ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹಂಪಿ ಉತ್ಸವದಲ್ಲಿ ಗಮನ ಸೆಳೆದ ಮೋಟಾರ್ ಸ್ಪೋರ್ಟ್ಸ್ ಸ್ಪರ್ಧೆ

By ಪ್ರತಿನಿಧಿ
Hampi Utsava: Motor Sports Competition attracts a lot of attention

ಹಂಪಿ ಉತ್ಸವದಲ್ಲಿ ಜೆಕೆ ಟೈಯರ್ ಎಫ್ಎಮ್‌ಎಸ್‌ಸಿಐ ಭಾರತದ ರಾಷ್ಟ್ರೀಯ ರೆಗ್ಯುಲಾರಿಟಿ ರನ್ ಚಾಂಪಿಯನ್‌ಶಿಪ್‌ನ ದಕ್ಷಿಣ ವಲಯದ ಸ್ಪರ್ಧೆ ಅಂತ್ಯವಾಗಿದೆ. ಈ ಸ್ಪರ್ಧೆಯಲ್ಲಿ ತಮಿಳುನಾಡಿನ ಸಂತೋಷ್ ಕುಮಾರ್ ಹಾಗು ಸಹ ಚಾಲಕರಾದ ನಾಗರಾಜನ್ ಮೊದಲ ಸುತ್ತಿನಲ್ಲಿ ಗೆಲುವು ಸಾಧಿಸಿದ್ದರೆ ಎರಡನೇ ಸುತ್ತಿನಲ್ಲಿ ವಿನಯ್ ಕುಮಾರ್ ನ್ಯಾವಿಗೇಟರ್ ರವಿ ಕುಮಾರ್ ಜೊತೆಗೆ ಒಟ್ಟಾರೆ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿ ಮಿಂಚಿದ್ದಾರೆ.

ಮೂರು ಭಾರಿ ನ್ಯಾಷನಲ್ ಚಾಂಪಿಯನ್ ಗಳಾಗಿದ್ದ ಈರೋಡ್ ನ ಕಾರ್ತಿಕ್ ಮಾರುತಿ ಹಾಗು ಸಂಕರ್ ಆನಂದ್ ಎರಡನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಮತ್ತೊಂದು ಜೋಡಿ ಕೀರ್ತಿ ಪ್ರಸಾದ್ ಹಾಗು ಸಹ ಚಾಲಕರಾದ ಸಕ್ತಿವೆಲ್‌ ಮೊದಲನೇ ದಿನದಂತ್ಯಕ್ಕೆ ಎರಡನೇ ಸ್ಥಾನ ಕಾಯ್ದುಕೊಂಡಿದ್ದರಿಂದ ಒಟ್ಟಾರೆ ನಾಲ್ಕನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.

ಅವರಿಬ್ಬರು ಪಂದ್ಯವನ್ನು ಪವರ್‌ಪ್ಲೇನಲ್ಲಿಯೇ ಮುಗಿಸಿದ್ದರು: ಸಂಜು ಸ್ಯಾಮ್ಸನ್ ಪ್ರತಿಕ್ರಿಯೆಅವರಿಬ್ಬರು ಪಂದ್ಯವನ್ನು ಪವರ್‌ಪ್ಲೇನಲ್ಲಿಯೇ ಮುಗಿಸಿದ್ದರು: ಸಂಜು ಸ್ಯಾಮ್ಸನ್ ಪ್ರತಿಕ್ರಿಯೆ

ಬೆಂಗಳೂರಿನ ಮಹಿಳಾ ಟೆಕ್ಕಿಗಳಾದ ಅಪರ್ಣ ಪಾಠಕ್ ಹಾಗು ಲಲಿತ ಗೌಡ ಸರಾಸರಿ ವೇಗವನ್ನು ಕಾಪಾಡಿಕೊಂಡಿದ್ದರಿಂದ ಮಹಿಳ ವಿಭಾಗದ ಎರಡು ಸುತ್ತಿನಲ್ಲಿ ಗೆಲುವು ಸಾಧಿಸುವುದರ ಮೂಲಕ ಬಹಳಷ್ಟು ಪ್ರಬಲ ಪೈಪೋಟಿಯನ್ನು ಮೀರಿ ಗೆಲುವು ಸಾಧಿಸಿದ್ದಾರೆ. ಅಲ್ಲದ ಇವರು ಇತರ ಮೂರು ಸ್ಪರ್ಧೆಯೂ ಸೇರಿದಂತೆ ಕಾರ್ಪೊರೇಟ್ ವಿಭಾಗದ ಮೊದಲ ಸುತ್ತನ್ನು ಗೆದ್ದುಕೊಂಡಿದ್ದಾರೆ.

