ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಮಿಂಚಿನ ಓಟದರಸ ಉಸೇನ್ ಬೋಲ್ಟ್ ವಿಶ್ವದಾಖಲೆಗೀಗ 10ರ ಹರೆಯ!

I ran more for medals than records: Usain Bolt

ಬೆಂಗಳೂರು, ಆಗಸ್ಟ್ 17: ಜಮೈಕಾ ಸ್ಪ್ರಿಂಟರ್ ಉಸೇನ್ ಬೋಲ್ಟ್ 100 ಮೀಟರ್‌ನಲ್ಲಿ ಮಿಂಚಿನ ಓಟದೊಂದಿಗೆ ವಿಶ್ವದಾಖಲೆ ಬರೆದು ಇಂದಿಗೆ 10 ವರ್ಷಗಳಾಗಿವೆ. ಬೋಲ್ಟ್ ಈಗ ಓಟ ನಿಲ್ಲಿಸಿದ್ದಾರೆ. ಆದರೆ ಉಸೇನ್ ಅವರ ಬಂಗಾರದ ಓಟದ ನೆನಪುಗಳು ಮಾತ್ರ ಇನ್ನೊಂದಿಷ್ಟು ಕಾಲ ಬಿರುಸಿನಲ್ಲಿ ಓಡುತ್ತಲೇ ಇರುತ್ತವೆ; ಬಹುಶಃ ಬೋಲ್ಟ್ ಹೆಸರಿನಲ್ಲಿರುವ ವಿಶ್ವದಾಖಲೆ ಮುರಿದು ಹೋಗುವವರೆಗೂ.

ಫುಟ್ಬಾಲ್ ಬೂಟು, ಕನಸು ಎರಡನ್ನೂ ತೂಗು ಹಾಕಿದ ಉಸೇನ್ ಬೋಲ್ಟ್!ಫುಟ್ಬಾಲ್ ಬೂಟು, ಕನಸು ಎರಡನ್ನೂ ತೂಗು ಹಾಕಿದ ಉಸೇನ್ ಬೋಲ್ಟ್!

2009 ಆಗಸ್ಟ್ 16ರಂದು ಜರ್ಮನಿಯ ಬರ್ಲಿನ್‌ನಲ್ಲಿ ನಡೆದ ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ಅಥ್ಲೆಟಿಕ್ಸ್ ಫೆಡರೇಶನ್ (ಐಎಎಎಫ್‌) ವರ್ಲ್ಡ್ ಚಾಂಪಿಯನ್‌ಷಿಪ್ ಕ್ರೀಡಾಕೂಟದಲ್ಲಿ ಪುರುಷರ 100 ಮೀಟರ್ ಓಟದಲ್ಲಿ ಉಸೇನ್ ಬೋಲ್ಟ್ ವಿಶ್ವದಾಖಲೆ ನಿರ್ಮಿಸಿದ್ದರು.

ಪಾಕ್ ಅಸಲಿಯತ್ತು ಬಿಡಿಸಿಟ್ಟ ಮಾಜಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್ಪಾಕ್ ಅಸಲಿಯತ್ತು ಬಿಡಿಸಿಟ್ಟ ಮಾಜಿ ಬ್ಯಾಟಿಂಗ್ ಕೋಚ್ ಗ್ರ್ಯಾಂಟ್ ಫ್ಲವರ್

ಟ್ರ್ಯಾಕ್‌ ಆ್ಯಂಡ್‌ ಫೀಲ್ಡ್‌ನಲ್ಲಿ ವೇಗದರಸನಾಗಿ ಮಿಂಚಿದ್ದ ಉಸೇನ್ ಬೋಲ್ಡ್ ನೆನಪಿನ ಗುಂಗಿನಲ್ಲಿ ಅರೆಗಳಿಗೆ ಕಳೆಯೋಣ ಬನ್ನಿ..

ವಿಶ್ವವೇ ಬೆರಗಾಯ್ತು

100 ಮೀ. ಓಟವನ್ನು ಕೇವಲ 9.58 ಸೆಕೆಂಡ್‌ನಲ್ಲಿ ಮುಗಿಸಿದ್ದ ಬೋಲ್ಟ್ ವಿಶ್ವವನ್ನೇ ನಿಬ್ಬೆರಗಾಗಿಸಿದ್ದರು, ಕ್ರೀಡಾಭಿಮಾನಿಗಳ ಮನಸೂರೆ ಗೊಳಿಸಿದ್ದರು, ಕಿಚ್ಚಿನ ಅಥ್ಲೀಟ್‌ಗಳಿಗೆ ಸ್ಫೂರ್ತಿಯೂ ಆಗಿದ್ದರು. 100 ಮೀ. ವಿಶ್ವದಾಖಲೆ ಬಳಿಕ 4ನೇ ದಿನ ಅಂದರೆ ಆಗಸ್ಟ್ 20ರಂದು 200 ಮೀ. ಓಟವನ್ನೂ 19.19 ಸೆಕೆಂಡ್‌ಗಳಲ್ಲಿ ಮುಗಿಸಿ ಇನ್ನೊಂದು ವಿಶ್ವದಾಖಲೆಯೊಂದಿಗೆ ಬೋಲ್ಟ್‌ ಮತ್ತೆ ವಿಶ್ವದಗಲ ಸುದ್ದಿಯಾಗಿದ್ದರು.

