ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವೀಡಿಯೋಗೇಮ್: ಮನರಂಜನೆ ಮಾತ್ರವಲ್ಲ ಹಣವೂ ಗಳಿಸಬಹುದು!

how to make money by playing online games?

ಕ್ರೀಡೆ ಅಂದ್ರೆ ಮೈದಾನಕ್ಕಿಳಿದು ದೇಹ ದಂಡಿಸುವುದು ಅನ್ನುವ ಮಾತಿತ್ತು. ಆದರೆ ಕಾಲ ಅದೆಷ್ಟು ಬದಲಾಗಿದೆ ಅಂದ್ರೆ ಈಗ ಮೈದಾನಕ್ಕಿಳಿಯದೇ ಕ್ರಿಕೆಟ್ ಆಡಬಹುದು. ಕದನ ಕಣಕ್ಕಿಳಿಯದೇ ಯುದ್ಧಗೆಲ್ಲಬಹುದು. ಅಲ್ಲೇ ಚಿಕನ್ ಡಿನ್ನರನ್ನೂ ಸವಿದು ತೃಪ್ತಿ ಪಡೆಯಬಹುದು. ಮೈದಾನದಲ್ಲಿ ಯಾರು ಎಷ್ಟೆಷ್ಟು ರನ್ ಬಾರಿಸ್ತಾರೆ ಎಂದು ಅದೃಷ್ಟ ಪರೀಕ್ಷೆಯನ್ನೂ ನಡೆಸಬಹುದು.

ಇದೇನೂ ತೀರಾ ಹೊಸ ಆವಿಷ್ಕಾರ ಅಲ್ಲ. ಆದರೆ ಕಳೆದ ಎರಡ್ಮೂರು ವರ್ಷಗಳಲ್ಲಿ ಈ ಗೇಮಿಂಗ್ ಜಗತ್ತು ಅಂದಾಜಿಸಲೂ ಸಾಧ್ಯವಾಗದಷ್ಟು ಬೆಳೆದು ಬಿಟ್ಟಿದೆ. ತನ್ನದೇ ಹೊಸ ಲೋಕವನ್ನು ಸೃಷ್ಠಿಸಿಕೊಂಡಿದೆ. ಮೊಬೈಲ್‌ ವೀಡಿಯೋಗೇಮ್‌ಗೆ ಹೇಳಿ ಮಾಡಿಸಿದ್ದಲ್ಲ. ಕಂಪ್ಯೂಟರ್‌ನಲ್ಲಿ ಲ್ಯಾಪ್‌ಟಾಪ್‌ನಲ್ಲಿ ಆಡಿದರಷ್ಟೇ ಸ್ಟಾಂಡರ್ಡ್‌ ಅನ್ನೋ ವರ್ಗವೂ ಇತ್ತು. ಆದರೆ ಈಗ ಎಲ್ಲವೂ ಬದಲಾಗಿಬಿಟ್ಟಿದೆ.

ಪಾಪ ಬೂಮ್ರಾ! ಆಡಲು ಮೊಬೈಲ್ ಇಲ್ಲದೆ ಒಂಟಿಯಾದರು: ಟ್ವಿಟ್ಟರ್‌ನಲ್ಲಿ ತಮಾಷೆಪಾಪ ಬೂಮ್ರಾ! ಆಡಲು ಮೊಬೈಲ್ ಇಲ್ಲದೆ ಒಂಟಿಯಾದರು: ಟ್ವಿಟ್ಟರ್‌ನಲ್ಲಿ ತಮಾಷೆ

ಒಂದೆರಡು ವರ್ಷದ ಹಿಂದೆಯಷ್ಟೇ ಈ ವೀಡಿಯೋ ಗೇಮ್‌ಗಳು ಕೇವಲ ಟೈಮ್‌ಪಾಸ್‌ಗಷ್ಟೇ ಅನ್ನೋ ಮಾತಿತ್ತು. ಆದರೆ ಈಗ ಮನರಂಜನೆಯ ಜೊತೆಗೆ ಹಣವನ್ನೂ ಕೂಡ ಗಳಿಬಹುದು. ಸಾವಿರಾರು ಕೋಟಿಯ ವಹಿವಾಟಗಳು ಈ ವೀಡಿಯೋಗೇಮ್ ಮೂಲಕ ನಡೆಯುತ್ತಿದೆ ಅನ್ನೋದು ಪ್ರಮುಖ ಅಂಶ.