ಮಂಗಳೂರಿನ ಜೋಡಿ ಅಶ್ವಿನ್ ಪಿಂಟೋ ಹಾಗು ಸಂದೀಪ್ ಡಿ'ಸಿಲ್ವಾ ಜೋಡಿ ಪೃಥ್ವಿ ರೆಡ್ಡಿ ಹಾಗು ಸಹ ಚಾಲಕರಾದ ಅನೂಪ್ ಕೆ ವಿ ಜೋಡಿ ವಿರುದ್ಧ ಮೊದಲ ಸುತ್ತಿನಲ್ಲಿ ಸೋತಿದ್ದರು ಕೂಡ ಎರಡನೇ ಸುತ್ತಿನಲ್ಲಿ ಗೆದ್ದು ಮಿಂಚಿದ್ದಾರೆ. ತಂದೆ-ಮಗ ಜೋಡಿಗಳಾದ ಅನಿಲ್ ಮಾತು ಅಮಲ್ ಅಬ್ಬಾಸ್ ರವರು ಕಾರ್ಪೋರೇಟ್ ವಿಭಾಗದ ಎರಡನೇ ಸುತ್ತಿನಲ್ಲಿ ವಿಜಯ ಸಾಧಿಸಿದರು. ಕರ್ನಲ್ ಜೊಶುಅ ಹಾಗು ಅನಿತಾ ಜೋಡಿ ಕಪಲ್ ವಿಭಾಗದಲ್ಲಿ ವಿಜಯ ಸಾಧಿಸಿದರು.

ಫ್ಲಾಪ್ ಆಗಿರುವ ರೈನಾ ಬದಲು ರಾಬಿನ್ ಉತ್ತಪ್ಪಗೆ ಯಾಕೆ ಅವಕಾಶ ನೀಡುತ್ತಿಲ್ಲ?; ಮಾಜಿ ಕ್ರಿಕೆಟಿಗನ ಪ್ರಶ್ನೆಫ್ಲಾಪ್ ಆಗಿರುವ ರೈನಾ ಬದಲು ರಾಬಿನ್ ಉತ್ತಪ್ಪಗೆ ಯಾಕೆ ಅವಕಾಶ ನೀಡುತ್ತಿಲ್ಲ?; ಮಾಜಿ ಕ್ರಿಕೆಟಿಗನ ಪ್ರಶ್ನೆ

ಹಂಪಿ ಉತ್ಸವ ಅಂಗವಾಗಿ ನಡೆದ ಈ ಸ್ಪರ್ಧೆಗೆ ರಾಯಲ್ ಆರ್ಕಿಡ್ನಲ್ಲಿ ಭಾನುವಾರ ಚಾಲನೆ ನೀಡಲಾಯಿತು. ಕರ್ನಾಟಕ ಪ್ರವಾಸೋದ್ಯಮ ಇಲಾಖೆ ವತಿಯಿಂದ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಮೋಟಾರ್ ಸ್ಪೋರ್ಟ್ ಗೆ ಚಾಲನೆ ನೀಡಲಾಯಿತು. ಹಂಪಿ ಉತ್ಸವದ ಅಂಗವಾಗಿ ವಿಜಯ ನಗರದ ಮೋಟಾರ್ ಸ್ಟೋರ್ಟ್ಸ್ ಅಕಾಡೆಮಿ ಈ ಮೋಟಾರ್ ಸ್ಟೋರ್ಟ್ಸ್ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು.

Story first published: Tuesday, October 5, 2021, 0:01 [IST]
Other articles published on Oct 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X