ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆರ್ಚರಿ ವಿಶ್ವಕಪ್: ಹ್ಯಾಟ್ರಿಕ್ ಚಿನ್ನ ಜಯಿಸಿದ ದೀಪಿಕಾ ಕುಮಾರಿಯ ಚಿನ್ನದಂಥಾ ಸಾಧನೆಗಳಿವು!

Hat-trick hero Deepika Kumari and her incredible World Cup gold rush

ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಆರ್ಚರಿ ವಿಶ್ವಕಪ್ ನಡೆಯುತ್ತಿದ್ದು ಭಾರತದ ದೀಪಿಕಾ ಕುಮಾರಿ ವಿಶೇಷ ಸಾಧನೆಯನ್ನು ಮಾಡಿದ್ದಾರೆ. ಭಾನುವಾರ ಆರ್ಚರಿ ವಿಶ್ವಕಪ್‌ನಲ್ಲಿ ದೀಪಿಕಾ ಕುಮಾರಿ ಮೂರು ಚಿನ್ನದ ಪದಕವನ್ನು ಗೆದ್ದು ಬೀಗಿದ್ದಾರೆ.

ಭಾರತದ ಶ್ರೇಷ್ಠ ಬಿಲ್ಲುಗಾರ್ತಿಯಾಗಿರುವ ದೀಪಿಕಾ ಕುಮಾರಿ ಮಾಜಿ ವಿಶ್ವದ ನಂಬರ್ 1 ಆರ್ಚರ್ ಎನಿಸಿದ್ದಾರೆ. ಸದ್ಯ ಶ್ರೇಯಾಂಕಪಟ್ಟಿಯಲ್ಲಿ ದೀಪಿಕಾ ಮೂರನೇ ಸ್ಥಾನದಲ್ಲಿದ್ದಾರೆ. ಒಟ್ಟಾರೆ ಆರ್ಚರಿ ವಿಶ್ವಕಪ್‌ನಲ್ಲಿ ದೀಪಿಕಾ ಈವರೆಗೆ 9 ಚಿನ್ನದ ಪದಕದ ಸಾಧನೆಯನ್ನು ಮಾಡಿದ್ದರೆ, 12 ಬೆಳ್ಳಿ ಹಾಗೂ 7 ಕಂಚಿನ ಪದಕವನ್ನು ಜಯಿಸಿದ್ದಾರೆ. ಎರಡು ಬಾರಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ಚಿನ್ನದ ಪದಕವನ್ನು ಜಯಿಸಿದ್ದಾರೆ. ಇದಕ್ಕೂ ಮುನ್ನ ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದಾರೆ. 2012 ಹಾಗೂ 2016ರ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ದೀಪಿಕಾ ಪ್ರತಿನಿಧಿಸಿದ್ದಾರೆ. ಈಗ ಮುಂದಿನ ತಿಂಗಳು ನಡೆಯುವ ಟೋಕಿಯೋ ಒಲಿಂಪಿಕ್ಸ್‌ಗೂ ದೀಪಿಕಾ ಕುಮಾರಿ ಆಯ್ಕೆಯಾಗಿದ್ದಾರೆ. ಮಹಿಳಾ ವಿಭಾಗದಲ್ಲಿ ಆಯ್ಕೆಯಾಗಿರುವ ಭಾರತದ ಏಕೈಕ ಆರ್ಚರ್ ಆಗಿದ್ದಾರೆ ದೀಪಿಕಾ ಕುಮಾರಿ.

