ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

86 ಅಡಿ ಎತ್ತರದ ಅಲೆಯ ಮೇಲೆ ಸವಾರಿ ಮಾಡಿ ಗಿನ್ನಿಸ್ ದಾಖಲೆ ಬರೆದ ಜರ್ಮನಿಯ ಸರ್ಫರ್ ಸೆಬಾಸ್ಟಿಯನ್: ವಿಡಿಯೋ

German Surfer Sebastian Steudtner breaks Guinness World Record By Riding 86-Feet Wave: video
Photo Credit: Guinness World Record

ಜರ್ಮನಿಯ ಸರ್ಫರ್ ಸೆಬಾಸ್ಟಿಯನ್ ಸ್ಟೆಯುಟ್ನರ್ ಅತಿ ಎತ್ತರದ ಅಲೆಯ ಮೇಲೆ ಸರ್ಫಿಂಗ್ ಮಾಡುವ ಮೂಲಕ ಗಿನ್ನಿಸ್ ವಿಶ್ವದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ. 86 ಅಡಿ ಎತ್ತರದ ಅಲೆಯ ಮೇಲೆ ರೈಡಿಂಗ್ ಮಾಡಿದ ಜರ್ಮನಿಯ ಸೆಬಾಸ್ಟಿಯನ್ ರೋಮಾಂಚನಕಾರಿ ಸಾಹಸ ಮಾಡಿ ದಾಖಲೆಯನ್ನು ಬರೆದಿದ್ದಾರೆ ಎಂದು ಗಿನ್ನೀಸ್ ವಿಶ್ವದಾಖಲೆ ಘೋಷಿಸಿದೆ.

ಪೋರ್ಚುಗಲ್‌ನ ನಝರೆ ಪ್ರಾಂತ್ಯದ ಪ್ರಯಡೋ ನೋರ್ಟೆ ಎಂಬಲ್ಲಿ 2020ರ ಅಕ್ಟೋಬರ್‌ನಲ್ಲಿ 86 ಅಡಿ ಎತ್ತರದ ಅಲೆಯ ಮೇಲೆ ಸರ್ಫಿಂಗ್ ಮಾಡಿದ್ದರು. ಈ ಸಾಧನೆಗಾಗಿ 2021ರ ರೆಡ್ ಬುಲ್ ಬೃಹತ್ ಅಲೆ ಪುರಸ್ಕಾರಕ್ಕೆ ಕೂಡ ಸೆಬಾಸ್ಟಿಯನ್ ಸ್ಟೆಯುಟ್ನರ್ ಪಾತ್ರರಾಗಿದ್ದಾರೆ. ಇದೀಗ 2022ರ ಮೇ 24ರಂದು ನಡೆದ ವಿಶೇಷ ಕಾರ್ಯಕ್ರಮದಲ್ಲಿ ಸೆಬಾಸ್ಟಿಯನ್ ಸ್ಟೆಯುಟ್ನರ್ ಗಿನ್ನಿಸ್ ವಿಶ್ವದಾಖಲೆ ಬರೆದಿರುವುದನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.

ಏನಿದು ಸರ್ಫಿಂಗ್: ಸಮುದ್ರದ ಅಲೆಗಳ ಮೇಲೆ ಮಾಡುವ ಸಾಹಸ ಕ್ರೀಡೆಯೇ ಈ ಸರ್ಫಿಂಗ್. ಬೃಹತ್ ಅಲೆಗಳಿಗೆ ಸವಾಲಿಡ್ಡುವಂತೆ ಸರ್ಫ್‌ಬೋರ್ಡ್‌ನಲ್ಲಿ ಬ್ಯಾಲೆನ್ಸ್ ಮಾಡುತ್ತಾ ಸಮುದ್ರದ ಗಾಳಿಯ ವೇಗ ಹಾಗೂ ಅಲೆಗಳ ವೇಗವನ್ನು ಉಪಯೋಗಿಸಿಕೊಂಡು ಮಾಡುವ ಸಾಹಸ ಇದಾಗಿದೆ.

ಇನ್ನು ಈ ದಾಖಲೆ ಬರೆದಿರುವ ಸೆಬಾಸ್ಟಿಯನ್ ಸ್ಟೆಯುಟ್ನರ್‌ಗೆ 37 ವರ್ಷ ವಯಸ್ಸು. ತಮ್ಮ ಬದುಕಿನ ಬಹುತೇಕ ಸಮಯವನ್ನು ಸರ್ಫಿಂಗ್‌ಗಾಗಿಯೇ ಕಳೆದಿದ್ದಾರೆ ಎಂದು ಗಿನ್ನಿಸ್ ವಿಶ್ವದಾಖಲೆ ಮಾಹಿತಿ ನೀಡಿದೆ.ಕೇವಲ 13 ವರ್ಷದವರಾಗಿದ್ದಾಗ ಹವಾಯಿಗೆ ತೆರಳಲು ನಿರ್ಧರಿಸಿದ್ದ ಅವರು ಮೂರು ವರ್ಷಗಳಲ್ಲಿ ಪೋಚಕರ ಮನವೊಲಿಸಿ 16 ನೇ ವಯಸ್ಸಿನಲ್ಲಿ ಅವರು ಸರ್ಫಿಂಗ್‌ಅನ್ನು ವೃತ್ತಿ ಜೀವನವನ್ನಾಗಿ ಸ್ವೀಕರಿಸಿದ್ದಾರೆ.

Story first published: Friday, May 27, 2022, 9:41 [IST]
Other articles published on May 27, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X