ಡಬ್ಲ್ಯೂಡಬ್ಲ್ಯೂಇ ಮಾಜಿ ರಸ್ಲರ್ ಜೇಮ್ಸ್ 'ಕಮಲ' ಹ್ಯಾರಿಸ್ ನಿಧನ

ವಾಷಿಂಗ್ಟನ್, ಆಗಸ್ಟ್ 10: 'ಮಾನ್ಸ್ಟರ್ ಹೀಲ್ ಕಮಲ' ಎಂದೆ ರಿಂಗ್‌ನಲ್ಲಿ ಕರೆಯಲ್ಪಡುತ್ತಿದ್ದ ಅಮೆರಿಕಾದ ಮಾಜಿ ವೃತ್ತಿಪರ ರಸ್ಲರ್ ಜೇಮ್ಸ್ ಹ್ಯಾರಿಸ್ ಸಾವನ್ನಪ್ಪಿದ್ದಾರೆ ಎಂದು WWE ವರದಿ ಹೇಳಿದೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ವಿಭಿನ್ನವಾಗಿ ಬಣ್ಣ ಬಳಿದು, ವಿಚಿತ್ರ ಮಾಸ್ಕ್‌ನೊಂದಿಗೆ ರಿಂಗ್‌ಗೆ ಬರುತ್ತಿದ್ದ ಹ್ಯಾರಿಸ್ ಗಮನ ಸೆಳೆಯುತ್ತಿದ್ದರು.

'ಆತ ಎಲ್ಲಾ ಮಾದರಿಗಳಲ್ಲಿ ಆಡಲಾರ': ಭಾರತದ ಆಟಗಾರನಿಗೆ ಅಖ್ತರ್ ಎಚ್ಚರಿಕೆ!

ಮಿಸ್ಸಿಸ್ಸಿಪ್ಪಿಯಲ್ಲಿ ಜನಸಿದ್ದ ಹ್ಯಾರಿಸ್ ಬದುಕು ಚೆನ್ನಾಗಿರಲಿಲ್ಲ. ಕೃಷಿ ಕೆಲಸಗಾರನಾಗಿ ಮತ್ತು ಟ್ರಕ್ ಚಾಲಕನಾಗಿ ದುಡಿದಿದ್ದ ಹ್ಯಾರಿಸ್ ತನ್ನ ಕುಟುಂಬವನ್ನು ಪೂರೈಸಲು ಹೆಣಗಾಡುತ್ತಿದ್ದರು. ಹದಿಹರೆಯದಲ್ಲಿ ಕಳ್ಳತನ ಮಾಡಿದ್ದಕ್ಕಾಗಿ ಬಂಧನಕ್ಕೂ ಒಳಗಾಗಿದ್ದರು.

ಸಿಪಿಎಲ್ 2020: ಟೂರ್ನಿಯಲ್ಲಿ ನಿರ್ಮಾಣವಾಗಿರುವ ಅಪರೂಪದ ದಾಖಲೆಗಳು

ಹ್ಯಾರಿಸ್ 25ರ ಹರೆಯದವರಾಗಿದ್ದಾಗ ರಸ್ಲರ್ ಬಾಬೊ ಬ್ರಝಿಲ್ ಅವರನ್ನು ಮಿಚಿಗನ್‌ನಲ್ಲಿ ಭೇಟಿಯಾಗಿದ್ದರು. ಆ ಬಳಿಕ ಹ್ಯಾರಿಸ್, ಬ್ರಝಿಲ್ ಅಡಿಯಲ್ಲಿ ಅಭ್ಯಾಸ ರಸ್ಲಿಂಗ್ ಅಭ್ಯಾಸ ಮಾಡಿದರು. ಅನಂತರ ಸೌತ್‌ಈಸ್ಟ್ ಯುಎಸ್‌ನಲ್ಲಿ ವೃತ್ತಿ ಆರಂಭಿಸಿದ ಹ್ಯಾರಿಸ್ ಎನ್‌ಡಬ್ಲ್ಯೂಎ ಪ್ರಶಸ್ತಿ ಜಯಿಸಿದ್ದರು. ಮತ್ತೆ ಜೇಮ್ಸ್ WWEಗೂ ಎಂಟ್ರಿ ಕೊಟ್ಟರು.

ಇಂಗ್ಲೆಂಡ್ vs ಪಾಕಿಸ್ತಾನ: ಕುತೂಹಲಕಾರಿ ದಾಖಲೆಗಳು, ಅಂಕಿ-ಅಂಶಗಳು!

ಹಾಗೆ ರಸ್ಲಿಂಗ್ ಕಣದಲ್ಲಿ ಮಿಂಚತೊಡಗಿದ ಹ್ಯಾರಿಸ್ ಆನಂತರ ತನ್ನ ಹೆಸರನ್ನು ಕಮಲ ಅಂತ ಬದಲಾಯಿಸಿ 2010ರ ವರೆಗೂ WWEನಲ್ಲಿ ಮುಂದುವರೆದರು. ಮತ್ತೆ ರಕ್ತದೊತ್ತಡ ಮತ್ತು ಡಯಾಬಿಟೀಸ್‌ನಿಂದ ಗಾಯಕ್ಕೀಯಕ್ಕೀಡಾದ ಹ್ಯಾರಿಸ್ ರಿಂಗ್‌ನಿಂದ ದೂರ ಉಳಿಯಬೇಕಾಗಿ ಬಂದಿತ್ತು.

For Quick Alerts
ALLOW NOTIFICATIONS
For Daily Alerts
Story first published: Monday, August 10, 2020, 10:07 [IST]
Other articles published on Aug 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X