ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಭಾರತದ ಮಿಕ್ಸ್ಡ್ ರಿಲೇ ತಂಡ ಗೆದ್ದ ಬೆಳ್ಳಿ ಪದಕದ ಬಣ್ಣ ಬಂಗಾರಕ್ಕೆ ಬದಲು!

Indian mixed relay squads silver at Asian Games upgraded to gold

ನವದೆಹಲಿ, ಜುಲೈ 23: ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಮಿಕ್ಸ್ಡ್‌ ರಿಲೇ ತಂಡ ಗೆದ್ದಿದ್ದ ಬೆಳ್ಳಿ ಪದಕ ಬಂಗಾರಕ್ಕೆ ಬದಲಾಗಿದೆ. 2018ರಲ್ಲಿ ಇಂಡೋನೇಷ್ಯಾದ ಜಕಾರ್ತಾದಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್‌ನ ಅಥ್ಲೆಟಿಕ್ಸ್ ವಿಭಾಗದ ಮಿಕ್ಸ್ಡ್‌ ರಿಲೇ ಸ್ಪರ್ಧೆಯಲ್ಲಿ ಭಾರತ ತಂಡ ಬೆಳ್ಳಿ ಪದಕ ಗೆದ್ದಿತ್ತು. ಆ ಬೆಳ್ಳಿಯ ಪದಕಕ್ಕೀಗ ಬಂಗಾರದ ಮಣ್ಣನೆ ದೊರೆತಿದೆ.

 ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು! ಏಕದಿನ ಅತ್ಯಧಿಕ ಸಿಕ್ಸ್‌ ದಾಖಲೆ: ಟಾಪ್ 10 ಪಟ್ಟಿಯಲ್ಲಿ ಭಾರತೀಯರೇ ಹೆಚ್ಚು!

ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಮೊಹಮ್ಮದ್ ಅನಾಸ್, ಎಂಆರ್ ಪೂವಮ್ಮ, ಹಿಮಾ ದಾಸ್ ಮತ್ತು ಅರೋಕಿಯಾ ರಾಜೀವ್ ಅವರಿದ್ದ ತಂಡ 4X400 ಮೀ. ಮಿಕ್ಸ್ಡ್‌ ರಿಲೇಯಲ್ಲಿ ಬೆಳ್ಳಿಯ ಪದಕ ಗೆದ್ದಿತ್ತು. ಆ ಬೆಳ್ಳಿ ಪದಕವನ್ನು ಬಂಗಾರಕ್ಕೆ ನವೀಕರಿಸಲಾಗಿದೆ.

ಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್‌ಗೆ ನಾವು ಸಿದ್ಧ ಆದರೆ..: ಪಿಸಿಬಿ ಅಧ್ಯಕ್ಷಭಾರತದೊಂದಿಗೆ ದ್ವಿಪಕ್ಷೀಯ ಕ್ರಿಕೆಟ್‌ಗೆ ನಾವು ಸಿದ್ಧ ಆದರೆ..: ಪಿಸಿಬಿ ಅಧ್ಯಕ್ಷ

ಮಹಿಳಾ ವಿಭಾಗದ 400 ಮೀ. ಹರ್ಡಲ್ಸ್ ಸ್ಪರ್ಧೆಯಲ್ಲಿ ಭಾರತದ ಅನು ರಾಘವನ್ 4ನೇ ಸ್ಥಾನ ಪಡೆದಿದ್ದರು. ಅವರಿಗೀಗ 3ನೇ ಸ್ಥಾನ ನೀಡಲಾಗಿದೆ. ಮಿಕ್ಡ್ಸ್‌ ರೀಲೇ ಸ್ಪರ್ಧೆಯಲ್ಲಿ ಬಂಗಾರ ಗೆದ್ದಿದ್ದ ಬಹ್ರೇನ್ ರಿಲೇ ತಂಡ ಅನರ್ಹಗೊಂಡಿರುವುದರಿಂದ ಪದಕ ಮತ್ತು ಸ್ಪರ್ಧಾ ವಿಜೇತರ ಸ್ಥಾನಗಳಲ್ಲಿ ಬದಲಾವಣೆಗಳಾಗಿವೆ.

ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!ಚೆಕ್‌ ಮಾಡದ ಹೊರತು ನೀವು ನಂಬಲಾಗದ ಕ್ರಿಕೆಟ್‌ನ 5 ಸತ್ಯ ಸಂಗತಿಗಳು!

4x400 ಮಿಕ್ಸ್ಡ್‌ ರಿಲೇ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿದ್ದ ಬಹ್ರೇನ್ ತಂಡದ ಓಟಗಾರ್ತಿ ಕೆಮಿ ಅಡೆಕೋಯಾ ಉದ್ದೀಪನ ಮದ್ದು ಸೇವಿಸಿರುವುದು ಸಾಭೀತಾಗಿದ್ದರಿಂದ ಅವರನ್ನು ಅನರ್ಹಗೊಳಿಸಿ, 4 ವರ್ಷಗಳ ಕಾಲ ನಿಷೇಧಿಸಲಾಗಿದೆ. ಕೆಮಿ ಪಾಲ್ಗೊಂಡಿದ್ದ ಸ್ಪರ್ಧೆಯ ಫಲಿತಾಂಶವನ್ನೂ ಅನರ್ಹಗೊಳಿಸಲಾಗಿದೆ. ಹೀಗಾಗಿ ಪದಕ ವಿಜೇತರಲ್ಲಿ ಬದಲಾವಣೆಗಳಾಗಿವೆ.

Story first published: Friday, August 14, 2020, 16:10 [IST]
Other articles published on Aug 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X