ಕುಸ್ತಿಯಲ್ಲಿ ಭಾರತಕ್ಕೆ ಒಂದೇ ದಿನ ಎರಡು ಚಿನ್ನ ಒಂದು ಬೆಳ್ಳಿ, ಒಂದು ಕಂಚು

By Manjunatha

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್‌ 2018ರಲ್ಲಿ ಕುಸ್ತಿ ವಿಭಾಗದಲ್ಲಿ ಒಂದೇ ದಿನ ಭಾರತಕ್ಕೆ ಎರಡು ಚಿನ್ನ ಮತ್ತು ಒಂದು ಬೆಳ್ಳಿ ಪದಕ ಲಭಿಸಿದೆ.

ಪುರುಷರ ವಿಭಾಗದಲ್ಲಿ ಒಲಿಂಪಿಯನ್ ಪದಕ ವಿಜೇತ ಸುಶೀಲ್ ಕುಮಾರ್ ಮತ್ತು ರಾಹುಲ್ ಅವಾರೆ ಅವರು ಚಿನ್ನ ಗೆದ್ದರೆ ಮಹಿಳಾ ವಿಭಾಗದಲ್ಲಿ ದಂಗಲ್ ಹುಡುಗಿ ಬಬಿತಾ ಕುಮಾರಿ ಅವರು ಬೆಳ್ಳಿ ಪದಕ ಗೆದ್ದರು.

ಪುರುಷರ 74 ಕೆಜಿ ಫ್ರೀ ಸ್ಟೈಲ್‌ನಲ್ಲಿ ಸ್ಪರ್ಧಿಸಿದ್ದ ಸುಶೀಲ್ ಕುಮಾರ್ ಅವರು ದಕ್ಷಿಣ ಆಫ್ರಿಕಾದ ಜಾನೆಸ್ ಬೋತಾ ಅವರನ್ನು 10-0 ಭಾರಿ ಅಂತರದಿಂದ ಸೋಲಿಸಿದರು. ಒಲಿಂಪಿಕ್ಸ್‌ನಲ್ಲಿ ಭಾರತಕ್ಕಾಗಿ ಬೆಳ್ಳಿ ಪದಕ ಗೆದ್ದಿದ್ದ ಸುಶೀಲ್ ಅವರಿಗೆ ಕಾಮನ್‌ವೆಲ್ತ್ ಪದಕ ಸುಲಭದಲ್ಲಿ ದಕ್ಕಿತು.

ಇದಕ್ಕೂ ಮುಂಚೆ ಮಹಾರಾಷ್ಟ್ರದ ರಾಹುಲ್ ಅವಾರೆ ಅವರು 57 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಕೆನಾಡದ ಠಕೋಶಿ ಅವರನ್ನು 15-7 ಅಂತರದಿಂದ ಸೋಲಿಸಿದರು.

ಕಾಮನ್‌ವೆಲ್ತ್‌ನಲ್ಲಿ ಕುಸ್ತಿ ವಿಭಾಗದಲ್ಲಿ ಮೊದಲ ಪದಕ ಗಳಿಸಿದ್ದು ದಂಗಲ್ ಹುಡುಗಿ ಬಬಿತಾ ಕುಮಾರಿ. ಅಕ್ಕ ಗೀತಾ ಅವರು ಕಾಮನ್‌ವೆಲ್ತ್‌ ಚಿನ್ನ ಗೆದ್ದಿದ್ದ ನಂತರ ಈಗ ತಂಗಿ ಬಬಿತಾ ಬೆಳ್ಳಿ ಪದಕ ಗೆದ್ದಿದ್ದಾರೆ.

ಇತ್ತೀಚೆಗೆ ಅಮಿರ್‌ ಖಾನ್ ನಟಿಸಿದ್ದ ದಂಗಲ್ ಚಿತ್ರ ಇದೇ ಬಬಿತಾ ಕುಮಾರಿ ಅವರ ತಂದೆ ಮಹಾವೀರ್ ಸಿಂಗ್ ಪೋಗಟ್ ಅವರ ಕುರಿತದ್ದಾಗಿತ್ತು.

For Quick Alerts
ALLOW NOTIFICATIONS
For Daily Alerts
Story first published: Thursday, April 12, 2018, 17:25 [IST]
Other articles published on Apr 12, 2018

Latest Videos

  + More
  POLLS
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Yes No
  Settings X