ದಾಖಲೆಯಿರೋದೇ ಮುರಿಯೋಕೆ!

10 ವರ್ಷಗಳಿಂದೀಚೆಯೂ ಮುರಿಯದ ವಿಶ್ವದಾಖಲೆಯಾಗಿ ಉಳಿದಿರುವ ಬೋಲ್ಟ್ ಸಾಧನೆಯ ಕುರಿತು ಮಾತನಾಡಿದಾಗ ಬೋಲ್ಟ್, 'ದಾಖಲೆಗಳಿರೋದೇ ಮುರಿಯೋದಕ್ಕೆ. ಆದರೆ ನಾನು ಈ ದಾಖಲೆಗಾಗಿ ಹಲವು ವರ್ಷಗಳ ಕಾಲ ಬೆವರು ಸುರಿಸಿದಂತೆ ಈ ದಾಖಲೆಯನ್ನೂ ಇನ್ನೊಂದಿಷ್ಟು ಕಾಲ ಯಾರೂ ಮುರಿಯಲಾರರು ಎಂದು ಭಾವಿಸಿದ್ದೇನೆ,' ಎಂದು ಪ್ರತಿಕ್ರಿಯಿಸಿದರು. ಬೋಲ್ಟ್ ಒಟ್ಟು 9 ಒಲಿಂಪಿಕ್ಸ್ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ವಿಭಿನ್ನ ಓಟದ ಶೈಲಿ

ಅಷ್ಟು ಸುಲಭವಾಗಿ ಮುರಿಯಲಾರದ ವಿಶ್ವದಾಖಲೆ ಬರೆದರಲ್ಲ ಬೋಲ್ಟ್? ಆ ಬಳಿಕ ಬೋಲ್ಟ್ ಮತ್ತವರ ಓಟದ ಪರಿಯ ಬಗ್ಗೆ ಕೆಲ ಅಧ್ಯಯನಗಳೂ ನಡೆದಿದ್ದವು. ಅಧ್ಯಯನದ ಪ್ರಕಾರ ಬೋಲ್ಟ್ ದೇಹ, ಅವರ ಅಭ್ಯಾಸದ ಪರಿ, ಬೋಲ್ಟ್ ಹರಿಸುವ ಬೆವರ ಹನಿ, ಅವರ ಸುಧಾರಿತ ಓಟದ ಶೈಲಿ, ಕಷ್ಟ ಸಹಿಷ್ಣುತೆಯನ್ನು ಕಲಿಸಿಕೊಡುವ ಕೆರಿಬಿಯನ್ ಹವಾಗುಣ ಎಲ್ಲವೂ ಅವರ ವಿಶ್ವದಾಖಲೆಗೆ ಸಾಕ್ಷಿಯಾಗಿತ್ತು.

ಫುಟ್ಬಾಲರ್ ಕನಸು ಕೈಗೂಡಲಿಲ್ಲ

ವಿಶೇಷವೆಂದರೆ ಆಗಸ್ಟ್ 16, 2008ರಂದೇ ಬೋಲ್ಟ್ 100 ಮೀಟರ್ ವಿಶ್ವದಾಖಲೆ(9.69s) ಬರೆದಿದ್ದರು. ಇದೇ ದಿನ 2009ರಲ್ಲಿ ವಿಶ್ವದಾಖಲೆ ಸುಧಾರಿಸಿಕೊಂಡಿದ್ದರು. ವೇಗದ ಓಟಕ್ಕಾಗಿ ಗಮನ ಸೆಳೆದಿದ್ದ ಬೋಲ್ಟ್ ಅನಂತರ ಕ್ರಮೇಣ ಫಾರ್ಮ್ ಕಳೆದುಕೊಳ್ಳಲಾರಂಭಿಸಿದ್ದರು. ಮುಂದೆ ಆಸ್ಟ್ರೇಲಿಯಾದ ಸೆಂಟ್ರಲ್ ಕೋಸ್ಟ್ ಮರೀನರ್ಸ್ ಫುಟ್ಬಾಲ್‌ ಕ್ಲಬ್‌ನಲ್ಲಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದರಾದರೂ ಫುಟ್ಬಾಲ್‌ನಲ್ಲಿ ಮುಂದುವರೆಯುವ ಅವರ ಆಸೆ ಕೈಗೂಡಲಿಲ್ಲ. ಫುಟ್ಬಾಲ್ ಬೂಟನ್ನೂ ಉಸೇನ್ ತೂಗು ಹಾಕಿಬಿಟ್ಟರು. ಅಂದ್ಹಾಗೆ ಮಹಿಳಾ ವಿಭಾಗದ 100 ಮೀಟರ್ ವಿಶ್ವದಾಖಲೆ ಅಮೆರಿಕಾದ ಫ್ಲಾರೆನ್ಸ್ ಗ್ರಿಫಿತ್ ಜಾಯ್ನರ್ (1988) ಹೆಸರಿನಲ್ಲಿದೆ.

Story first published: Sunday, August 18, 2019, 0:10 [IST]
Other articles published on Aug 18, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X