ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಫ್ಲ್ಯಾಶ್‌ಬ್ಯಾಕ್‌ 2020: ಬದುಕಿಗೆ ವಿದಾಯ ಹೇಳಿದ ದಿಗ್ಗಜ ಆಟಗಾರರು

From Kobe Bryant to Dean Jones: Sporting icons we lost in 2020

2020 ಕ್ಯಾಲೆಂಡರ್ ವರ್ಷ ಅಂತ್ಯವಾಗಲು ದಿನಗಣನೆ ಆರಂಭವಾಗಿದೆ. ಕೊರೊನಾ ವೈರಸ್‌ನಿಂದ ಕೆಂಗೆಟ್ಟು ಕ್ರೀಡಾಲೋಕವೂ ಈ ಬಾರಿ ಸಾಕಷ್ಟು ಉತ್ತಮ ಕ್ಷಣಗಳನ್ನು ಕಳೆದುಕೊಂಡಿದೆ. ಆದರೆ ಈ ಮಧ್ಯೆ ಕೆಲ ದಿಗ್ಗಜ ಕ್ರೀಡಾಪಟುಗಳು 2020ರಲ್ಲಿ ತಮ್ಮ ಬದುಕಿಗೆ ವಿದಾಯ ಹೇಳಿ ಹೋಗಿದ್ದಾರೆ. ಕ್ರೀಡಾಲೋಕದಲ್ಲಿ ಸುದೀರ್ಘಕಾಲ ಮಿಂಚಿ ಈ ವರ್ಷ ಮರೆಯಾದ ಪ್ರಮುಖ ಆಟಗಾರರು ಆಟಗಾರರು ಯಾರು ಎಂಬುದನ್ನು ಮುಂದೆ ನೋಡೋಣ.

ಕೋಬ್‌ ಬ್ರೆಯೆಂಟ್ : ಬಾಸ್ಕೆಟ್ ಬಾಲ್‌ನ ದಿಗ್ಗಜ ಆಟಗಾರ ಕೋಬ್‌ ಕೋಬ್ರಿಯೆಂಟ್ ತನ್ನ ಮಗಳು ಜಿಗಿ ಜೊತೆಗೆ ಹೆಲಿಕಾಫ್ಟರ್‌ನಲ್ಲಿ ಪ್ರಯಾಣಿಸುವಾಗ ಕ್ಯಾಲಿಫೋರ್ನಿಯಾದಲ್ಲಿ ಅಪಘಾತವಾಗಿ ಪ್ರಾಣವನ್ನು ಕಳೆದುಕೊಂಡರು. ಜನವರಿ 26ರಂದು ನಡೆದ ಈ ಅಪಘಾತ ಕ್ರೀಡಾಲೋಕಕ್ಕೆ ಆಘಾತ ನೀಡಿತ್ತು.

ಟಿ20 ಕ್ರಿಕೆಟ್‌ನ ವರ್ಷದ ತಂಡ: ಅತ್ಯುತ್ತಮ ವರ್ಷದ ಟಿ20ಐ ತಂಡದಲ್ಲಿ ಯಾರಿಗೆಲ್ಲ ಸ್ಥಾನ?ಟಿ20 ಕ್ರಿಕೆಟ್‌ನ ವರ್ಷದ ತಂಡ: ಅತ್ಯುತ್ತಮ ವರ್ಷದ ಟಿ20ಐ ತಂಡದಲ್ಲಿ ಯಾರಿಗೆಲ್ಲ ಸ್ಥಾನ?

ಸರ್ ಎವೆರ್ಟನ್ ವೀಕ್ಸ್‌: ವೆಸ್‌ ಇಮಡೀಸ್‌ನ ಬ್ಯಾಟ್ಸ್‌ಮನ್ ಸರ್ ಎವರ್ಟನ್ ವೀಕ್ ಜುಲೈ 1ರಂದು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ಅವರಿಗೆ 95 ವರ್ಷ ವಯಸ್ಸಾಗಿತ್ತು.

