ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ISSF ಶೂಟಿಂಗ್ ವಿಶ್ವಕಪ್ 2022: ಬೆಳ್ಳಿ ಗೆದ್ದ ಭಾರತೀಯ ಶೂಟರ್ ಅಂಜುಮ್ ಮೌದ್ಗಿಲ್

Indian Shooter Anjum Moudgil won silver medal at ISSF Shooting World Cup 2022

ಭಾರತದ ಒಲಿಂಪಿಯನ್ ಅಂಜುಮ್ ಮೌದ್ಗಿಲ್ ಐಐಎಸ್‌ಎಸ್‌ಎಫ್ ಶೂಟಿಂಗ್ ವಿಶ್ವಕಪ್‌ನಲ್ಲಿ ಶ್ರೇಷ್ಠ ಸಾಧನೆ ಮಾಡಿದ್ದಾರೆ. ಮಹಿಳೆಯರ 50 ಮೀ. ರೈಫಲ್ 3 ಪೊಸಿಶನ್ಸ್ ವಿಭಾಗದಲ್ಲಿ ಬೆಳ್ಳಿಯ ಪದಕವನ್ನು ಅಂಜುಮ್ ಕೊರಳಿಗೇರಿಸಿಕೊಂಡಿದ್ದಾರೆ. ಅಜರ್ಬೈಜಾನ್‌ನ ಬಾಕುವಿನಲ್ಲಿ ನಡೆಯುತ್ತಿರುವ ಶೂಟಿಂಗ್ ವಿಶ್ವಕಪ್‌ನಲ್ಲಿ ಭಾರತದ ಶೂಟರ್ ಈ ಸಾಧನೆ ಮಾಡಿ ಮಿಂಚಿದ್ದಾರೆ.

ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಅಂಜುಮ್ ಮೌದ್ಗಿಲ್ ಅವರಿಗೆ ಚಿನ್ನದ ಪದಕ ಗೆಲ್ಲುವ ಅವಕಾಶವಿತ್ತು. ಈ ಸೆಣೆಸಾಟದಲ್ಲಿ ಡೆನ್ಮಾರ್ಕ್‌ನ ಶೂಟರ್ ರಿಕ್ಕೆ ಮಯಿಂಗ್ ಇಬೆನ್ಸ್ ಅಂಜುಮ್‌ಗೆ ಸ್ಪತಿಸ್ಪರ್ಧಿಯಾಗಿದ್ದರು. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಸ್ಪರ್ಧೆಯಲ್ಲಿ ಅಂಜುಮ್ 406.5 ಅಂಕಗಳನ್ನು ಗೆದ್ದು ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿದ್ದಾರೆ. ಟೂರ್ನಿಯುದ್ದಕ್ಕೂ ಅದ್ಭುತವಾದ ಪ್ರದರ್ಶನ ನಿಡಿದ ಅಂಜುಮ್ ಫೈನಲ್‌ನಲ್ಲಿ 12-16 ಅಂತರದಿಂದ ಸೋಲು ಕಂಡಿದ್ದಾರೆ. ಡೆನ್ಮಾರ್ಕ್‌ನ ರಿಕ್ಕೆ ಮಯಿಂಗ್ ಇಬೆನ್ಸ್ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದಾರೆ.

ರಣಜಿ ನಾಕೌಟ್ಸ್, IND vs SA, ಫ್ರೆಂಚ್ ಓಪನ್ ಸೇರಿದಂತೆ ಜೂನ್ ತಿಂಗಳ ಸಂಪೂರ್ಣ ಕ್ರೀಡಾ ಕ್ಯಾಲೆಂಡರ್ರಣಜಿ ನಾಕೌಟ್ಸ್, IND vs SA, ಫ್ರೆಂಚ್ ಓಪನ್ ಸೇರಿದಂತೆ ಜೂನ್ ತಿಂಗಳ ಸಂಪೂರ್ಣ ಕ್ರೀಡಾ ಕ್ಯಾಲೆಂಡರ್

