ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

"ಒನ್ ಇಂಡಿಯಾ" ವರದಿಗೆ ದಾನಿಗಳ ಸ್ಪಂದನೆ; ತೈವಾನ್ ಗೆ ಹಾರಲಿದೆ ಹಳ್ಳಿ ಪ್ರತಿಭೆ

By ಚಿದಾನಂದ ಮಸ್ಕಲ್
half marathon player attending international tournament

ಚಿತ್ರದುರ್ಗ : ಈ ಹುಡುಗನ ಹೆಸರು ನಾಗರಾಜ್ ಬದುಕಿನಲ್ಲಿ ಸಾಧಿಸುವ ಹಂಬಲ. ಪದವಿ ವಿದ್ಯಾಬ್ಯಾಸ ಮಾಡಿಕೊಂಡು, ಕಲ್ಯಾಣ ಮಂಟಪಗಳಲ್ಲಿ ನಡೆಯುವ ಮದುವೆ ಸಮಾರಂಭಗಳಲ್ಲಿ ಊಟ ಬಡಿಸುವುದು, ಗಾರೆ ಕೆಲಸ ಮಾಡಿಕೊಂಡು ಓದುತಿದ್ದಾನೆ. ವಾಸಿಸಲು ಯೋಗ್ಯವಾದ ಮನೆ ಇಲ್ಲ, ಬಡತನ ಎಂಬ ನಾಲ್ಕಕ್ಷರ ಈತನನ್ನು ಕಾಡುತ್ತಿದೆ. ಆದರೂ ಸಹ ಕಿತ್ತು ತಿನ್ನುವ ಬಡತನದಲ್ಲೂ ಅಂತರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಳೆದ ಬಾರಿ ಪದಕ ಗೆದ್ದು ಬಂದಿದ್ದರು. ಆದರೆ ಹಣಕಾಸಿನ ತೊಂದರೆಯಿಂದ ಈ ಬಾರಿ ಟೂರ್ನಿಯಲ್ಲಿ ಭಾಗವಹಿಸುವುದೇ ಅನುಮಾನವಾಗಿತ್ತು.

ಈತನ ಪರಿಸ್ಥಿತಿಯನ್ನು ಗಮನಿಸಿದ ಒನ್ ಇಂಡಿಯಾ "ಅಂತರಾಷ್ಟ್ರೀಯ ಚಿನ್ನ ಗೆದ್ದ ಬಡ ಕ್ರೀಡಾಪಟುವಿಗೆ ನೆರವಿನ ಕೈಗಳು ಬೇಕಿವೆ ಎಂಬ ಶೀರ್ಷಿಕೆ" ಅಡಿಯಲ್ಲಿ ಕಳೆದ ಸೆಪ್ಟಂಬರ್ 26 ರಂದು ವರದಿ ಮಾಡಿತ್ತು. ವರದಿಯನ್ನು ಗಮನಿಸಿದ ಹಲವಾರು ಓದುಗರು ಈ. ನಾಗರಾಜನಿಗೆ ಸಹಾಯದ ನೆರವಿನ ಹಸ್ತ ಚಾಚಿದ್ದಾರೆ. ಇವರೆಲ್ಲರ ನೆರವಿನ ಅಮೃತ ಹಸ್ತದಿಂದ ಇಂಟರ್ ನ್ಯಾಷಿನಲ್ ಅಥ್ಲೇಟಿಕ್ಸ್ ಅಸೋಶಿಏಷಿಯನ್ ಇವರ ನೇತೃತ್ವದಲ್ಲಿ ದಿನಾಂಕ 15 /12/ 2019 ರಿಂದ 17 /12 /2019 ರವರೆಗೆ ತೈವನ್ ದೇಶದ ತೈಪೆ ಸಿಟಿಯಲ್ಲಿ ನಲ್ಲಿ ನಡೆಯಲಿರುವ "ಹಾಫ್ ಮ್ಯಾರಥನ್" ( 21 k.m.) ಸ್ಪರ್ಧೆಗೆ ಹಳ್ಳಿಹಕ್ಕಿ ಹಾರಲಿದೆ.

