ಮೊನಾಕೋ, ಅಕ್ಟೋಬರ್ 9: ಉದ್ದೀಪನ ಮದ್ದು ಸೇವಿಸಿದ್ದಕ್ಕಾಗಿ ಭಾರತದ ಸ್ಪ್ರಿಂಟರ್ ನಿರ್ಮಲಾ ಶಿಯೋರನ್ ಅವರಿಗೆ 4 ವರ್ಷಗಳ ನಿಷೇಧ ಶಿಕ್ಷೆ ವಿಧಿಸಲಾಗಿದೆ. ಅಲ್ಲದೆ ಅವರಿಂದ 2017ರ ಏಷ್ಯನ್ ಚಾಂಪಿಯನ್ಷಿಪ್ನ 2 ಪದಕಗಳನ್ನು ವಾಪಸ್ ಪಡೆದುಕೊಳ್ಳಲಾಗಿದೆ.
ಅಜರುದ್ದೀನ್ ಮಗನ ಜತೆ ಸಾನಿಯಾ ಮಿರ್ಜಾ ತಂಗಿ ಮದುವೆ
ಭಾರತದಲ್ಲಿ 2018ರ ಜೂನ್ ನಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ನಿರ್ಮಾಲಾ ಸ್ಟಿರಾಯ್ಡ್ಸ್ ಡ್ರೊಸ್ಟನೊಲೋನ್ ಮತ್ತು ಮೆಟೆನೊಲೋನ್ ಸೇವಿಸಿರುವುದು ಪತ್ತೆಯಾಗಿದೆ ಎಂದು ಟ್ರ್ಯಾಕ್ ಆ್ಯಂಡ್ ಫೀಲ್ಡಿಂಗ್ ಡೋಪಿಂಗ್ ದೂರುಗಳನ್ನು ನಿಭಾಯಿಸುವ ಅಥ್ಲೆಟಿಕ್ಸ್ ಇಂಟಗ್ರಿಟಿ ಯುನಿಟ್ (ಎಐಯು) ಹೇಳಿದೆ.
80 ವರ್ಷಗಳ ಹಿಂದಿನ ಅನಗತ್ಯ ದಾಖಲೆ ಬರೆದ ಹಿಟ್ಮ್ಯಾನ್ ರೋಹಿತ್!
'ನಿರ್ಮಲಾ ಅವರು ಶಿಕ್ಷೆಯನ್ನು ಸ್ವೀಕರಿಸಿದ್ದಾರೆ, ಯಾವುದೇ ವಿಚಾರಣೆಗೆ ಕೋರಿಕೊಂಡಿಲ್ಲ,' ಎಂದು ಎಐಯು ತಿಳಿಸಿದೆ. 24ರ ಹರೆಯದ ನಿರ್ಮಲಾ, 2017ರ ಏಷ್ಯನ್ ಚಾಂಪಿಯನ್ಷಿಪ್ನಲ್ಲಿ 400 ಮೀ. ಓಟ ಮತ್ತು 4X400 ಮೀ. ಓಟದಲ್ಲಿ ಭಾರತಕ್ಕೆ ಬಂಗಾರದ ಪದಕ ಗೆದ್ದಿದ್ದರು.