ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ರಷ್ಯಾದ ಮಾಸ್ಕೋದಲ್ಲಿ ಆಯೋಜನೆಯಾಗಬೇಕಿದ್ದ ವಿಶ್ವ ಚೆಸ್ ಒಲಿಂಪಿಯಾಡ್ ಆತಿಥ್ಯ ಭಾರತದ ಪಾಲು

India will host 44th edition of Chess Olympiad 2022 at Chennai

ರಷ್ಯಾದ ಮಾಸ್ಕೋದಲ್ಲಿ ನಡೆಯಬೇಕಿದ್ದ 44 ವಿಶ್ವ ಚೆಸ್ ಒಲಿಂಪಿಯಾಡ್ ಭಾರತದ ಚೆನ್ನೈನಲ್ಲಿ ಈ ವರ್ಷಾಂತ್ಯದಲ್ಲಿ ಆಯೋಜನೆಯಾಗಲಿದೆ. ಈ ವಿಚಾರವಾಗಿ ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಯ್ಯಾಲಿನ್ ಮಂಗಳವಾರ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

"ಭಾರತದ ಚೆಸ್ ರಾಜಧಾನಿ 44ನೇ ಚೆಸ್ ಒಲಿಂಪಿಯಾಡ್‌ನ ಆತಿಥ್ಯ ವಹಿಸಲಿದೆ ಎಂದು ಹೇಳಲು ಹರ್ಷವಾಗುತ್ತಿದೆ. ಇದು ತಮಿಳುನಾಡಿಗೆ ಹೆಮ್ಮೆಯ ಸಂಗತಿಯಾಗಿದೆ. ವಿಶ್ವ ಚೆಸ್‌ನ ಎಲ್ಲಾ ರಾಜ, ರಾಣಿಯರನ್ನು ಚೆನ್ನೈ ಆತ್ಮೀಯವಾಗಿ ಸ್ವಾಗತಿಸುತ್ತಿದೆ!" ಎಂದು ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟ್ಯಾಲಿನ್ ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ.

ಇನ್ನು ಆಲ್‌ ಇಂಡಿಯಾ ಚೆಸ್ ಪೆಡರೇಶನ್(ಎಐಎಫ್‌ಸಿ) ಕೂಡ ಈ ವಿಚಾರವಾಗಿ ಟ್ವೀಟ್ ಮಾಡಿದೆ."ಇದೀಗ ಅಧಿಕೃತವಾಗಿದೆ. 44ನೇ ವಿಶ್ವ ಚೆಸ್ ಒಲಿಂಪಿಯಾಡ್‌ಗೆ ಭಾರತ ಆತಿಥ್ಯವಹಿಸಿಕೊಳ್ಳಲಿದ್ದು ಚೆನ್ನೈನಲ್ಲಿ ಟೂರ್ನಿ ನಡೆಯಲಿದೆ" ಎಂದು ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದೆ. ಈ ಆತಿಥ್ಯವನ್ನು ವಹಿಸಿಕೊಳ್ಳುವ ಸಲುವಾಗಿ ಆಲ್‌ ಇಂಡಿಯಾ ಚೆಸ್ ಫೆಡರೇಶನ್ ವಾರದ ಹಿಂದೆ 10 ಮಿಲಿಯನ್ ಯುಎಸ್ ಡಾರನ್ ಮೊತ್ತವನ್ನು ಗ್ಯಾರಂಟಿಯಾಗಿ ಪಾವತಿ ಮಾಡಿತ್ತು. ರಷ್ಯಾ ಫೆಬ್ರವರಿ 24ರಿಂದ ಯುಕ್ರೇನ್ ಮೇಲೆ ಆಕ್ರಮಣ ಮಾಡಿದ ಪರಿಣಾಮವಾಗಿ ಮಾಸ್ಕೋದಲ್ಲಿ ನಡೆಯಬೇಕಿದ್ದು ಈ ಪ್ರತಿಷ್ಟಿತ ಟೂರ್ನಿ ಸ್ಥಳಾಂತರವಾಗಿದೆ.

ಯುಕ್ರೇನ್ ಮೇಲೆ ರಷ್ಯಾ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿದ ನಂತರ ಅಂತಾರಾಷ್ಟ್ರೀಯ ಚೆಸ್ ಪೆಡರೇಶನ್(FIDE) ಟೂರ್ನಿಯ ಆತಿಥ್ಯಕ್ಕೆ ಬಿಡ್ ಕರೆದಿತ್ತು. ಹೀಗಾಗಿ ಎಐಎಫ್‌ಸಿ ಒಲಿಂಪಿಯಾಡ್ ಆತಿಥ್ಯ ವಹಿಸಲು ಬಿಡ್ ಮಾಡಲು ಮುಂದಾಗುತ್ತಿರುವುದಾಗಿ ತಿಳಿಸಿತ್ತು. ಇದಕ್ಕಾಗಿ 10 ಮಿಲಿಯನ್ ಯೂಎಸ್ ಡಾಲರ್(ಸುಮಾರು 75 ಕೋಟಿ ರೂಪಾಯಿ) ಮೊತ್ತದ ಬಜೆಟ್ ಮೀಸಲಿಡುದಾಗಿ ಕೂಡ ತಿಳಿಸಿತ್ತು. ಚೆಸ್ ಒಲಿಂಪಿಯಾಡ್ ಎರಡು ವರ್ಗಳಿಗೊಮ್ಮೆ ನಡೆಯುವ ತಂಡದ ಈವೆಂಟ್ ಆಗಿದ್ದು ಇದರಲ್ಲಿ ಸುಮಾರು 190 ದೇಶಗಳ ತಂಡಗಳು ಎರಡು ವಾರಗಳ ಅವಧಿಕಾಲ ಸ್ಪರ್ಧಿಸುತ್ತವೆ.

Story first published: Thursday, March 17, 2022, 21:26 [IST]
Other articles published on Mar 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X