ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

2 ಡಜನ್‌ಗೂ ಅಧಿಕ ಚಿನ್ನದ ಪದಕ ಗೆದ್ದರೂ ಜೀವನಕ್ಕೆ ಚಿಪ್ಸ್ ಮಾರಾಟವೇ ಆಧಾರ: ಪ್ಯಾರಾ ಶೂಟಿಂಗ್ ಸಾಧಕಿಯ ನೋವಿನ ಕಥೆ

Indias earliest para shooting star Dilraj Kaur forced to sell biscuits and chips to make ends meet

ಅವರು ಅಂಗವೈಕಲ್ಯತೆಯನ್ನು ಮೆಟ್ಟಿನಿಂತು ಸಾಧನೆಯ ಶಿಖರ ಏರಿದ ಸಾಧಕಿ. ಶೂಟಿಂಗ್‌ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಬೆಳ್ಳಿ ಪದಕವನ್ನು ಮುಡಿಸಿದ ಕ್ರೀಡಾಪಟು. ಭಾರತದ ಪ್ರಥಮ ರಾಷ್ಟ್ರೀಯ ಮಟ್ಟದಲ್ಲಿ 24 ಚಿನ್ನದ ಪದಕಗಳು ಅವರ ಕೊರಳನ್ನು ಅಲಂಕರಿಸಿದೆ. ಇಂಥಾ ಸಾಧಕಿ ಈಗ ನಿತ್ಯಜೀವನ ಸಾಗಿಸಲು ಅಕ್ಷರಶಃ ಪರದಾಡುವ ಸ್ಥಿತಿಯಲ್ಲಿದ್ದಾರೆ.

ದಿಲ್‌ರಾಜ್ ಕೌರ್ ಪ್ಯಾರಾ ಶೂಟಿಂಗ್‌ನಲ್ಲಿ ಬೆಳ್ಳಿಯ ಪದಕ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ. ಆದರೆ ಈ ಸಾಧನೆಗೆ ಯಾವುದೇ ಮಾನ್ಯತೆಗಳು ದೊರೆಯದೆ ಸಂಕಷ್ಟದಲ್ಲಿದ್ದಾರೆ. ಈಗ ಬೀದಿಬದಿಯಲ್ಲಿ ಚಿಪ್ಸ್ ಮುಂತಾದ ತಿಂಡಿಗಳನ್ನು ಮಾರಾಟ ಮಾಡಿ ಜೀವನ ನಡೆಸುವ ಸ್ಥಿತಿಯಲ್ಲಿದ್ದಾರೆ.

34ರ ಹರೆಯದ ದಿಲ್‌ರಾಜ್ ಕೌರ್ ಡೆಹ್ರಾಡೂನ್‌ನ ಗಾಂಧಿ ಪಾರ್ಕ್‌ನ ರಸ್ತೆಬದಿಯಲ್ಲಿ ಚಿಪ್ಸ್ ಹಾಗೂ ಬಿಸ್ಕೆಟ್‌ಗಳ ಮಾರಾಟವನ್ನು ಮಾಡುತ್ತಿದ್ದಾರೆ. ಈ ಬಗ್ಗೆ ಸ್ವತಃ ದಿಲ್‌ರಾಜ್ ಕೌರ್ ನೋವಿನ ಮಾತುಗಳನ್ನಾಡಿದ್ದಾರೆ. "ನಾನು ದೇಶಕ್ಕಾಗಿ ಪದಕವನ್ನು ಗೆದ್ದಿದ್ದೇನೆ ಹೀಗಾಗಿ ನನ್ನ ಮನೆಯಲ್ಲಿನ್ನು ಸ್ವಲ್ಪ ಬೆಳಕು ಇರುತ್ತದೆ ಎಂದು ಭಾವಿಸಿದ್ದೆ, ಆದರೆ ಅದಿಲ್ಲ. ದೇಶದ ಅವಶ್ಯಕತೆಗೆ ನಾನು ಅಲ್ಲಿದ್ದೆ, ಆದರೆ ಈಗ ನನ್ನ ಅಗತ್ಯಕ್ಕೆ ಯಾರೂ ಇಲ್ಲ" ಎಂದು ಬೇಸರದಿಂದ ಪ್ರತಿಕ್ರಿಯಿಸಿದ್ದಾರೆ.

ಏರ್‌ ಪಿಸ್ತೂಲ್ ವಿಭಾಗದಲ್ಲಿ ಭಾರತದ ಅತ್ಯುತ್ತಮ ಪ್ಯಾರಾಶೂಟರ್ ಎನಿಸಿಕೊಂಡಿದ್ದರು ದಿಲ್‌ರಾಜ್. ತಮ್ಮ ವೃತ್ತಿ ಬದುಕಿನಲ್ಲಿ ಎರಡು ಡಜನ್‌ಗೂ ಅಧಿಕ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಪದಕಗಳನ್ನು ಗೆದ್ದಿದ್ದಾರೆ. ಈಗ ಡೆಹ್ರಾಡೂನ್‌ನಲ್ಲಿ ತಮ್ಮ ತಾಯಿ ಗುರ್‌ಬೀತ್ ಅವರೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ.

"ನಮ್ಮ ಆರ್ಥಿಕ ಪರಿಸ್ಥಿತಿ ತುಂಬಾ ಕಠಿಣವಾಗಿದೆ. ಆ ಕಾರಣಕ್ಕಾಗಿ ನಾನು ದಿನದ ಹಸಿವು ನೀಗಿಸಲು ಬಿಸ್ಕೆಟ್ ಹಾಗೂ ಚಿಪ್ಸ್‌ಗಳನ್ನು ಮಾರಾಟ ಮಾಡುತ್ತಿದ್ದೇನೆ. ಕ್ರೀಡಾ ಕ್ರೇತ್ರದಲ್ಲಿ ಮಾಡಿದ ಹಲವಾರು ಸಾಧನೆಯನ್ನು ಪಡಿಗಣಿಸಿ ಸರ್ಕಾರಿ ಕೆಲಸಕ್ಕಾಗಿ ಮನವಿಯನ್ನು ಮಾಡಿದ್ದೇನೆ. ಆದರೆ ಈವರೆಗೂ ನನಗೆ ಯಾವುದೇ ನೆರವು ದೊರೆತಿಲ್ಲ" ಎಂದು ದಿಲ್‌ರಾಜ್ ಕೌರ್ ಬೇಸರದಿಂದ ಪ್ರತಿಕ್ರಿಯೆ ನೀಡಿದ್ದಾರೆ.

Story first published: Thursday, June 24, 2021, 13:28 [IST]
Other articles published on Jun 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X