ವೀಡಿಯೋ ಗೇಮ್‌ಗಳಿಂದ ಹಣ ಗಳಿಸ್ಬೋದಾ?

ವೀಡಿಯೋ ಗೇಮ್‌ಗಳಿಂದ ಹಣ ಗಳಿಸ್ಬೋದಾ?

ಖಂಡಿತಾ ಹೌದು. ಈಗಾಗಲೇ ಹೇಳಿದಂತೆ ವೀಡಿಯೋ ಗೇಮ್‌ಗಳು ಈಗ ಕೇವಲ ಮನರಂಜನೆ ಹಾಗೂ ಟೈಮ್‌ಪಾಸ್‌ಗಾಗಿ ಮಾತ್ರವಿಲ್ಲ. ಇಲ್ಲಿ ಸಾಕಷ್ಟು ಹಣವನ್ನು ಗಳಿಸುವ ವರ್ಗವೂ ಇದೆ. ಅದಕ್ಕೆ ಪೂರಕವಾಗಿರುವ ಅನೇಕ ಗೇಮ್ಸ್‌ಗಳು ಆನ್‌ಲೈನ್‌ನಲ್ಲಿವೆ. ಟೈಮ್‌ಪಾಸ್‌ನೆಪದಲ್ಲಿ ಒಂದಷ್ಟು ಹಣವನ್ನೂ ಗಳಿಸುವ ಅವಕಾಶಗಳಿವೆ.

ಎಷ್ಟು ಹಣ ಗಳಿಸಬಹುದು?

ಎಷ್ಟು ಹಣ ಗಳಿಸಬಹುದು?

ಆನ್‌ಲೈನ್ ವೀಡಿಯೋಗೇಮ್‌ಗಳಲ್ಲಿ ನಿತ್ಯವೂ ಆವಿಷ್ಕಾರಗಳು ನಡೆಯುತ್ತಿದೆ. ಆದರೆ ಇಲ್ಲಿ ಆಡುತ್ತಾ ಎಷ್ಟು ಹಣ ಸಂಪಾದನೆ ಮಾಡಲು ಸಾಧ್ಯ ಅನ್ನೋದನ್ನು ನಿರ್ಧಿಷ್ಟವಾಗಿ ಹೇಳಲು ಸಾಧ್ಯವಿಲ್ಲ. ಆಟದ ಮೇಲೆ ನಿಮಗಿರುವ ಹಿಡಿತ ಹಾಗೂ ನೈಪುಣ್ಯತೆ ಇದನ್ನು ನಿರ್ಧರಿಸುತ್ತದೆ. ಆದರೆ ಆಡುವ ಸಂದರ್ಭದಲ್ಲಿ ಇನ್ನೊಬ್ಬರಿಗೆ ತೊಂದರೆ ಆಗುತ್ತದೆಯೋ ಅನ್ನುವುದನ್ನು ಗಮನಿಸಿ.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮರಳಲಿದ್ದಾರೆ 'ಕೂಲ್ ಕ್ಯಾಪ್ಟನ್' ಎಂಎಸ್ ಧೋನಿ!

ಸಮಯದ ಉತ್ತಮ ನಿರ್ವಹಣೆ:

ಸಮಯದ ಉತ್ತಮ ನಿರ್ವಹಣೆ:

ವೀಡಿಯೋ ಗೇಮ್‌ಗಳು ಸಮಯವನ್ನು ಕೊಲ್ಲುವಂತಾಗಬಾರದು. ಬಸ್‌ನಲ್ಲಿ ಕ್ಯಾಬ್‌ಗಳಲ್ಲಿ ಸಂಚರಿಸುವವರಿಗೆ ಈ ಸಮಯ ಗೇಮ್‌ಗೆ ಮೀಸಲಿಡಲು ಉತ್ತಮ. ಇನ್ನು ಹೋಟೆಲ್‌ಗಳಲ್ಲಿ ಆರ್ಡರ್ ಮಾಡಿದ ಊಟದ ಸಮಯದಲ್ಲಿ ಗೇಮ್ ಆಡಿವುದು, ಬೋರ್ ಹೊಡೆಸುವ ಕ್ಷಣಗಳಲ್ಲಿ ವೀಡಿಯೋ ಗೇಮ್‌ಗೆ ಸಮಯ ನೀಡಿದರೆ ಸಾಕು.

