ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತದ ಹೆಮ್ಮೆಯ ಈಜುಗಾರ್ತಿ ಆರತಿ ಸಹಾಗೆ ಗೂಗಲ್‌ನಿಂದ ಗೌರವ

Google honours Indian swimmer Arati Saha through a doodle

ನವದೆಹಲಿ: ಇಂಗ್ಲೆಂಡ್‌ನ ಸಂಪೂರ್ಣ ಕಾಲುವೆಗಳನ್ನು ಈಜಿದ ಏಷ್ಯಾದ ಮೊದಲ ಮಹಿಳಾ ಈಜುಗಾರ್ತಿಯಾಗಿ ದಾಖಲೆ ಬರೆದಿದ್ದ ಆರತಿ ಸಹಾ ಅವರನ್ನು ಗೂಗಲ್ ಸ್ಮರಿಸಿಕೊಂಡಿದೆ. ಸೆಪ್ಟೆಂಬರ್‌ 24ಕ್ಕೆ ಆರತಿ ಅವರದ್ದು 80ನೇ ಜನ್ಮದಿನಾಚರಣೆಯಾಗಿದ್ದು, ಗೂಗಲ್ ಸಂಸ್ಥೆ ಆರತಿ ಹೆಸರಿನಲ್ಲಿ ಡೂಡಲ್ ರಚಿಸುವ ಮೂಲಕ ಭಾರತೀಯ ಕ್ರೀಡಾ ದಂತಕತೆಯನ್ನು ನೆನಪಿಸಿದೆ.

ಬೆಂಗಳೂರು 'ತುಂಬಾ ಸ್ಪೆಷಲ್' ಯಾಕೆಂದು ಸ್ವಾರಸ್ಯಕರ ಕಾರಣ ಹೇಳಿದ ಫಿಂಚ್!ಬೆಂಗಳೂರು 'ತುಂಬಾ ಸ್ಪೆಷಲ್' ಯಾಕೆಂದು ಸ್ವಾರಸ್ಯಕರ ಕಾರಣ ಹೇಳಿದ ಫಿಂಚ್!

1959ರಂದು ಆರತಿ ಸಹಾ ಅವರು ಇಂಗ್ಲೆಂಡ್‌ನ ಎಲ್ಲಾ ಕಾಲುವೆಗಳನ್ನು ಈಜಿ ದಾಖಲೆ ನಿರ್ಮಿಸಿದ್ದರು. 67.5 ಕಿ.ಮೀ. ದೂರ ಇಂಗ್ಲಿಷ್‌ ಎಲ್ಲಾ ಕಾಲುವೆಗಳನ್ನು ಆರತಿ ಅವರು 16 ಗಂಟೆ 20 ನಿಮಿಷಗಳಲ್ಲಿ ಈಜುವ ಮೂಲಕ ಜಗತ್ತಿನ ಗಮನ ಸೆಳೆದಿದ್ದರು.

ಆರ್‌ಸಿಬಿ ವಿರುದ್ಧ ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್ ಗೇಲ್‌ ಕಣಕ್ಕಿಳಿಸುತ್ತಾ ಪಂಜಾಬ್?ಆರ್‌ಸಿಬಿ ವಿರುದ್ಧ ಆರ್‌ಸಿಬಿ ಮಾಜಿ ಬ್ಯಾಟ್ಸ್‌ಮನ್ ಗೇಲ್‌ ಕಣಕ್ಕಿಳಿಸುತ್ತಾ ಪಂಜಾಬ್?

ಸಹಾ ದಾಖಲೆ ನಿರ್ಮಿಸಿದ್ದು ಎರಡನೇ ಅವಧಿಯಲ್ಲಿ. ಅದಕ್ಕೂ ಮೊದಲೂ ಆರತಿ ಇಂಗ್ಲಿಷ್ ಕಾಲುವೆಗಳನ್ನು ಈಜಿ ಮುಗಿಸಲು ಯತ್ನಿಸಿದ್ದರು. ಅಂದ್ಹಾಗೆ ಪದ್ಮಶ್ರೀ ಪ್ರಶಸ್ತಿ ಪಡೆದ ಭಾರತದ ಮೊದಲ ಮಹಿಳೆಯೆಂಬ ಹಿರಿಮೆಯೂ ಆರತಿಗಿದೆ.

4ನೇ ವರ್ಷದವರಾಗಿದ್ದಾಗ ಈಜಿನಲ್ಲಿ ತೊಡಗಿಕೊಂಡ ಸಹಾ, ಆ ಬಳಿಕ 1952ರಲ್ಲಿ ಭಾರತವನ್ನು ಪ್ರತಿನಿಧಿಸಿ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು. 1940 ಸೆಪ್ಟೆಂಬರ್ 24ರಂದು ಕೋಲ್ಕತ್ತಾದಲ್ಲಿ ಜನಿಸಿರುವ ಆರತಿ ಕೋಲ್ಕತ್ತಾದಲ್ಲೇ 1994 ಆಗಸ್ಟ್ 23ರಂದು ಕೊನೆಯುಸಿರೆಳೆದರು.

Story first published: Thursday, September 24, 2020, 15:49 [IST]
Other articles published on Sep 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X