ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಳ್ಳೆಯ ಕಾರಣಕ್ಕಾಗಿ ಧ್ವನಿಯೆತ್ತದವರು ಬದುಕಿದ್ದು ಸತ್ತಂತೆ: ವಿಜೇಂದರ್

Im son of Haryana, with Punjab in my emotions and blood: Vijender Singh

ನವದೆಹಲಿ: ನ್ಯಾಯಪರವಾಗಿ ನಿಲ್ಲದ, ಸ್ವಾರ್ಥಕ್ಕಾಗಿ ಬದುಕುವವರಿಗೆ ಒಲಿಂಪಿಕ್ಸ್ ಪದಕ ವಿಜೇತ ಬಾಕ್ಸರ್ ವಿಜೇಂದರ್ ಸಿಂಗ್ ಗುದ್ದು ನೀಡಿದ್ದಾರೆ. ಒಳ್ಳೆಯ ಕಾರಣಕ್ಕಾಗಿ ಧ್ವನಿಯೆತ್ತದವರು ಬದುಕಿದ್ದು ಸತ್ತಂತೆ ಎಂದು ವಿಜೇಂದರ್ ಹೇಳಿದ್ದಾರೆ. ಕೇಂದ್ರ ಸರ್ಕಾರದ ಕೃಷಿ ವಿರೋಧಿ ಮಸೂದೆಯ ವಿರುದ್ಧ ಹೋರಾಡುತ್ತಿರುವ ರೈತರಿಗೆ ಬೆಂಬಲಿಸಿ ಸಿಂಗ್ ಈ ಹೇಳಿಕೆ ನೀಡಿದ್ದಾರೆ.

ಬಾಕ್ಸಿಂಗ್‌ ಡೇ ಟೆಸ್ಟ್ ವೇಳೆ 30,000 ಅಭಿಮಾನಿಗಳಿಗೆ ವೀಕ್ಷಿಸಲು ಅನುಮತಿಬಾಕ್ಸಿಂಗ್‌ ಡೇ ಟೆಸ್ಟ್ ವೇಳೆ 30,000 ಅಭಿಮಾನಿಗಳಿಗೆ ವೀಕ್ಷಿಸಲು ಅನುಮತಿ

ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆಗೆ ಬೆಂಬಲ ಸೂಚಿಸಿರುವ ವಿಜೇಂದರ್, ಕೃಷಿ ವಿರೋಧಿ ಮಸೂದೆಗಳನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಾಪಸ್ ಪಡೆಯದಿದ್ದರೆ ನಾನು ನನ್ನ ಖೇಲ್ ರತ್ನಾ ಪ್ರಶಸ್ತಿ ವಾಪಸ್ ನೀಡಲು ಸಿದ್ಧನಿದ್ದೇನೆ ಎಂದು ಈ ಮೊದಲು ಹೇಳಿದ್ದರು.

ಕೊರೆಯುವ ಚಳಿಯ ಮಧ್ಯೆಯೂ ತಮ್ಮ ಭವಿಷ್ಯದ ದಿನಗಳಿಗಾಗಿ ಹೋರಾಡುತ್ತಿರುವ ರೈತರಿಗೆ ಬೆಂಬಲಿಸಿ ಮಾತನಾಡಿರುವ ವಿಜೇಂದರ್, 'ನಾನು ಪಂಜಾಬ್‌ನ ಭಾವನೆ, ಮೌಲ್ಯ ಮತ್ತು ರಕ್ತವಿರುವ ಹರ್ಯಾಣದ ಮಗ. ಒಳ್ಳೆಯ ಕಾರಣಕ್ಕಾಗಿ ನೀವು ಧ್ವನಿಯೆತ್ತಿಲ್ಲವೆಂದರೆ ನೀವು ಬದುಕಿದ್ದೂ ಸತ್ತಂತೆ,' ಎಂದಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಕ್ಕೆ ಹೊಸ ಜೆರ್ಸಿಭಾರತ vs ಆಸ್ಟ್ರೇಲಿಯಾ: ಟೆಸ್ಟ್ ಸರಣಿಗೆ ಟೀಮ್ ಇಂಡಿಯಾಕ್ಕೆ ಹೊಸ ಜೆರ್ಸಿ

ಕೇಂದ್ರದಲ್ಲಿರುವ ಬಿಜೆಪಿಯ ರೈತ ವಿರೋಧಿ ನೀತಿಗೆ ಬೇಸರ ವ್ಯಕ್ತಪಡಿಸಿರುವ ರಸ್ಲರ್ ಕರ್ತರ್ ಸಿಂಗ್ (ಪದ್ಮಶ್ರೀ ಮತ್ತು ಅರ್ಜುನ), ಹಾಕಿ ಆಟಗಾರ ಪರ್ಗತ್ ಸಿಂಗ್ (ಪದ್ಮಶ್ರೀ), ಗುರ್ಮೇಲ್ ಸಿಂಗ್ (ಅರ್ಜುನ), ರಾಜ್ಬಿರ್ ಕೌರ್ (ಅರ್ಜುನ), ಬಾಸ್ಕೆಟ್ ಬಾಲ್ ಆಟಗಾರ ಸಜ್ಜನ್ ಸಿಂಗ್ (ಅರ್ಜುನ), ಮಾಜಿ ಬಾಕ್ಸರ್ ಗುರುಬಕ್ಷ್‌ಸಿಂಗ್ (ದ್ರೋಣಾಚಾರ್ಯ) ರಾಷ್ಟ್ರೀಯ ಪ್ರಶಸ್ತಿಗಳನ್ನು ವಾಪಸ್ ನೀಡುವುದಾಗಿ ಹೇಳಿದ್ದಾರೆ.

Story first published: Thursday, December 10, 2020, 14:46 [IST]
Other articles published on Dec 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X