ಫಾರ್ಮುಲಾ 1 ರೇಸ್‌ನಲ್ಲಿ ಭೀಕರ ಅಪಘಾತ, ಹೊತ್ತಿ ಉರಿದ ಕಾರು: ವಿಡಿಯೋ

ಬಹ್ರೈನ್ ಗ್ರಾಂಡ್‌ ಪ್ರಿಕ್ಸ್‌ನಲ್ಲಿ ಭಾನುವಾರ ಭೀಕರ ಅಪಘಾತ ನಡೆದಿದೆ. ರೋಮೈನ್ ಗ್ರಾಸ್‌ಜೀನ್ ಚಲಾಯಿಸುತ್ತಿದ್ದ ಎಫ್‌-1 ಕಾರು ಅಪಘಾತಕ್ಕೆ ಒಳಗಾಗಿದ್ದು ಭೀಕರ ಅಪಘಾತದಲ್ಲಿ ಕಾರ್‌ಗೆ ಬೆಂಕಿಹೊತ್ತಿಕೊಂಡಿದೆ. ಅದೃಷ್ಟವಶಾತ್ ಪವಾಡವೆನ್ನುಂತೆ ರೋಮೈನ್ ಗ್ರಾಸ್‌ಜೀನ್ ಸುಟ್ಟಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಗ್ರಾಸ್‌ಜೀನ್ ಮೊದಲನೇ ಲ್ಯಾಪ್‌ನಲ್ಲಿ ಮೂರನೇ ಬದಿಯಲ್ಲಿದ್ದಯ ಡೇನಿಯಲ್ ಕ್ವಾಟ್ ಅವರ ಹಾಸ್‌ ಕಾರ್‌ಗೆ ಸ್ಪರ್ಷಿಸಿತ್ತು. ಬಳಿಕ ತಕ್ಷಣವೇ ತಮ್ಮ ಲೈನ್‌ನಿಂದ ಬದಲಾವಣೆಯಾಗಿ ಟ್ರ್ಯಾಕ್‌ನ ತಡೆಗೆ ಕಾರ್ ಬಡಿಯಿತು. ಈ ಅಪಘಾತದ ಕ್ಷಣದಲ್ಲೇ ಭೀಕರವಾಗಿ ಕಾರು ಸ್ಫೋಟಗೊಂಡು ಬೆಂಕಿ ಹೊತ್ತಿಕೊಂಡಿತು.

76 ಓವರ್ 439 ರನ್ 3 ವಿಕೆಟ್: ಭಾರತದ ಬೌಲಿಂಗ್ ಬ್ರಹ್ಮಾಸ್ತ್ರ ಬೂಮ್ರಾಗೆ ಇದೇನಾಯ್ತು?

ಪ್ರಾನ್ಸ್‌ನ ಡ್ರೈವರ್ ಗ್ರಾಸ್‌ಜೀನ್ ಈ ಸ್ಪೋಟದ ಸಂದರ್ಭದಲ್ಲಿ ಕಾರ್‌ನ ಒಳಗಡೆಯೇ ಇದ್ದರು. ಎಲ್ಲವೂ ಸೆಕೆಂಡ್‌ಗಳ ಅಂತರದಲ್ಲಿ ನಡೆದಿತ್ತು. ಈ ಸ್ಪೋಟ ನಡೆದ ಬಳಿಕ ಬೆಂಕಿಯ ಮಧ್ಯೆಯೇ ಗ್ರಾಸ್‌ಜೀನ್ ಕೆಲವೇ ಸೆಕೆಂಡ್‌ಗಳಲ್ಲಿ ಕಾರ್‌ನಿಂದ ಹೊರ ಬಂದರು. ಅಲ್ಲಿದ್ದ ಸಿಬ್ಬಂದಿಗಳು ಅವರನ್ನು ಪ್ರಥಮ ಚಿಕಿತ್ಸೆಗೆ ಕರೆದುಕೊಂಡು ಹೋಗಿದ್ದಾರೆ.

"ಅವರು ಚೇತರಿಸಿಕೊಳ್ಳುತ್ತಿದ್ದಾರೆ. ಕೈ ಹಾಗೂ ಮೊಣಕಾಲಿಗೆ ಸಣ್ಣಪುಟ್ಟ ಸುಟ್ಟಗಾಯಗಳಾಗಿದೆ" ಎಂದು ಗ್ರಾಸ್‌ಜೀನ್ ಪ್ರತಿನಿಧಿಸುವ 'ಹಾಸ್' ಮುಖ್ಯಸ್ಥ ಗುಂಥರ್ ಸ್ಟೈನ್ ತಿಳಿಸಿದ್ದಾರೆ. ಖಂಡಿತಾ ಅವರು ಆಘಾತಗೊಂಡಿದ್ದಾರೆ. ಅಗತ್ಯವಿರುವ ಎಲ್ಲಾ ಪರಿಶೀಲನೆಗಳನ್ನು ಮಾಡಲಾಗುತ್ತದೆ. ಅವರು ಪ್ರಜ್ಞೆಯನ್ನು ಹೊಂದಿದ್ದಾರೆ ಎಂದು ಸ್ಟೈನ್ ವಿವರಿಸಿದ್ದಾರೆ.

ಘಟನೆಯ ಬಳಿಕ 'ಹಾಸ್' ತಂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ "ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಮುಂದಿನ ವೈದ್ಯಕೀಯ ಪರೀಕ್ಷೆಗಳಿಗಾಗಿ ರೋಮೈನ್ ಅವರನ್ನು ಆಸ್ಪತ್ರೆಗೆ ವರ್ಗಾಯಿಸಲಾಗುತ್ತಿದೆ" ಎಂದು ತಿಳಿಸಲಾಗಿದೆ.

For Quick Alerts
ALLOW NOTIFICATIONS
For Daily Alerts
Story first published: Monday, November 30, 2020, 15:57 [IST]
Other articles published on Nov 30, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X