ಮೂರ್ಖರಾಗಬೇಡಿ:

ಮೂರ್ಖರಾಗಬೇಡಿ:

ವೀಡಿಯೋ ಗೇಮ್‌ಗಳನ್ನು ಆಡಿ ಹಣ ಗಳಿಸುವ ಅವಕಾಶ ಇದೆ. ಆದರೆ ನಾವು ಆಯ್ಕೆ ಮಾಡುವ ಗೇಮ್‌ಗಳು, ವೆಬ್‌ಸೈಟ್‌ಗಳು ಇಲ್ಲಿ ಪ್ರಮುಖವಾಗುತ್ತವೆ. ಯಾವುದು ಅಸಲಿ ಯಾವುದು ನಕಲಿ ಎಂದು ತಿಳಿದುಕೊಂಡು ಆಡಿದರೆ ಉತ್ತಮ. ಇಲ್ಲವಾದಲ್ಲಿ ಅಪಾಯಕ್ಕೆ ಸಿಲುಕುವ ಸಾಧ್ಯತೆಯೂ ಇದೆ.

ಸುಲಭ ದಾರಿಯ ಮೂಲಕ ಹಣ ಗಳಿಸಲು ಸಾಧ್ಯವಿಲ್ಲ:

ಸುಲಭ ದಾರಿಯ ಮೂಲಕ ಹಣ ಗಳಿಸಲು ಸಾಧ್ಯವಿಲ್ಲ:

ವೀಡಿಯೋ ಗೇಮ್‌ಗಳಲ್ಲಿ ಹಣಗಳಿಸುವುದು ಅತ್ಯಂತ ಸುಲಭ ಅನ್ನುವ ಯೋಚನೆ ನಿಮ್ಮಲ್ಲಿದ್ದರೆ ಅದನ್ನು ತೆಗೆದುಬಿಡಿ. ಅದೊಂದು ಮಿಥ್ ಅಷ್ಟೆ. ಇಲ್ಲೂ ಕೂಡ ಸಾಕಷ್ಟು ಶ್ರಮನೀಡಬೇಕಾಗುತ್ತದೆ, ಚಾಕಕಕ್ಯತೆಯ ಅಗತ್ಯವಿರುತ್ತದೆ.

ಅವಿವೇಕದ ನಿರ್ಧಾರಗಳು ಬೇಡ;

ಅವಿವೇಕದ ನಿರ್ಧಾರಗಳು ಬೇಡ;

ವೀಡಿಯೋ ಗೇಮ್ ಆಡಿ ಹಣಗಳಿಸಬಹುದು ಅಂದುಕೊಂಡು ಇರುವ ಕೆಲಸ ತೊರೆದು ಗೇಮಿಂಗ್‌ಗೆ ಸಮಯ ಮೀಸಲಿಡುವ ಅವಿವೇಕದ ಪರಮಾವಧಿಗಳಿಗೆ ಮುಂದಾಗಬೇಡಿ. ಮನರಂಜನೆ ಮನರಂಜನೆಯಾಗಷ್ಟೇ ಇರಲಿ. ಹೆಚ್ಚಿನ ವೀಡಿಯೋ ಗೇಮ್ ಆಡುವವರಾದರೆ ನಿರ್ದಿಷ್ಟ ಸಮಯವನ್ನು ನಿಗದಿ ಪಡಿಸಿಕೊಂಡು ಅಷ್ಟನ್ನು ಮಾತ್ರವೇ ಗೇಮಿಂಗ್‌ಗೆ ನೀಡಿ. ಇಲ್ಲವಾದಲ್ಲಿ ಮಾನಸಿಕವಾಗಿ ತೊಂದರೆಗಳಿಗೆ ಈಡಾಗಬಹುದು.

Story first published: Tuesday, November 26, 2019, 16:17 [IST]
Other articles published on Nov 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X