ಆರ್ಚರಿ ವಿಶ್ವಕಪ್: ಮಿಶ್ರ ಡಬಲ್ಸ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ದೀಪಿಕಾ ಕುಮಾರಿ, ಅತನು ದಾಸ್ ಜೋಡಿಆರ್ಚರಿ ವಿಶ್ವಕಪ್: ಮಿಶ್ರ ಡಬಲ್ಸ್‌ನಲ್ಲಿ ಚಿನ್ನಕ್ಕೆ ಗುರಿಯಿಟ್ಟ ದೀಪಿಕಾ ಕುಮಾರಿ, ಅತನು ದಾಸ್ ಜೋಡಿ

ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ವಿಶ್ವಕಪ್ ಸ್ಟೇಜ್ 3ರಲ್ಲಿ ದೀಪಿಕಾ ಕುಮಾರಿ ಭಾರತ ಪರವಾಗಿ ಅದ್ಭುತ ಸಾಧನೆಯನ್ನು ಮಾಡಿದ್ದಾರೆ. ವಿಶೇಷವೆಂದರೆ ದೀಪಿಕಾ ಕುಮಾರಿ ಭಾನುವಾರ ಕೇವಲ 5 ಗಂಟೆಗಳ ಅಂತರದಲ್ಲಿ ಮೂರು ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ. ಈ ಮೂಲಕ ರಿಕ್ಯೂರ್ವ್ ವಿಭಾಗದಲ್ಲಿ ಭಾರತ ಕ್ಲೀನ್‌ಸ್ವೀಪ್ ಸಾಧನೆ ಮಾಡಲು ಸಾಧ್ಯವಾಗಿದೆ.

ಮೊದಲಿಗೆ ತಂಡ ಮಹಿಳಾ ವಿಭಾಗದ ಸ್ಪರ್ಧೆಯಯಲ್ಲಿ ದೀಪಿಕಾ ಕುಮಾರಿ, ಅಂಕಿತಾ ಭಕಾತ್ ಮತ್ತು ಕೋಮಲಿಕಾ ಬ್ಯಾರಿ ಅವರ ತಂಡ ಮೆಕ್ಸಿಕೋ ತಂಡವನ್ನು ಮಣಿಸಿ ಚಿನ್ನವನ್ನು ಗೆದ್ದುಕೊಂಡಿತು. ಅದಾದ ನಂತರ ಮಿಕ್ಸೆಡ್ ಡಬಲ್ಸ್ ವಿಭಾಗದಲ್ಲಿ ತನ್ನ ಜೋಡಿಯಾದ(ಪತಿಯೂ ಹೌದು) ಅತನು ದಾಸ್ ಜೊತೆಗೆ ನೆದರ್ಲ್ಯಾಂಡ್ ತಂಡವನ್ನು ಮಣಿಸಿ ಚಿನ್ನದ ಪದಕವನ್ನು ಗೆದ್ದರು. 5-3 ಅಂತರದಿಂದ ಈ ಗೆಲುವು ಸಾಧಿಸಿತು.

ಈ ಎರಡು ಚಿನ್ನದ ಪದಕದ ನಂತರ ವೂಯ್ಯಕ್ತಿಕ ವಿಭಾಗದಲ್ಲಿಯೂ ದೀಪಿಕಾ ಕುಮಾರಿ ಗೆಲುವು ಸಾಧಿಸಿ ಚಿನ್ನಕ್ಕೆ ಮುತ್ತಿಕ್ಕಿದರು. ರಷ್ಯಾದ 17ನೇ ಶ್ರೇಯಾಂಕಿತೆ ಎಲೆನಾ ಒಸಿಪೋವಾ ಅವರನ್ನು 6-0 ಅಂತರದಿಂದ ಮಣಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ್ದಾರೆ. ತಮ್ಮ ವೃತ್ತಿ ಜೀವನದಲ್ಲಿ ಇದು ದೀಪಿಕಾ ಕುಮಾರಿ ಅವರ ವಿಶ್ವಕಪ್‌ನ ನಾಲ್ಕನೇ ವೈಯಕ್ತಿಕ ಚಿನ್ನದ ಸಾಧನೆಯಾಗಿದೆ.

Story first published: Monday, June 28, 2021, 17:31 [IST]
Other articles published on Jun 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X