ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತೀಯ 10 ಮೀ. ಏರ್ ರೈಫಲ್ ತಂಡಕ್ಕೆ ಟೋಕಿಯೋದಲ್ಲಿ ಬರೀ 20 ನಿಮಿಷಗಳ ಅಭ್ಯಾಸಕ್ಕೆ ಅವಕಾಶ

Indias 10m air rifle teams get just 20 minutes of training in Tokyo after time slot issue

ಟೋಕಿಯೋ: 10 ಮೀಟರ್ ಏರ್ ರೈಫಲ್‌ನ ಭಾರತೀಯ ತಂಡಕ್ಕೆ ಟೋಕಿಯೋದಲ್ಲಿರುವ ಅಸಾಕಾ ಶೂಟಿಂಗ್ ರೇಂಜ್‌ನಲ್ಲಿ ಕೇವಲ 20 ನಿಮಿಷಗಳ ಕಾಲ ಅಭ್ಯಾಸ ನಡೆಸಲು ಅವಕಾಶ ಸಿಕ್ಕಿರುವ ಸಂಗತಿ ವರದಿಯಾಗಿದೆ. ಬೇರೆ ಬೇರೆ ತಂಡಗಳಿಗೆ ಅಭ್ಯಾಸ ನಡೆಸಲು ಸಮಯ ಹಂಚಿಕೆ ವೇಳೆ ಸಮಸ್ಯೆ ಬಂದಿದ್ದರಿಂದ ಭಾರತೀಯ ತಂಡಕ್ಕೆ 20 ನಿಮಿಷಗಳ ಕಾಲ ಮಾತ್ರ ಸಭ್ಯಾಸ ನಡೆಸಲು ಸಾಧ್ಯವಾಗಿದೆ.

ICC ODI rankings: ಮೇಲಕ್ಕೇರಿದ ಶಿಖರ್ ಧವನ್, 2ರಲ್ಲೇ ಉಳಿದ ವಿರಾಟ್ ಕೊಹ್ಲಿ!ICC ODI rankings: ಮೇಲಕ್ಕೇರಿದ ಶಿಖರ್ ಧವನ್, 2ರಲ್ಲೇ ಉಳಿದ ವಿರಾಟ್ ಕೊಹ್ಲಿ!

ಒಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಅತೀ ಹೆಚ್ಚಿನ ಪದಕಗಳು ಬರೋದು ಶೂಟಿಂಗ್‌ನಲ್ಲೇ. ಈ ಬಾರಿಯೂ ಭಾರತೀಯ ತಂಡದಲ್ಲಿ ಪ್ರತಿಭಾನ್ವಿತ ಶೂಟರ್‌ಗಳಿದ್ದಾರೆ. ಟೋಕಿಯೋ ಒಲಿಂಪಿಕ್ಸ್ ಉದ್ಘಾಟನಾ ಸಮಾರಂಭಕ್ಕಿನ್ನು ಕೇವಲ ಎರಡೇ ದಿನಗಳು ಬಾಕಿಯಿದ್ದರೂ ಅಲ್ಲಿನ ರೇಂಜ್‌ನಲ್ಲಿ ಅಭ್ಯಾಸ ನಡೆಸಲು ಭಾರತೀಯರಿಗೆ ಸಾಧ್ಯವಾಗಿಲ್ಲ.

ಭಾರತೀಯ ಇತರ ಶೂಟರ್‌ಗಳಿಗೆ ಅಂದರೆ ಶೂಟಿಂಗ್ ಬೇರೆ ವಿಭಾಗದ ಸ್ಪರ್ಧಿಗಳಿಗೆ ಸುಮಾರು ಎರಡು ಗಂಟೆಗಳಿಗೂ ಅಧಿಕ ಸಮಯ ಅಭ್ಯಾಸ ನಡೆಸಲು ಅವಕಾಶ ಸಿಕ್ಕಿತ್ತು. ಈ ತಂಡದಲ್ಲಿ ಅಪೂರ್ವಿ ಚಂದೇಲ, ಎಲಾವೆನಿಲ್ ವಲಾರಿವನ್ ಕೂಡ ಇದ್ದರು. ಆದರೆ 10 ಮೀ ಏರ್ ರೈಫಲ್ ತಂಡಕ್ಕೆ ಮಾತ್ರ ಸಮಯದ ಅಭಾವ ಕಾಣಸಿದ್ದಾಗಿ ತಿಳಿದು ಬಂದಿದೆ.

ಟೀಮ್ ಇಂಡಿಯಾ ಹೆಸರಿಗೆ ಮತ್ತೊಂದು ವಿಶ್ವದಾಖಲೆ ಸೇರ್ಪಡೆ!ಟೀಮ್ ಇಂಡಿಯಾ ಹೆಸರಿಗೆ ಮತ್ತೊಂದು ವಿಶ್ವದಾಖಲೆ ಸೇರ್ಪಡೆ!

"ಎಲ್ಲಾ ರಾಷ್ಟ್ರೀಯ ತಂಡಗಳ ಅಭ್ಯಾಸಕ್ಕೆ ಅದೇ ರೇಂಜ್‌ನಲ್ಲಿ ಅವಕಾಶ ಮಾಡಿಕೊಡಬೇಕಾಗಿದ್ದರಿಂದ ಸಮಯದ ಹಂಚಿಕೆಯ ವೇಳೆ ಸಮಸ್ಯೆ ಉಂಟಾಗಿ ಭಾರತೀಯ 10 ಮೀ. ಏರ್ ರೈಫಲ್ ತಂಡದ ಅಭ್ಯಾಸಕ್ಕೆ ಕಡಿಮೆ ಕಾಲಾವಕಾಶ ಲಭಿಸಿದೆ," ಎಂದು ಭಾರತೀಯ ರೈಫಲ್ ಅಸೋಸಿಯೇಶನ್ ಪಿಟಿಐಗೆ ಮಾಹಿತಿ ನೀಡಿದೆ.

Story first published: Wednesday, July 21, 2021, 23:30 [IST]
Other articles published on Jul 21, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X