ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

FTX ಕ್ರಿಪ್ಟೋ ಕಪ್‌: ನಂ.1 ಮ್ಯಾಗ್ನಸ್ ಕಾರ್ಲ್‌ಸನ್‌ರನ್ನು ಸೋಲಿಸಿದ ಭಾರತದ ಗ್ರ್ಯಾಂಡ್‌ಮಾಸ್ಟರ್ ಪ್ರಗ್ನಾನಂದ

FTX Crypto Cup: Indian Grandmaster R Praggnanandhaa Defeats No.1 Magnus Carlsen In Final Round

ಸೋಮವಾರ (ಆಗಸ್ಟ್ 22) ನಡೆದ ಎಫ್‌ಟಿಎಕ್ಸ್ ಕ್ರಿಪ್ಟೋ ಕಪ್‌ನ ಅಂತಿಮ ಸುತ್ತಿನಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್‌ರನ್ನು 4-2 ಅಂತರದಿಂದ ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಗ್ನಾನಂದ ಸೋಲಿದರು.

ಫಿಫಾದ ಎಲ್ಲಾ ಷರತ್ತುಗಳಿಗೂ ಕೇಂದ್ರ ಅಸ್ತು; ಎಐಎಫ್ಎಫ್ ಬ್ಯಾನ್ ಹಿಂತೆಗೆಸಲು ಪ್ಲಾನ್ಫಿಫಾದ ಎಲ್ಲಾ ಷರತ್ತುಗಳಿಗೂ ಕೇಂದ್ರ ಅಸ್ತು; ಎಐಎಫ್ಎಫ್ ಬ್ಯಾನ್ ಹಿಂತೆಗೆಸಲು ಪ್ಲಾನ್

ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಆರ್. ಪ್ರಗ್ನಾನಂದ ಅವರು ಬ್ಲಿಟ್ಜ್ ಟೈ ಬ್ರೇಕ್‌ಗಳಲ್ಲಿ ಎರಡು ಸೇರಿದಂತೆ ಮೂರು ನೇರ ಗೇಮ್‌ಗಳನ್ನು ಗೆದ್ದರು. ಆದಾಗ್ಯೂ, ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧದ ಗೆಲುವಿನ ಹೊರತಾಗಿಯೂ, 17 ವರ್ಷ ವಯಸ್ಸಿನ ಆರ್. ಪ್ರಗ್ನಾನಂದ ಅಂತಿಮ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

ಹೆಚ್ಚಿನ ಅಂಕಗಳ ಆಧಾರದ ಮೇಲೆ ನಾರ್ವೇಜಿಯನ್ ಮ್ಯಾಗ್ನಸ್ ಕಾರ್ಲ್‌ಸನ್ ಅಗ್ರಸ್ಥಾನ ಪಡೆದು ಬಹುಮಾನವನ್ನು ಗೆದ್ದರು. ಅವರು 16 ಮ್ಯಾಚ್ ಪಾಯಿಂಟ್‌ಗಳನ್ನು ಪಡೆದರೆ, ಭಾರತೀಯ ಗ್ರ್ಯಾಂಡ್‌ಮಾಸ್ಟರ್ 15 ಅಂಕಗಳನ್ನು ಗಳಿಸಿದರು.

IND vs ZIM: 3ನೇ ಏಕದಿನ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್IND vs ZIM: 3ನೇ ಏಕದಿನ ಪಂದ್ಯದ ಟಾಸ್ ವರದಿ, ಆಡುವ 11ರ ಬಳಗ & ಲೈವ್ ಸ್ಕೋರ್

"ನಾನು ಇಡೀ ದಿನ ಕೆಟ್ಟದಾಗಿ ಆಡುತ್ತಿದ್ದೇನೆ, ಆದರೆ ಈಗ ನಾನು ಅರ್ಹವಾದ ಫಲಿತಾಂಶಗಳನ್ನು ಪಡೆಯುತ್ತಿದ್ದೇನೆ. ಸೋಲುವುದು ಎಂದಿಗೂ ಒಳ್ಳೆಯದಲ್ಲ, ಆದರೆ ಇದು ಉತ್ತಮ ಸಮಯ," ಎಂದು ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ಪಂದ್ಯದ ನಂತರ ಹೇಳಿದರು.

