ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕರ್ನಾಟಕ ಕ್ರಿಕೆಟಿಗ ಮಾಡಿದ ಪ್ರೊಪೋಸ್‌ಗೆ ಕ್ಲೀನ್ ಬೌಲ್ಡ್ ಆದ ಮಹಿಳಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

Indian Womens Team Batter Veda Krishnamurthy Engaged To Karnataka Cricketer Arjun Hoysala

ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಬ್ಯಾಟರ್ ಮತ್ತು ಕನ್ನಡತಿ ವೇದಾ ಕೃಷ್ಣಮೂರ್ತಿ ಅವರು ತಮ್ಮ ಪ್ರೀತಿಸುವ ಹುಡುಗ ಮತ್ತು ಕರ್ನಾಟಕ ರಾಜ್ಯ ತಂಡದ ಬ್ಯಾಟರ್ ಅರ್ಜುನ್ ಹೊಯ್ಸಳ ಅವರೊಂದಿಗೆ ನಿಶ್ಚಿತಾರ್ಥವನ್ನು ಘೋಷಿಸುತ್ತಿದ್ದಂತೆ ಭಾನುವಾರ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಮತ್ತು ಯುವಕರು ಆಶ್ಚರ್ಯಚಕಿತರಾದರು.

ಅರ್ಜುನ್ ಹೊಯ್ಸಳ ಅವರು ವೇದಾ ಕೃಷ್ಣಮೂರ್ತಿ ಅವರೊಂದಿಗಿನ ಚಿತ್ರವನ್ನು Instagram ಪೋಸ್ಟ್ ಮಾಡಿದ್ದಾರೆ. ಲಡಾಖ್‌ನ ಸುಂದರವಾದ ಸ್ಥಳದ ಹಿನ್ನೆಲೆಯಲ್ಲಿ, ಅರ್ಜುನ್ ಅವರು ವೇದಾಗೆ ಪ್ರಪೋಸ್ ಮಾಡುತ್ತಿರುವುದು ಕಂಡುಬಂದಿದೆ.

'ಅವಳು ಒಪ್ಪಿಗೆಯ ಮುದ್ರೆ ಒತ್ತಿದಳು' ಎಂದು ಅರ್ಜುನ್ ಚಿತ್ರಕ್ಕೆ ಶೀರ್ಷಿಕೆ ನೀಡಿದ್ದಾರೆ. ಅಭಿಮಾನಿಗಳು ಮತ್ತು ಸಹ ಆಟಗಾರರು ಈ ಪ್ರೇಮಿಗಳ ಕಡೆಗೆ ತಮ್ಮ ಅಭಿನಂದನೆಗಳ ಮಹಾಪೂರ ಹರಿಸುವುದನ್ನು ತಡೆಯಲು ಸಾಧ್ಯವಾಗದ ಕಾರಣ ಈ ಪೋಸ್ಟ್ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಯಿತು.

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ವೇದಾ ಕೃಷ್ಣಮೂರ್ತಿ

ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯ ವೇದಾ ಕೃಷ್ಣಮೂರ್ತಿ

'ಅಭಿನಂದನೆಗಳು ಬ್ರೋ,' ಎಂದು ಸೆಪ್ಟೆಂಬರ್ 24ರಂದು ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಯಲ್ಲಿ ತನ್ನ ಕೊನೆಯ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಲಿರುವ ಅನುಭವಿ ವೇಗಿ ಜೂಲನ್ ಗೋಸ್ವಾಮಿ ಕಾಮೆಂಟ್ ಮಾಡಿದ್ದಾರೆ.

ಇನ್ನು ಭಾರತೀಯ ತಂಡದ ಸದಸ್ಯೆ ವೇದಾ ಕೃಷ್ಣಮೂರ್ತಿ ಬಗ್ಗೆ ಹೇಳುವುದಾದರೆ, ಮೂಲತಃ ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಯವಳಾದ ವೇದಾ, ಭಾರತಕ್ಕಾಗಿ 48 ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಎಂಟು ಅರ್ಧ ಶತಕಗಳೊಂದಿಗೆ 829 ರನ್ ಗಳಿಸಿದ್ದಾರೆ. ಅವರು 76 ಟಿ20 ಪಂದ್ಯಗಳನ್ನು ಆಡಿದ್ದಾರೆ ಮತ್ತು 875 ರನ್ ಗಳಿಸಿದ್ದಾರೆ.

