ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಏಷ್ಯನ್ ಗೇಮ್ಸ್ ಮಿಶ್ರ ರಿಲೇ ತಂಡದಿಂದ ಹೊರಗುಳಿದ ಹಿಮಾ ದಾಸ್

Hima Das to skip mixed-team relay at Asian Games 2018 in Jakarta

ನವದೆಹಲಿ, ಜುಲೈ 28: ಅಂಡರ್-20 ವನಿತಾ 400 ಮೀ. ಓಟದ ವಿಶ್ವ ಚಾಂಪಿಯನ್, ಭಾರತದ ಹೆಮ್ಮೆ ಹಿಮಾದಾಸ್ ಮುಂದಿನ ತಿಂಗಳು ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆಯಲಿರುವ ಏಷ್ಯಗೇಮ್ಸ್ ನಲ್ಲಿ ಹೊಸದಾಗಿ ಪರಿಚಯಿಸಲಾಗಿರುವ 4x400 ಮೀ. ಮಿಶ್ರ ರಿಲೇ ತಂಡದಿಂದ ಹೊರಗುಳಿದಿದ್ದಾರೆ. ತಾನು ವೈಯಕ್ತಿಕ ಸ್ಪ್ರಿಂಟ್ ವಿಭಾಗ (200 ಮೀ., 400 ಮೀ. ಓಟ)ದತ್ತ ಗಮನ ಹರಿಸುತ್ತಿರುವುದು ಇದಕ್ಕೆ ಕಾರಣ ಎಂದಿದ್ದಾರೆ.

ಟಿ20: 35 ಎಸೆತದಲ್ಲೇ ಶತಕ ಬಾರಿಸಿದ ಮಾರ್ಟಿನ್ ಗುಪ್ಟಿಲ್ಟಿ20: 35 ಎಸೆತದಲ್ಲೇ ಶತಕ ಬಾರಿಸಿದ ಮಾರ್ಟಿನ್ ಗುಪ್ಟಿಲ್

'ಹಿಮಾಳ ವೈಯಕ್ತಿಕ ವಿಭಾಗದ ಓಟ ಮತ್ತು ಈ ತಂಡ ಸ್ಪರ್ಧೆಯ ಸಮಯ ಒಂದೇ ರೀತಿ ಇದೆ. ಅಂದರೆ 200 ಮೀ. ಓಟ ಮತ್ತು ಮಿಶ್ರ ತಂಡ ರಿಲೇ ಸ್ಪರ್ಧೆ ನಡುವಿನ ಅವಧಿ ಸಣ್ಣದು. ಆ ಸಣ್ಣ ಅವಧಿಯಲ್ಲಿ ಮತ್ತೊಂದು ಓಟಕ್ಕೆ ತಯಾರಾಗುವುದು ಕಷ್ಟ. ಹಾಗಾಗಿ ಮಿಶ್ರ ರಿಲೇ ತಂಡದಿಂದ ಹಿಮಾ ಹಿಂದೆ ಸರಿದಿದ್ದಾರೆ' ಎಂದು ರಾಷ್ಟ್ರೀಯ ಕೋಚ್ ಬಸಂತ್ ಸಿಂಗ್ ತಿಳಿಸಿದ್ದಾರೆ.

Hima Das to skip mixed-team relay at Asian Games 2018 in Jakarta

18ರ ಹರೆಯದ ಅಸ್ಸಂ ಓಟಗಾರ್ತಿ ದಾಸ್, 400 ಮೀ. ಓಟದಲ್ಲಿ ಭಾರತದಲ್ಲೇ ವೇಗದ ಓಟಗಾರ್ತಿಯಾಗಿ ಗುರುತಿಸಿಕೊಂಡಿದ್ದು, ಜುಲೈನಲ್ಲಿ ಗುವಾಹಟಿಯಲ್ಲಿ ನಡೆದಿದ್ದ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ 400 ಮೀ. ಓಟದಲ್ಲಿ 51.13 ಸೆ. ಕಾಲಾವಧಿಯೊಂದಿಗೆ ಚಿನ್ನ ಬಾಚಿಕೊಂಡಿದ್ದರು.

ಏಷ್ಯನ್ ಗೇಮ್ಸ್ 4x400 ಮೀ. ವನಿತಾ ರಿಲೆಯಲ್ಲಿ ಹಾಲಿ ಚಾಂಪಿಯನ್ ಆಗಿರುವ ಭಾರತಕ್ಕೆ ಹಿಮಾ ಪಾಲ್ಗೊಳ್ಳುವಿಕೆ ಇನ್ನಷ್ಟು ಶಕ್ತಿ ತುಂಬಲಿದೆ ಎಂದು ಬಸಂತ್ ತಿಳಿಸಿದ್ದಾರೆ. 'ಭಾರತದ ವನಿತಾ ರಿಲೇ ತಂಡದಲ್ಲಿ ಹಿಮಾ ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ' ಎಂದು ಅವರು ತಿಳಿಸಿದ್ದಾರೆ.

Story first published: Saturday, July 28, 2018, 11:38 [IST]
Other articles published on Jul 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X