ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಾನವೀಯತೆಗಾಗಿ ಮನಗೆದ್ದ ಭಾರತದ ಚಿನ್ನದ ಓಟಗಾರ್ತಿ ಹಿಮಾ ದಾಸ್

Hima Das donates half her month’s salary to Assam flood relief fund

ನವದೆಹಲಿ, ಜುಲೈ 17: ಕೇವಲ 2 ವಾರಗಳ ಅಂತರದಲ್ಲಿ 3 ಅಂತಾರಾಷ್ಟ್ರೀಯ ಚಿನ್ನದ ಪದಕಗಳನ್ನು ಗೆದ್ದು ವಿಶ್ವದ ಗಮನ ಸೆಳೆದಿದ್ದ ಭಾರತದ ಬಂಗಾರದ ಓಟಗಾರ್ತಿ ಹಿಮಾ ದಾಸ್, ಮಾನವೀಯತೆಗಾಗಿ ಭಾರತೀಯರ ಮನ ಗೆದ್ದಿದ್ದಾರೆ. ಹಿಮಾ ತನ್ನ ತಿಂಗಳ ಸಂಬಳದ ಅರ್ಧದಷ್ಟು ಹಣವನ್ನು ಅಸ್ಸಾಂ ಪ್ರವಾಹ ಪೀಡಿತರಿಗೆ ಕೊಡುಗೆಯಾಗಿ ನೀಡಿದ್ದಾರೆ.

4ನೇ ಕ್ರಮಾಂಕಕ್ಕೆ ಆಟಗಾರನ ಸೂಚಿಸಿದ ಭಾರತ ಯು-19 ಮಾಜಿ ಕೋಚ್4ನೇ ಕ್ರಮಾಂಕಕ್ಕೆ ಆಟಗಾರನ ಸೂಚಿಸಿದ ಭಾರತ ಯು-19 ಮಾಜಿ ಕೋಚ್

ಮಂಗಳವಾರ (ಜುಲೈ 16) ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ 19ರ ಹರೆಯದ ಹಿಮಾ, 'ನನ್ನ ಪುಟಾಣಿ ಕೊಡುಗೆಯನ್ನು ನೀಡಿದ್ದೇನೆ. ದೇಶದ ಉಳಿದವರೂ ಪ್ರವಾಹಕ್ಕೆ ತುತ್ತಾಗಿರುವ ಅಸ್ಸಾಂ ಜನತೆಗೆ ನೆರವು ನೀಡಿ' ಎಂದು ಅಸ್ಸಾಂ ಫ್ಲಡ್ಸ್ ಹ್ಯಾಷ್‌ಟ್ಯಾಗ್‌ನೊಂದಿಗೆ ಬರೆದುಕೊಂಡಿದ್ದರು.

ಹಿಮಾ ದಾಸ್ ಇತ್ತೀಚೆಗೆ ಕ್ಲಾಡೋ ಅಥ್ಲೆಟಿಕ್ಸ್ ಮೀಟ್, ಕುಂಟೋ ಅಥ್ಲೆಟಿಕ್ಸ್ ಮೀಟ್ ಮತ್ತು ಪೊಝ್ನಾನ್ ಗ್ರ್ಯಾಂಡ್‌ಪ್ರಿಕ್ಸ್ ಕ್ರೀಡಾಕೂಟಗಳಲ್ಲಿ ಭಾರತಕ್ಕೆ ಚಿನ್ನದ ಪದಕ ಗೆದ್ದಿದ್ದರು. ತಾನೇ ಬಡ ಕುಟುಂಬದಲ್ಲಿದ್ದರೂ ತನ್ನ ರಾಜ್ಯದ ಸಮಸ್ಯೆಗೆ ಮರುಗಿರುವ ದಾಸ್, ತಿಂಗಳ ಸಂಬಳದಲ್ಲಿ ನೆರವು ನೀಡಿದ್ದಾರೆ.

ತಮ್ಮ ವಿಶ್ವಕಪ್‌ ತಂಡದಿಂದ ಧೋನಿಯನ್ನು ಕೈಬಿಟ್ಟ ತೆಂಡೂಲ್ಕರ್‌!ತಮ್ಮ ವಿಶ್ವಕಪ್‌ ತಂಡದಿಂದ ಧೋನಿಯನ್ನು ಕೈಬಿಟ್ಟ ತೆಂಡೂಲ್ಕರ್‌!

ಧಾರಾಕಾರವಾಗಿ ಸುರಿಯುತ್ತಿರುವ ಮಳೆಯ ಕಾರಣ ನಲ್ಬರಿಯಲ್ಲಿನ ಪಾಗ್ಲಾಡಿಯಾ ನದಿಯ ಪ್ರವಾಹದಿಂದಾಗಿ ಅಲ್ಲಿನ ಸುಮಾರು 133 ಗ್ರಾಮಗಳ 1,50,000 ಜನ ಸಮಸ್ಯೆಗೀಡಾಗಿದ್ದಾರೆ. ಭಾರತೀಯ ಸೇನೆ ಪ್ರವಾಹಕ್ಕೀಡಾಗಿರುವಲ್ಲಿಗೆ ನೆರವಿಗೆ ಧಾವಿಸಿದ್ದು, ಜನರನ್ನು ಸುರಕ್ಷಿತ ಜಾಗಕ್ಕೆ ಸಾಗಿಸುವ ಕಾರ್ಯದಲ್ಲಿ ಕೈ ಜೋಡಿಸಿದೆ.

Story first published: Wednesday, July 17, 2019, 12:01 [IST]
Other articles published on Jul 17, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X