ಚೇತನ್ ಚೌಹಾಣ್: ಭಾರತೀಯ ಕ್ರಿಕೆಟ್‌ನ ಮಾಜಿ ಆಟಗಾರ ಚೇತನ್ ಚೌಹಾಣ್ ಆಗಸ್ಟ್ 16ರಮದು ಕೊನೆಯುಸಿರೆಳೆದರು. ಹೃದಯಾಘಾತಕ್ಕೆ ಒಳಗಾಗಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗದೆ ಚೇತನ್ ಚೌಹಾಣ್ ತಮ್ಮ 76ನೇ ವಯಸ್ಸಿನಲ್ಲಿ ವಿಧಿವಶರಾದರು.

ಡೀನ್ ಜಾನ್ಸ್: ಆಸ್ಟ್ರೇಲಿಯಾ ಕ್ರಿಎಕಟ್‌ನ ಮಾಜಿ ಆಟಗಾರ ಡೀನ್ ಜಾನ್ಸ್ ಸೆಪ್ಟೆಂಬರ್ 24ರಂದು ಮುಂಬೈನಲ್ಲಿ ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟರು. ಐಪಿಎಲ್‌ನ ಕಾಮೆಂಟೇಟರ್ ಆಗಿ ಮುಂಬೈನಿಮದ ಕರ್ತವ್ಯ ನಿರ್ವಹಿಸುತ್ತಿದ್ದ ಡೀನ್ ಜಾನ್ಸ್ 59ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

ಡಿಯಾಗೋ ಮರಡೋನಾ: ಫುಟ್ಬಾಲ್ ಕಂಡ ಸರ್ವಶ್ರೇಷ್ಠ ಆಟಗಾರರಿಲ್ಲಿ ಒಬ್ಬರಾಗಿರುವ ಡಿಯಾಗೊ ಮರಡೋನಾ ಹೃದಯಾಘಾತಕ್ಕೆ ಒಳಗಾಗಿ ತಮ್ಮ 60ನೇ ವಯಸ್ಸಿನಲ್ಲಿ ಮೃತಪಟ್ಟರು. ಇಡೀ ಕ್ರೀಡಾಲೋಕವೇ ಟಿಯಾಗೋ ಅಗಲಿಕೆಗೆ ಆಘಾತವನ್ನು ವ್ಯ್ತಪಡಿಸಿತು.

2020ರ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಗಳು ಹಾಗೂ ಮುಖ್ಯಾಂಶಗಳು2020ರ ಬಿಸಿಸಿಐ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಡೆದ ಚರ್ಚೆಗಳು ಹಾಗೂ ಮುಖ್ಯಾಂಶಗಳು

ಪೌಲೋ ರೋಸ್ಸಿ: ಇಟೆಲಿಯ ವಿಶ್ವಕಪ್ ಹೀರೋ ಪೌಲೋ ದಿಗ್ಗಜ ಫುಟ್ಬಾಲ್ ಆಟಗಾರ ರೋಸ್ಸಿ ಡಿಸೆಂಬರ್ 9 ರಂದು ತಮ್ಮ 64ನೇ ವಯಸ್ಸಿನಲ್ಲಿ ಮೃತಪಟ್ಟರು. ಇಟಾಲಿಯನ್ ಟಿವಿ ಚಾನೆಲ್ ರಾಯ್ ಸ್ಪೋರ್ಟ್ಸ್‌ ರೋಸ್ಸಿ "ಗುಣಪಡಿಸಲಾಗದ ಖಾಯಿಲೆ"ಯಿಂದ ಮೃತಪಟ್ಟರು ಎಂದು ವರದಿ ಮಾಡಿತ್ತು.

Story first published: Friday, December 25, 2020, 16:30 [IST]
Other articles published on Dec 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X