ಕೋವಿಡ್-19 ಕಾರಣದಿಂದಾಗಿ ತಾಯಿ-ಅಕ್ಕನನ್ನು ಕಳೆದುಕೊಂಡ ವೇದಾ

ಕೋವಿಡ್-19 ಕಾರಣದಿಂದಾಗಿ ತಾಯಿ-ಅಕ್ಕನನ್ನು ಕಳೆದುಕೊಂಡ ವೇದಾ

ಕಳೆದ 2021ರಲ್ಲಿ ವೇದಾ ಕೃಷ್ಣಮೂರ್ತಿ ಅವರು ಕೋವಿಡ್-19 ಕಾರಣದಿಂದಾಗಿ ತನ್ನ ತಾಯಿ ಮತ್ತು ಸಹೋದರಿಯನ್ನು ಕಳೆದುಕೊಂಡು ತಮ್ಮ ಜೀವನದ ಕಠಿಣ ಅವಧಿಯನ್ನು ಎದುರಿಸಿದರು. ಆರೋಗ್ಯ ಬಿಕ್ಕಟ್ಟನ್ನು ಎದುರಿಸುವ ಮಾನಸಿಕ ಅಂಶ ಮತ್ತು ಅಂತಹ ದೊಡ್ಡ ದುರಂತದ ಬಗ್ಗೆ ಮಾತನಾಡಿರುವ ವೇದಾ ಕೃಷ್ಣಮೂರ್ತಿ, ಅನಾರೋಗ್ಯದ ವಿರುದ್ಧ ಹೋರಾಡುವಾಗ ತನ್ನ ತಾಯಿ ಮತ್ತು ಸಹೋದರಿ ಕೂಡ ಆತಂಕದಿಂದ ಬಳಲುತ್ತಿದ್ದರು ಎಂದು ಹೇಳಿದರು.

"ಮಾನಸಿಕ ಶಕ್ತಿ ಮುಖ್ಯವಾಗಿದೆ. ನನ್ನ ಹಿರಿಯ ಸಹೋದರಿ ವತ್ಸಲಾ ಅವರು ಕೋವಿಡ್‌ನಿಂದ ಸಾಯುವ ಮೊದಲು ಪ್ಯಾನಿಕ್ ಅಟ್ಯಾಕ್ ಹೊಂದಿದ್ದರು," ಎಂದು 28 ವರ್ಷ ವಯಸ್ಸಿನ ವೇದಾ ಕೃಷ್ಣಮೂರ್ತಿ ಹೇಳಿದ್ದಾರೆ ಎಂದು ESPNcricinfo ವರದಿ ಮಾಡಿದ್ದಾರೆ.

ತಾಯಿ-ಸಹೋದರಿ ಸಾವು ನನ್ನ ಮೇಲೆ ಪರಿಣಾಮ ಬೀರಿದೆ

ತಾಯಿ-ಸಹೋದರಿ ಸಾವು ನನ್ನ ಮೇಲೆ ಪರಿಣಾಮ ಬೀರಿದೆ

"ನನ್ನ ತಾಯಿ ಕೂಡ ಭಯಭೀತರಾಗಿದ್ದರು, ಏಕೆಂದರೆ ಅವರು ಕೋವಿಡ್ ವೈರಸ್‌ನಿಂದ ಸಾಯುವ ಹಿಂದಿನ ರಾತ್ರಿ, ಬೆಂಗಳೂರಿನಿಂದ ಸುಮಾರು 230 ಕಿಮೀ ದೂರದಲ್ಲಿರುವ ನನ್ನ ತವರು ಪಟ್ಟಣವಾದ ಕಡೂರಿನಲ್ಲಿ ಮಕ್ಕಳು ಸೇರಿದಂತೆ ಕುಟುಂಬದ ಎಲ್ಲರೂ ಕೋವಿಡ್ ಧನಾತ್ಮಕ ಪರೀಕ್ಷೆ ಮಾಡಿದ್ದಾರೆ. ಅನಾರೋಗ್ಯದ ಮಾನಸಿಕ ಒತ್ತಡದಿಂದಾಗಿ ಸಾವನ್ನಪ್ಪಿದರು. ನನಗೆ ಗೊತ್ತಿಲ್ಲ, ಆದರೆ ಬಹುಶಃ ಅದು ನನ್ನ ಮೇಲೆ ಪರಿಣಾಮ ಬೀರಿದೆ," ಎಂದು ವೇದಾ ಕೃಷ್ಣಮೂರ್ತಿ ಹೇಳಿದರು.

ಅರ್ಜುನ್ ಹೊಯ್ಸಳ ಬಗ್ಗೆ ಮಾತನಾಡುವುದಾದರೆ, ಅವರು ಡಿಸೆಂಬರ್ 2016ರಲ್ಲಿ ಕರ್ನಾಟಕ ರಣಜಿ ತಂಡಕ್ಕೆ ಪಾದಾರ್ಪಣೆ ಮಾಡಿದರು. ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಅವರು ಇಲ್ಲಿಯವರೆಗೆ 10 ಪಂದ್ಯಗಳನ್ನು ಆಡಿದ್ದಾರೆ.

Story first published: Monday, September 12, 2022, 10:32 [IST]
Other articles published on Sep 12, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X