ಇನ್ನು ಶೂಟಿಂಗ್ ವಿಶ್ವಕಪ್‌ನಲ್ಲಿ ಅಂಜುಮ್ ಮೌದ್ಗಿಲ್ ಸಾಧನೆಗೆ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ(SAI) ಅಭಿನಂದನೆಯನ್ನು ತಿಳಿಸಿದೆ. ಟ್ವೀಟ್ ಮಾಡಿರುವ SAI "ಬಾಕುವಿನಲ್ಲಿ ನಡೆಯುತ್ತಿರುವ ISSF ಶೂಟಿಂಗ್‌ನಲ್ಲಿ ಅಂಜುಮ್ ಪದಕವನ್ನು ಗೆದ್ದಿದ್ದಾರೆ. ಮಹಿಳೆಯರ 50 ಮೀ. ರೈಫಲ್ 3 ಪೊಸಿಶನ್ಸ್ ವಿಭಾಗದಲ್ಲಿ 406.5 ಅಂಕಗಳನ್ನು ಗಳಿಸುವ ಮೂಲಕ ಅಂಜುಮ್ ಬೆಳ್ಳಿಯ ಪದಕವನ್ನು ಗೆದ್ದುಕೊಂಡಿದ್ದಾರೆ. ಅವರಿಗೆ ಅಭಿನಂದನೆಗಳು" ಎಂದು ಸಾಯ್ ಟ್ವೀಟ್ ಮಾಡಿ ಅಭಿನಂದಿಸಿದೆ.

ಈ ಪದಕದೊಂದಿಗೆ ಈ ವಿಶ್ವಕಪ್‌ನಲ್ಲಿ ಭಾರತ ನಾಲ್ಕನೇ ಪದಕವನ್ನು ಗೆದ್ದುಕೊಂಡಂತಾಗಿದೆ. ಇದಕ್ಕೂ ಮುನ್ನ ಭಾರತ ಪುರುಷರ 3 ಪೊಸಿಶನ್‌ನಲ್ಲಿಯೂ ಭಾರತ ಬೆಳ್ಳಿ ಪದಕವನ್ನು ಗೆದ್ದುಕೊಂಡಿತ್ತು. ಇನ್ನು ಭಾರತದ ಶೂಟರ್ ಸ್ವಪ್ನಿಲ್ ಕುಸಲೆ ಪುರುಷರ 50 ಮೀಟರ್ ರೈಫಲ್ಸ್ 3 ಪೊಸಿಶನ್‌ನಲ್ಲಿ ಬೆಳ್ಳಿ ಪದಕವನ್ನು ಗೆದ್ದುಕೊಂಡಿದ್ದಾರೆ. ಮತ್ತೊಂದೆಡೆ ಮಹಿಳೆಯರ 10 ಮೀಟರ್ ಏರ್ ರೈಫಲ್ ಸ್ಪರ್ಧೆಯಲ್ಲಿ ಎಲವನಿಲ್ ವಲರಿವನ್, ರಮಿತಾ ಹಾಗೂ ಶ್ರೇಯಾ ಅಗರ್ವಾಲ್ ಅವರನ್ನೊಳಗೊಂಡ ತಂಡ ಚಿನ್ನದ ಪದಕವನ್ನು ಗೆದ್ದುಕೊಂಡಿತ್ತು. ಡೆನ್ಮಾರ್ಕ್ ವಿರುದ್ಧ ಭಾರತೀಯ ಮಹಿಳೆಯರ ತಂಡ 17-5 ಅಂತರಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸಿತು.

ಮೇ 17ರಿಂದ ಈ ಐಎಸ್‌ಎಸ್‌ಫ್ ಶೂಟಿಂಗ್ ವಿಶ್ವಕಪ್ ಆರಂಭವಾಗಿದ್ದು ಜೂನ್ 7ರಂದು ಅಂತ್ಯವಾಗಲಿದೆ.

Story first published: Friday, June 3, 2022, 21:57 [IST]
Other articles published on Jun 3, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X