ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟಿ20 ಪಂದ್ಯ ಸೋಲಲು ಧೋನಿ ಕಾರಣ : ಗಂಗೂಲಿ

By Mahesh

ಬರ್ಮಿಂಗ್ ಹ್ಯಾಂ, ಸೆ.8: ಇಂಗ್ಲೆಂಡ್ ಪ್ರವಾಸವನ್ನು ಸೋಲಿನ ಮೂಲಕ ಟೀಂ ಇಂಡಿಯಾ ಮುಗಿಸಿದೆ. ಏಕೈಕ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಸೋಲಲು ಧೋನಿ ಅವರ ಅತಿಯಾದ ಆತ್ಮವಿಶ್ವಾಸವೇ ಕಾರಣ ಎಂದು ಮಾಜಿ ನಾಯಕ ಸೌರವ್ ಗಂಗೂಲಿ ಕಿಡಿಕಾರಿದ್ದಾರೆ.

ಏಕೈಕ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ನೀಡಿದ್ದ ಬೃಹತ್ ಮೊತ್ತದ ಎದುರು ಭಾರತ ವೀರೋಚಿತ ಸೋಲನುಭವಿಸಿತು. ಅದರೆ, ಕೊನೆಯ ಓವರ್ ನಲ್ಲಿ ಸಿಂಗಲ್ಸ್ ತೆಗೆದುಕೊಳ್ಳದೆ ಧೋನಿ ಕ್ರೀಸ್ ನಲ್ಲೇ ಉಳಿದುದ್ದು ಈಗ ವಿವಾದಕ್ಕೆ ಕಾರಣವಾಗಿದೆ.



ಅದರೆ, ಧೋನಿ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.ಕೊನೆಯ ಓವರ್ ನಲ್ಲಿ ಭಾರತಕ್ಕೆ ಗೆಲ್ಲಲು 17 ರನ್ ಬೇಕಿತ್ತು. ಕೊನೆ ಎಸೆತದಲ್ಲಿ 5ರನ್ ಬೇಕಿತ್ತು. ಸಿಕ್ಸರ್ ಕಿಂಗ್ ಧೋನಿ ಸಿಕ್ಸ್ ಅಥವಾ ಚೌಂಡರಿ ಹೊಡೆಯಲು ಆಗದೆ ಪೆಚ್ಚುಮೋರೆ ಹಾಕಿಕೊಂದು ಪೆವಿಲಿಯನ್ ಸೇರಿದರು. ಇದಕ್ಕೂ ಮುನ್ನ ಧೋನಿ 2 ಸಿಂಗಲ್ಸ್ ಪಡೆಯಲಿಲ್ಲ. ಅಂತಿಮವಾಗಿ ಭಾರತ ಪಂದ್ಯವನ್ನು 3 ರನ್ ನಿಂದ ಸೋತಿತು.

Ganguly blasts Dhoni, says India lost T20I because of captain

ಆದರೆ, ಧೋನಿ ಆಟವನ್ನು ಖಂಡಿಸಿರುವ ಗಂಗೂಲಿ ಅಂಬಾಟಿ ರಾಯುಡು ಅವರಿಗೆ ಟಿ20 ಮಾದರಿಯಲ್ಲಿ ಅಂಥ ಅನುಭವ ಇಲ್ಲದೆ ಇರಬಹುದು. ಅದರೆ, ಏಕದಿನ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿ ಉತ್ತಮ ಲಯದಲ್ಲಿದ್ದರು. ನಾಯಕ ಧೋನಿಗೆ ತನ್ನ ಆಟಗಾರರ ಸಾಮರ್ಥ್ಯದ ಮೇಲೆ ನಂಬಿಕೆ ಇಲ್ಲವಾದರೆ ಹೇಗೆ? ನಾನು ಕ್ರೀಸ್ ನಲ್ಲಿದ್ದಾರೆ ಖಂಡಿತವಾಗಿಯೂ ಸಿಂಗಲ್ಸ್ ತೆಗೆದುಕೊಳ್ಳುತ್ತಿದೆ ಎಂದು ಸೌರವ್ ಗಂಗೂಲಿ ಅವರು ಸ್ಟಾರ್ ಸ್ಪೋರ್ಟ್ ಜೊತೆ ಮಾತನಾಡುತ್ತಾ ಹೇಳಿದ್ದಾರೆ.

ಧೋನಿ ಕೂಡಾ ಎಲ್ಲರಂತೆ ಮನುಷ್ಯನಾಗಿದ್ದು, ತಪ್ಪು ಎಸಗುವುದು ಸಹಜ. ಸಚಿನ್ ತೆಂಡೂಲ್ಕರ್ ಕೂಡಾ ತಪ್ಪು ಎಸಗಿದ್ದರು. ವಿವಿಯನ್ ರಿಚರ್ಡ್ ಕೂಡಾ ಇದರಿಂದ ಹೊರತಲ್ಲ. ಅದರೆ, ಧೋನಿ ಮಾಡಿದ್ದು ತಪ್ಪು ಎಂದು ಗಂಗೂಲಿ ವಾದಿಸಿದ್ದಾರೆ.

ಕೊನೆಯ ಓವರ್ ನಲ್ಲಿಧೋನಿ ತಾನೇ ಗೆಲ್ಲಿಸುವ ಜವಾಬ್ದಾರಿ ಹೊತ್ತುಕೊಂಡಿದ್ದು ಸರಿ. ಮೊದಲ ಎಸೆತದಲ್ಲಿನಲ್ಲಿ 6, ಎರಡನೇ ಎಸೆತದಲ್ಲಿ 2 ರನ್ನುಗಳಗಳಿಸಿದರು. ಇನ್ನು 4 ಎಸೆತಗಳಲ್ಲಿ 9 ರನ್ ಅಗತ್ಯವಿತ್ತು. ಧೋನಿಯ ಇತಿಹಾಸ ನೋಡಿದವರಿಗೆ ಭಾರತದ ಗೆಲುವು ಖಾತ್ರಿ ಎನಿಸಿತ್ತು. ಆದರೆ, ನಡೆದಿದ್ದೇ ಬೇರೆ. ಟಿ20 ಪಂದ್ಯದಲ್ಲಿ ಭಾರತ ಸೋಲು ಕಂಡಿತು.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X