ಭಾರತದ ಗ್ರ್ಯಾಂಡ್ ಮಾಸ್ಟರ್ ನಾಲ್ಕನೇ ಗೇಮ್ ಅನ್ನು ಗೆದ್ದನು

ಭಾರತದ ಗ್ರ್ಯಾಂಡ್ ಮಾಸ್ಟರ್ ನಾಲ್ಕನೇ ಗೇಮ್ ಅನ್ನು ಗೆದ್ದನು

ಅಲಿರೆಜಾ ಫಿರೌಜ್ಜಾ, ಮತ್ತೊಬ್ಬ ಹೆಚ್ಚು ರೇಟಿಂಗ್ ಪಡೆದ ಹದಿಹರೆಯದ ಆಟಗಾರನಾದರು. ಅವರು ಕೂಡ 15 ಅಂಕಗಳೊಂದಿಗೆ ಪಂದ್ಯಾವಳಿ ಮುಗಿಸಿದರು, ಆದರೆ ಅವರು ಮೊದಲು ಪ್ರಗ್ನಾನಂದ ವಿರುದ್ಧದ ಘರ್ಷಣೆಯಲ್ಲಿ ಸೋತಿದ್ದರಿಂದ ಮೂರನೇ ಸ್ಥಾನಕ್ಕೆ ತೃಪ್ತಿಪಡಬೇಕಾಯಿತು. ಕಾರ್ಲ್‌ಸಸನ್-ಪ್ರಗ್ನಾನಂದ ಪಂದ್ಯದ ಮೊದಲ ಎರಡು ಪಂದ್ಯಗಳು ಡ್ರಾ ಆಗುವ ಮೊದಲು ವಿಶ್ವ ನಂ.1 ಮೂರನೇ ಪಂದ್ಯವನ್ನು ಗೆದ್ದುಕೊಂಡಿದ್ದರು.

ಘಟನೆಗಳ ಅಚ್ಚರಿಯ ತಿರುವಿನಲ್ಲಿ, ಭಾರತದ ಗ್ರ್ಯಾಂಡ್ ಮಾಸ್ಟರ್ ನಾಲ್ಕನೇ ಗೇಮ್ ಅನ್ನು ಗೆದ್ದು ಪಂದ್ಯವನ್ನು ಟೈ-ಬ್ರೇಕ್‌ಗೆ ತಳ್ಳಿದರು. ಟೈ-ಬ್ರೇಕ್‌ನಲ್ಲಿ ಎರಡೂ ಗೇಮ್‌ಗಳನ್ನು ಗೆದ್ದು ನಾರ್ವೆಯ ಆಟಗಾರ ಮ್ಯಾಗ್ನಸ್ ಕಾರ್ಲ್‌ಸನ್‌ಗೆ ಆಘಾತ ನೀಡಿದರು. ಆರ್. ಪ್ರಗ್ನಾನಂದ ಈ ವರ್ಷ ಅದ್ಭುತ ಫಾರ್ಮ್‌ನಲ್ಲಿದ್ದಾರೆ ಮತ್ತು ಈ ಹಿಂದೆ ಆನ್‌ಲೈನ್ ಈವೆಂಟ್‌ಗಳಲ್ಲಿ ವಿಶ್ವ ಚಾಂಪಿಯನ್‌ನನ್ನು ಎರಡು ಬಾರಿ ಸೋಲಿಸಿದ್ದರು.

ಭಾರತ ‘ಬಿ’ ತಂಡದಲ್ಲಿ ಕಂಚಿನ ಪದಕ ಪಡೆಯುವಲ್ಲಿ ನಿರ್ಣಾಯಕ ಪಾತ್ರ

ಭಾರತ ‘ಬಿ’ ತಂಡದಲ್ಲಿ ಕಂಚಿನ ಪದಕ ಪಡೆಯುವಲ್ಲಿ ನಿರ್ಣಾಯಕ ಪಾತ್ರ

ಇತ್ತೀಚೆಗೆ ಚೆನ್ನೈನಲ್ಲಿ ನಡೆದ 44ನೇ ಚೆಸ್ ಒಲಿಂಪಿಯಾಡ್‌ನಲ್ಲಿ ಭಾರತ 'ಬಿ' ತಂಡದಲ್ಲಿ ಕಂಚಿನ ಪದಕ ಪಡೆಯುವಲ್ಲಿ ಆರ್. ಪ್ರಗ್ನಾನಂದ ನಿರ್ಣಾಯಕ ಪಾತ್ರ ವಹಿಸಿದ್ದರು. "ಕಳೆದ ಕೆಲವು ದಿನಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಬಹುದೆಂದು ನಾನು ಭಾವಿಸುತ್ತೇನೆ. ಆದರೆ ಒಟ್ಟಾರೆ 2ನೇ ಸ್ಥಾನ ಉತ್ತಮವಾಗಿದೆ," ಎಂದು ಮ್ಯಾಗ್ನಸ್ ಕಾರ್ಲ್‌ಸನ್‌ ವಿರುದ್ಧದ ಆಟದ ನಂತರ ಆರ್. ಪ್ರಗ್ನಾನಂದ ಹೇಳಿದರು.

ಪ್ರಗ್ನಾನಂದ ಅವರು ತಮ್ಮ ಅಭಿಯಾನವನ್ನು ವಿಶ್ವದ ನಂ.4 ಫಿರೌಜ್ಜಾ ವಿರುದ್ಧ ವಿಜಯದೊಂದಿಗೆ ಪ್ರಾರಂಭಿಸಿದರು ಮತ್ತು ಅನೀಶ್ ಗಿರಿ ಮತ್ತು ಲೆವೊನ್ ಅರೋನಿಯನ್ ವಿರುದ್ಧವೂ ಗೆಲುವು ಸಾಧಿಸಿದರು.

ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಬ್ಲಿಟ್ಜ್ ಟೈಬ್ರೇಕ್‌ನಲ್ಲಿ ಗೆದ್ದರು

ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಬ್ಲಿಟ್ಜ್ ಟೈಬ್ರೇಕ್‌ನಲ್ಲಿ ಗೆದ್ದರು

"ಕೊನೆಯಲ್ಲಿ ಅದ್ಭುತ ಮುಕ್ತಾಯ, ಆರ್. ಪ್ರಗ್ನಾನಂದ ಅವರು ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಬ್ಲಿಟ್ಜ್ ಟೈಬ್ರೇಕ್‌ನಲ್ಲಿ ಗೆದ್ದಿದ್ದಾರೆ. ಎಫ್‌ಟಿಎಕ್ಸ್ ಕ್ರಿಪ್ಟೋ ಕಪ್‌ನ ನಿರ್ಣಾಯಕ ಘಟ್ಟಗಳಲ್ಲಿ ಉತ್ತಮ ರಕ್ಷಣಾತ್ಮಕ ಕೌಶಲ್ಯಗಳು, ಕೆಲವು ಉತ್ತಮ ಆರಂಭಿಕ ಸಿದ್ಧತೆಗಳು, ಕೆಲವು ಕೆಟ್ಟ ನಿರ್ಧಾರಗಳು, ಒಟ್ಟಾರೆಯಾಗಿ ಅತ್ಯಂತ ತೃಪ್ತಿದಾಯಕವಾಗಿದೆ," ಎಂದು ಆರ್. ಪ್ರಗ್ನಾನಂದ ಕೋಚ್ ಆರ್.ಬಿ. ರಮೇಶ್ ಟ್ವೀಟ್ ಮಾಡಿದ್ದಾರೆ.

ಅಂತಿಮ ಸುತ್ತಿನ ಇತರ ಪಂದ್ಯಗಳಲ್ಲಿ ಅಲಿರೆಜಾ ಫಿರೋಜ್ಜಾ 2.5-1.5 ರಲ್ಲಿ ಅರೋನಿಯನ್ ಅವರನ್ನು ಸೋಲಿಸಿದರು, ಕ್ವಾಂಗ್ ಲೀಮ್ ಲೆ (ಚೀನಾ) ಹ್ಯಾನ್ಸ್ ನಿಮನ್ ಅವರನ್ನು ಸೋಲಿಸಿದರು. ಆದರೆ ಪೋಲೆಂಡ್‌ನ ಜಾನ್-ಕ್ರಿಸ್ಟೋಫ್ 2.5-0.5ರಿಂದ ಭಾರತದ ಅನೀಶ್ ಗಿರಿ ಅವರನ್ನು ಸೋಲಿಸಿದರು.

ಎಂಟು ಆಟಗಾರರ ಆಲ್-ಪ್ಲೇ-ಆಲ್ ಪಂದ್ಯಾವಳಿಯು ಚಾಂಪಿಯನ್ಸ್ ಚೆಸ್ ಟೂರ್‌ನ ಅಮೇರಿಕನ್ ಫೈನಲ್ ಆಗಿತ್ತು. ಪ್ರತಿ ಪಂದ್ಯವನ್ನು ನಾಲ್ಕು ಕ್ಷಿಪ್ರ ಆಟಗಳಲ್ಲಿ ಆಡಲಾಯಿತು, ಟೈಬ್ರೇಕ್‌ಗಳೊಂದಿಗೆ ಬ್ಲಿಟ್ಜ್ 2-2 ಡ್ರಾ ಸಾಧಿಸಿದರು.

ಅಂತಿಮ ಸ್ಥಾನಗಳು ಮತ್ತು ಮ್ಯಾಚ್ ಪಾಯಿಂಟ್‌ಗಳು

ಅಂತಿಮ ಸ್ಥಾನಗಳು ಮತ್ತು ಮ್ಯಾಚ್ ಪಾಯಿಂಟ್‌ಗಳು

1. ಮ್ಯಾಗ್ನಸ್ ಕಾರ್ಲ್‌ಸೆನ್- 16

2. ಆರ್ ಪ್ರಗ್ನಾನಂದ- 15

3. ಅಲಿರೆಜಾ ಫಿರೋಜ್ಜಾ- 15

4. ಲೀಮ್ ಲೆ- 12

5. ಜಾನ್-ಕ್ರಿಸ್ಟೋಫ್ ದುಡಾ- 11

6. ಲೆವೊನ್ ಅರೋನಿಯನ್- 8

7. ಅನೀಶ್ ಜಿ. ಹ್ಯಾನ್ಸ್ ನೀಮನ್- 0

Story first published: Monday, August 22, 2022, 13:37 [IST]
Other articles published on Aug 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X