ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಆಗ ಕ್ರೀಡಾಪಟು, ಈಗ ಪೊಲೀಸ್: ನಾಲ್ವರು ಕೊರೊನಾ ವಾರಿಯರ್ಸ್ ಕತೆ!

Indian athletes on cop duty amid COVID-19 lockdown

ನವದೆಹಲಿ: ಆಗ ಕ್ರೀಡಾಪಟುವಾಗಿದ್ದು ಭಾರತಕ್ಕೆ ಗೆಲುವಿನ ಸಂಭ್ರಮ ತರಲು ಕೊಸರಾಡುತ್ತಿದ್ದವರು ಈಗ ಕೊರೊನಾವೈರಸ್ ವಿರುದ್ಧ ಹೋರಾಟಕ್ಕೆ ಕೈಜೋಡಿಸಿ ಹೀರೋಗಳಾಗಿ ಕಾಣಿಸಿಕೊಂಡಿದ್ದಾರೆ. ಮಾರಕ ಕೋವಿಡ್-19 ಹತ್ತಿಕ್ಕುವ ಸಲುವಾಗಿ ಭಾರತದಾದ್ಯಂತ ನಿಷೇಧ ಜಾರಿಯಲ್ಲಿದೆ. ಈ ವೇಳೆ ಜನರು ಕಾನೂನು ಪಾಲಿಸುವಂತೆ ನೋಡುಕೊಳ್ಳುವಲ್ಲಿ ಪೊಲೀಸರ ಪಾತ್ರ ಮಹತ್ವದ್ದಾಗಿದೆ. ಹೀಗಾಗಿ ಆಗ ಕ್ರೀಡಾಪಟುಗಳಾಗಿದ್ದವರಿಗೆ ಭಾರತದ ರಕ್ಷಣೆಯ ಜವಾವ್ದಾರಿ ಹೊರಿಸಲಾಗಿದೆ.

'ವೃತ್ತಿ ಬದುಕಿನ ಕರಾಳ ಕ್ಷಣವದು': ದುಃಖಕರ ಸಂದರ್ಭ ನೆನೆದ ಹಿಟ್‌ಮ್ಯಾನ್'ವೃತ್ತಿ ಬದುಕಿನ ಕರಾಳ ಕ್ಷಣವದು': ದುಃಖಕರ ಸಂದರ್ಭ ನೆನೆದ ಹಿಟ್‌ಮ್ಯಾನ್

ವಿಶ್ವದಲ್ಲೆಡೆ ಕೊರೊನಾವೈರಸ್ ಸೋಂಕಿತರ ಸಂಖ್ಯೆಯೀಗ 54,94,455ಕ್ಕೇರಿದೆ. ಇದರಲ್ಲಿ 3,46,434 ಮಂದಿ ಸಾವನ್ನಪ್ಪಿದ್ದಾರೆ. 22,98,545 ಮಂದಿ ಗುಣಮುಖರಾಗಿದ್ದಾರೆ. ಭಾರತದಲ್ಲೂ ಆತಂಕ ರೀತಿಯಲ್ಲಿ ಹೆಚ್ಚುತ್ತಿರುವ ಸೋಂಕಿತರ ಸಂಖ್ಯೆ ತಡೆಯಲು ಭಾರತ, ನಿಷೇಧದ ಮೊರೆ ಹೋಗಿದೆ.

ಒಂದು ಗುಡ್‌ನ್ಯೂಸ್ ಒಂದು ಬ್ಯಾಡ್‌ನ್ಯೂಸ್.. ತಂದೆಗೆ ಚಾಹಲ್ ಹೇಳಿದ ಒಂದು ಗುಡ್‌ನ್ಯೂಸ್ ಒಂದು ಬ್ಯಾಡ್‌ನ್ಯೂಸ್.. ತಂದೆಗೆ ಚಾಹಲ್ ಹೇಳಿದ "ಶಾಕಿಂಗ್" ಸಂಗತಿ! ವಿಡಿಯೋ

ಆಗ ಕ್ರೀಡಾಪಟುವಾಗಿದ್ದು, ಈಗ ಪೊಲೀಸ್ ಕರ್ತವ್ಯ ಮಾಡುತ್ತಿರುವ ಹೆಮ್ಮೆಯ ಭಾರತೀಯ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಜೋಗೀಂದರ್ ಶರ್ಮಾ

