ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ಸ್: ಜಿಮ್ನಾಸ್ಟಿಕ್‌ನಲ್ಲಿ ಫೈನಲ್ ಪ್ರವೇಶಿಸಲು ವಿಫಲರಾದ ಪ್ರಣತಿ ನಾಯಕ್

Indias lone gymnast Pranati Nayak fails to enter finals in Tokyo Olympics

ಟೋಕಿಯೋ, ಜುಲೈ 25: ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅರ್ಹತೆಯನ್ನು ಗಿಟ್ಟಿಸಿರುವ ಭಾರತದ ಏಕೈಕ ಜಿಮ್ನಾಸ್ಟಿಕ್ ಪಟು ಪ್ರಣತಿ ನಾಯಕ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ ಸ್ಪರ್ಧೆಯಲ್ಲಿ ಫೈನಲ್ ಪ್ರವೇಶಿಸಲು ವಿಫಲರಾಗಿದ್ದಾರೆ. ಪಶ್ಚಿಮ ಬಂಗಾಳ ಮೂಲದ 26ರ ಹರೆಯದ ಪ್ರಣತಿ ನಾಯಕ್ ಫ್ಲೋರ್ ಎಕ್ಸಸೈಸ್, ವಾಲ್ಟ್, ಅನ್‌ಇವನ್ ಬಾರ್ಸ್ ಹಾಗೂ ಬ್ಯಾಲೆನ್ಸ್ ಬೀಮ್ ಈ ನಾಲ್ಕು ವಿಭಾಗಗಳಲ್ಲಿ 42.565 ಅಂಕಗಳನ್ನು ಗಳಿಸಿದರು. ಏರಿಕಾಯೆ ಜಿಮ್ನಾಸ್ಟಿಕ್ ಸೆಂಟರ್‌ನಲ್ಲಿ ಈ ಸ್ಪರ್ಧೆ ನಡೆಯಿತು.

2ನೇ ಉಪವಿಭಾಗದ ಅಂತ್ಯದಲ್ಲಿ ಅವರು ಒಟ್ಟಾರೆ 29ನೇ ಸ್ಥಾನವನ್ನು ಗಳಿಸಿದರು. ಒಟ್ಟು ಐದು ಉಪವಿಭಾಗಗಳಿದ್ದು ಇದರಲ್ಲಿ ಎಲ್ಲಾ ನಾಲ್ಕು ಉಪವಿಭಾಗದಲ್ಲೂ ಅತಿ ಹೆಚ್ಚು ಅಂಕಗಳಿಸಿದ ಅಗ್ರ 24 ಜಿಮ್ನಾಸ್ಟ್‌ಗಳು ಜುಲೈ 29 ರಂದು ನಡೆಯಲಿರುವ ಆಲ್-ಅರೌಂಡ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌: ರೋಯಿಂಗ್‍ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಅರ್ಜುನ್ ಮತ್ತು ಅರವಿಂದ್ಟೋಕಿಯೋ ಒಲಿಂಪಿಕ್ಸ್‌: ರೋಯಿಂಗ್‍ನಲ್ಲಿ ಸೆಮಿಫೈನಲ್‌ ಪ್ರವೇಶಿಸಿದ ಅರ್ಜುನ್ ಮತ್ತು ಅರವಿಂದ್

ಇನ್ನು ಪ್ರತಿ ವಿಭಾಗದಲ್ಲಿ ಅಗ್ರ 8 ಜಿಮ್ನಾಸ್ಟ್‌ಗಳು ತಮ್ಮ ವಿಭಾಗದ ವೈಯಕ್ತಿಕ ಇವೆಂಟ್‌ನ ಫೈನಲ್‌ನಲ್ಲಿ ಸ್ಪರ್ಧಿಸಲಿದ್ದಾರೆ. ಈ ಫೈನಲ್ ಪಂದ್ಯಗಳು ಆಗಸ್ಟ್ 1-3ರ ಮಧ್ಯೆ ನಡೆಯಲಿದೆ. ಆದರೆ ಪ್ರಣತಿ ನಾಯಕ್ ಎಲ್ಲಾ ವಿಭಾಗಗಳಲ್ಲಿ ಫೈನಲ್ ಪ್ರವೇಶ ಪಡೆಯುವಲ್ಲಿ ವಿಫಲವಾಗಿದ್ದು ತಮ್ಮ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಚೀನಾದಲ್ಲಿ ಮೇ 29 ರಿಂದ ಜೂನ್ 1 ರವರೆಗೆ ನಡೆಯಬೇಕಿದ್ದ 9ನೇ ಹಿರಿಯ ಏಷ್ಯನ್ ಚಾಂಪಿಯನ್‌ಶಿಪ್‌ಗಳನ್ನು ರದ್ದುಗೊಳಿಸಲಾಗಿತ್ತು. ನಂತರ ಕಾಂಟಿನೆಂಟಲ್ ಕೋಟಾ ಮೂಲಕ ಅರ್ಹತೆ ಪಡೆದ ನಾಯಕ್‌ಗೆ ಒಲಿಂಪಿಕ್ಸ್‌ಗೆ ತಯಾರಾಗಲು ಹೆಚ್ಚಿನ ಸಮಯಾವಕಾಶ ದೊರೆತಿರಲಿಲ್ಲ. 2019ರ ಏಷ್ಯನ್ ಆರ್ಟಿಸ್ಟಿಕ್ ಜಿಮ್ನಾಸ್ಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ವಾಲ್ಟ್‌ ವಿಭಾಗದಲ್ಲಿ ಪ್ರಣತಿ ಕಂಚಿನ ಪದಕ ಗೆದ್ದಿದ್ದರು.

Story first published: Sunday, July 25, 2021, 12:13 [IST]
Other articles published on Jul 25, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X