ಸುದ್ದಿಗಾರರ ಜೋತೆ ಮಾತನಾಡಿದ ನಾಗರಾಜ್ , ಕಳೆದ ಬಾರಿ ನೇಪಾಳದಲ್ಲಿ ಅಥ್ಲೇಟಿಕ್ಸ್ ನಲ್ಲಿ ಭಾಗವಹಿಸಿ ಚಿನ್ನ ಗೆದ್ದು ಬಂದಿದ್ದೆ. ಈ ಬಾರಿ ತೈವಾನ್ ನಲ್ಲಿ ಭಾಗವಹಿಸುತಿದ್ದೇನೆ. ನಾನು ಆರ್ಥಿಕವಾಗಿ ಹಿಂದುಳಿದಿದ್ದು ಒನ್ ಇಂಡಿಯಾ ಕನ್ನಡ " ಬಡ ಕ್ರೀಡಾಪಟುವಿಗೆ ನೆರವಿನ ಕೈಗಳು ಬೇಕಿವೆ" ಅಂತ ನನ್ನ ಬಗ್ಗೆ ವರದಿ ಮಾಡಿತ್ತು. ವರದಿಯಿಂದ ಅನೇಕರು ನನಗೆ ಸಹಾಯದ ಹಸ್ತ ಚಾಚಿದ್ದಾರೆ. ಹಾಗಾಗಿ ವರದಿ ಮಾಡಿದ ಓನ್ ಇಂಡಿಯಾ ಕನ್ನಡ ನ್ಯೂಸ್ ಮತ್ತು ಸಹಾಯ ಮಾಡಿದ ಎಲ್ಲರಿಗೂ ನಾನು ಯಾವಾಗಲು ಅಭಾರಿಯಾಗಿದ್ದು, ಇವರೆಲ್ಲರ ಸಹಾಯದಿಂದ ಹಾಗೂ ಆರ್ಶಿವಾದಿಂದ ತೈವನ್ ನಡೆಯುವ ಆಫ್ ಮ್ಯಾರಾಥನ್ ಸ್ಪರ್ಧೆಯಲ್ಲಿ ಭಾಗವಹಿಸುತಿದ್ದೇನೆ. ಮುಂದಿನ ಕ್ರೀಡೆಯಲ್ಲಿ ಭಾಗವಸುವುದಕ್ಕೆ ಎಲ್ಲರ ಸಹಕಾರ ಇರಲಿ ಎಂದರು. ಇದರ ಜೊತೆಗೆ ಹಲವಾರು ಅಭಿಮಾನಿಗಳು ಹಾರೈಸಿದ್ದು ಒನ್ ಇಂಡಿಯಾ ಕನ್ನಡ ಕಡೆಯಿಂದಲೂ ನಾಗರಾಜ್‌ಗೆ ಆಲ್ ದಿ ಬೆಸ್ಟ್‌

ನೆರವು ಚಾಚಿದ ಕೈಗಳು.

ಬಡ ಪ್ರತಿಭೆಯನ್ನು ಗುರುತಿಸಲು ಈ. ನಾಗರಾಜನಿಗೆ ಹಲವಾರು ಜನ ನೇರವು ನೀಡಿದ್ದಾರೆ.
1). ದೊಡ್ಡ ಮಲ್ಲಯ್ಯ ಜಿಲ್ಲಾ ಕಸಾಪ ಅಧ್ಯಕ್ಷರು ಚಿತ್ರದುರ್ಗ 15.000.
2). ಚಿತ್ರದುರ್ಗ ಗೊಲ್ಲರ ಸಂಘ 10.000.
3). ರಾಜ್ ಕುಮಾರ್ ಹಿರೇಗೊಂಟುನೂರು 5000.
4). ಭೀಮಸಮುದ್ರ ಈಶ್ವರಪ್ಪ 5000.
5). ಪಾತಲಿಂಗಪ್ಪ ಗ್ರಾಮೀಣ ಬ್ಯಾಂಕ್. ಚಿತ್ರದುರ್ಗ 5000.
6). ಸಚಿನ್ ಶೆಟ್ಟಿ, ಬಾಂಬೆ 5000.
7). ನವೀನ್ ಕುಮಾರ್ ಘಟ್ಟಪರ್ತಿ ಖರ್ಚಿನ ವೆಚ್ಚ.
8). ಅಶೋಕ್ ವಕೀಲರು ಬೆಂಗಳೂರು. ಪ್ಲೈಟ್ ವ್ಯವಸ್ಥೆ .

9)ಶಿವರುದ್ರಪ್ಪ 2000

ಹೀಗೆ ನೆರವಿನ ಕೈಗಳು ಮುಂದೆ ಬಂದಿದ್ದು ಇವರೆಲ್ಲರ ಸಹಾಯದಿಂದ ತೈವನ್ ನಲ್ಲಿ ಭಾಗವಹಿಸಲಿದ್ದಾರೆ.

Story first published: Monday, December 9, 2019, 12:31 [IST]
Other articles published on Dec 9, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X