ಸ್ಥಿತಿ ತೀರಾ ಹದಗೆಟ್ಟಿತ್ತು. ಸಿಂಗ್ ಪತ್ನಿ ನಿರ್ಮಲ್ ಕೌರ್ ಕೂಡ ಕೋವಿಡ್-19ನಿಂದಾಗಿ ಇದೇ ತಿಂಗಳು ಸಾವನ್ನಪ್ಪಿದ್ದರು.

'ಇವತ್ತು (ಶನಿವಾರ) 5 PMಗೆ ಮಿಲ್ಖಾ ಸಿಂಗ್ ಅವರ ಅಂತ್ಯ ಸಂಸ್ಕಾರ ಚಂಡೀಗಢದಲ್ಲಿ ನಡೆಯಲಿದೆ,' ಎಂದು ಮಿಲ್ಖಾ ಕುಟುಂಬದ ವಕ್ತಾರರು ಮಾಹಿತಿ ನೀಡಿದ್ದಾರೆ. ಮಿಲ್ಖಾ ಪತ್ನಿ ನಿರ್ಮಲ್ ಕೂಡ ಭಾರತ ವಾಲಿಬಾಲ್ ತಂಡದ ಮಾಜಿ ನಾಯಕಿಯಾಗಿದ್ದರು.

WTC Final: ಟಾಸ್‌ಗೆ ಮುನ್ನ ತಂಡವನ್ನು ಬದಲಾಯಿಸಿ: ಸುನಿಲ್ ಗವಾಸ್ಕರ್ ನೀಡಿದ ಈ ಸಲಹೆಗೆ ಕಾರಣವೇನು?WTC Final: ಟಾಸ್‌ಗೆ ಮುನ್ನ ತಂಡವನ್ನು ಬದಲಾಯಿಸಿ: ಸುನಿಲ್ ಗವಾಸ್ಕರ್ ನೀಡಿದ ಈ ಸಲಹೆಗೆ ಕಾರಣವೇನು?

ಮಿಲ್ಖಾ ಸಾವಿಗೆ ಪಂಜಾಬ್ ಮುಖ್ಯಮಂತ್ರಿ ಅಮರೀಂದರ್ ಸಿಂಗ್ ಸೇರಿದಂತೆ ಅನೇಕ ರಾಜಕಾರಣಿಗಳು, ಕ್ರೀಡಾಪಟುಗಳು, ಚಲನಚಿತ್ರ ತಾರೆಯರು ಮತ್ತು ಕ್ರಿಕೆಟಿಗರು ಸಂತಾಪ ಸೂಚಿಸಿದ್ದಾರೆ. ಏಷ್ಯನ್ ಗೇಮ್ಸ್‌ನಲ್ಲಿ 4 ಬಾರಿ ಪದಕ ಗೆದ್ದಿದ್ದ ಮಿಲ್ಖಾ 1960ರ ರೋಮ್ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಪಡೆದುಕೊಂಡಿದ್ದರು.

Story first published: Saturday, June 19, 2021, 14:55 [IST]
Other articles published on Jun 19, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X