ಜೋಗೀಂದರ್ ಶರ್ಮಾ

ಟೀಮ್ ಇಂಡಿಯಾದ ಪರ 4 ಏಕದಿನ ಪಂದ್ಯ, 4 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ, ಟಿ20 ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ 36ರ ಹರೆಯದ ಜೋಗೀಂದರ್ ಶರ್ಮಾ ಹರ್ಯಾಣದಲ್ಲಿ ಡೆಪ್ಯುಟಿ ಸುಪರಿಂಟೆಂಡೆಂಟ್‌ ಆಫ್ ಪೊಲೀಸ್ ಆಗಿದ್ದಾರೆ. ಸದ್ಯ ಕೊರೊನಾ ಕಾರಣ ನಿಷೇಧ ಜಾರಿಯಲ್ಲಿರುವುದರಿಂದ ಬೀಟ್ ಕರ್ತವ್ಯದಲ್ಲಿದ್ದಾರೆ.

ಅಜಯ್ ಠಾಕೂರ್

ಅಜಯ್ ಠಾಕೂರ್

ಏಷ್ಯನ್ ಗೇಮ್ಸ್ ಕಬಡ್ಡಿ ಚಾಂಪಿಯನ್ ಅಜಯ್ ಠಾಕೂರ್ ಸಹ ಈಗ ಪೊಲೀಸ್ ಆಗಿ ಕೊರೊನಾ ವೈರಸ್ ಲಾಕ್‌ಡೌನ್ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅರ್ಜುನ ಮತ್ತು ಪದ್ಮಶ್ರೀ ಪ್ರಶ್ತಿಗಳನ್ನು ಗೆದ್ದಿರುವ ಠಾಕೂರ್ ಈಗ ಹಿಮಾಚಲ್ ಪ್ರದೇಶದಲ್ಲಿ ಡಿಎಸ್‌ಪಿ ಆಗಿದ್ದಾರೆ.

ಅಖಿಲ್ ಕುಮಾರ್

ಅಖಿಲ್ ಕುಮಾರ್

ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಭಾರತ ಪರ ಬಂಗಾರ ಗೆದ್ದಿರುವ ಬಾಕ್ಸರ್ ಅಖಿಲ್ ಕುಮಾರ್ ಕೂಡ ಈಗ ಗುರುಗ್ರಾಮದಲ್ಲಿ ಎಸಿಪಿ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಸೆಪ್ಟೆಂಬರ್‌ನಲ್ಲಿ ಕುಮಾರ್ ಪೊಲೀಸ್‌ ಹುದ್ದೆ ಅಲಂಕರಿಸಿದ್ದರು. ಅಂದ್ಹಾಗೆ ಜೋಗೀಂದರ್ ಶರ್ಮಾ ಮತ್ತು ಅಖಿಲ್ ಕುಮಾರ್ ಇಬ್ಬರೂ ಒಳ್ಳೆಯ ಸ್ನೇಹಿತರು.

ಜಿತೇಂದರ್ ಕುಮಾರ್

ಜಿತೇಂದರ್ ಕುಮಾರ್

ಎರಡು ಬಾರಿ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ, 2006 ಕಾಮನ್‌ವೆಲ್ತ್ ಬಾಕ್ಸಿಂಗ್‌ನಲ್ಲಿ ಭಾರತಕ್ಕೆ ಕಂಚಿನ ಪದಕ ಗೆದ್ದಿದ್ದ ಬಾಕ್ಸರ್ ಜಿತೇಂದರ್ ಕುಮಾರ್ ಹರ್ಯಾಣದ ರಿವಾರಿಯಲ್ಲಿ ಎಸಿಪಿಯಾಗಿ ಪೊಲೀಸ್ ಸೇವೆಯಲ್ಲಿದ್ದಾರೆ. ಜಿತೇಂದರ್ ಅವರು ಅಗತ್ಯವಿದ್ದವರಿಗೆ ಆಹಾರ, ಔಷಧಿ ತಲುಪಿಸುವ ಕರ್ತವ್ಯ ಮಾಡುತ್ತಿದ್ದಾರೆ.

Story first published: Monday, May 25, 2020, 20:10 [IST]
Other articles published on May 25, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X