ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬಳ್ಳಾರಿಯಲ್ಲಿ ವಿಶ್ವದರ್ಜೆಯ ಕ್ರೀಡಾ ತರಬೇತಿ ಕೇಂದ್ರ ಆರಂಭ

By Mahesh
Inspire Institute of Sport Vijayanagar (IIS) opens door on Independence Day 2018

ವಿಜಯನಗರ(ಬಳ್ಳಾರಿ), ಆಗಸ್ಟ್ 15: ಭಾರತದ ಖಾಸಗಿ ಹೂಡಿಕೆಯ ಮೊದಲ ಅತ್ಯುನ್ನತ ಕ್ರೀಡಾ ತರಬೇತಿ ಸಂಸ್ಥೆಯಾದ ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋಟ್ರ್ಸ್ (ಐಐಎಸ್) ಅನ್ನು ಕರ್ನಾಟಕದ ವಿಜಯನಗರದಲ್ಲಿ ಬುಧವಾರ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಭಾರತದ ಹಿರಿಯ ಒಲಿಂಪಿಕ್ ಕ್ರೀಡಾಪಟುಗಳು, ಸರ್ಕಾರಿ ಅಧಿಕಾರಿಗಳು ಮತ್ತು ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಈ ಸಂಸ್ಥೆಯನ್ನು ಲೋಕಾರ್ಪಣೆ ಮಾಡಲಾಯಿತು.

ಜೆಎಸ್‍ಡಬ್ಲ್ಯೂ ಸಮೂಹ ಸಂಸ್ಥೆಯ ವಿನೂತನವಾದ ಈ ಉಪಕ್ರಮದಲ್ಲಿ 42 ಎಕರೆಗೂ ಅಧಿಕ ವಿಸ್ತೀರ್ಣದ ಪ್ರದೇಶದಲ್ಲಿ ಈ ಕ್ರೀಡಾ ತರಬೇತಿ ಸಂಸ್ಥೆಯನ್ನು ಆರಂಭಿಸಲಾಗಿದೆ. ಭಾರತೀಯ ಕ್ರೀಡಾಪಟುಗಳಿಗೆ ಅತ್ಯಾಧುನಿಕ ಮೂಲಸೌಕರ್ಯಗಳು, ಪರಿಣತ ತರಬೇತುದಾರರು ಮತ್ತು ಕ್ರೀಡಾ ವಿಜ್ಞಾನಗಳೊಂದಿಗೆ ವಿಶ್ವದರ್ಜೆಯ ಒಲಿಂಪಿಕ್ ತರಬೇತಿಯನ್ನು ಇಲ್ಲಿ ನೀಡಲಾಗುತ್ತದೆ.

ಒಲಿಂಪಿಕ್‍ನಲ್ಲಿ ಮೂರು ಚಿನ್ನದ ಪದಕ ಗೆದ್ದಿರುವ ಬಲ್‍ಬೀರ್ ಸಿಂಗ್ , ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದಿರುವ ಏಕೈಕ ಕ್ರೀಡಾಪಟು ಎನಿಸಿರುವ ಅಭಿನವ್ ಬಿಂದ್ರಾ ಮತ್ತು 12 ಬಾರಿ ಗ್ರ್ಯಾನ್ ಸ್ಲಾಂ ಚಾಂಪಿಯನ್ ಆಗಿರುವ ಮಹೇಶ್ ಭೂಪತಿ ಅವರು ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಇವರಲ್ಲದೇ, ಭಾರತೀಯ ಒಲಂಪಿಕ್ ಅಸೋಸಿಯೇಷನ್(ಐಒಎ)ನ ಅಧ್ಯಕ್ಷ ನರೀಂದರ್ ಬಾತ್ರ, ಭಾರತೀಯ ಕ್ರೀಡಾ ಪ್ರಾಧಿಕಾರದ ವಿಶೇಷ ನಿರ್ದೇಶಕ ಓಂಕಾರ್ ಕೇಡಿಯಾ ಸೇರಿದಂತೆ ಕ್ರೀಡಾ ಕ್ಷೇತ್ರದ ಇನ್ನೂ ಹಲವಾರು ಗಣ್ಯರು ಸಂಸ್ಥೆಯ ಉದ್ಘಾಟನಾ ಸಮಾರಂಭಕ್ಕೆ ಸಾಕ್ಷಿಯಾದರು.

ಅತಿಥಿಗಳನ್ನು ಜೆಎಸ್‍ಡಬ್ಲ್ಯೂ ಗ್ರೂಪ್‍ನ ಅಧ್ಯಕ್ಷ ಸಜ್ಜನ್ ಜಿಂದಾಲ್, ಜೆಎಸ್‍ಡಬ್ಲ್ಯೂ ಫೌಂಡೇಶನ್‍ನ ಅಧ್ಯಕ್ಷೆ ಸಂಗೀತಾ ಜಿಂದಾಲ್, ಐಐಎಸ್‍ನ ಸಂಸ್ಥಾಪಕರು ಮತ್ತು ಜೆಎಸ್‍ಡಬ್ಲ್ಯೂ ಸಿಮೆಂಟ್ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರಾದ ಪಾರ್ಥ್ ಜಿಂದಾಲ್ ಮತ್ತು ಜೆಎಸ್‍ಡಬ್ಲ್ಯೂ ಸ್ಪೋಟ್ರ್ಸ್‍ನ ಮುಖ್ಯಕಾರ್ಯನಿರ್ವಹಣಾಧಿಕಾರಿನ ಮುಸ್ತಾಫಾ ಘೌಸ್ ಅವರು ಸ್ವಾಗತಿಸಿದರು.

ಜೆಎಸ್‍ಡಬ್ಲ್ಯೂನ ಪಾರ್ಥ್ ಜಿಂದಾಲ್ ಅವರ ಪರಿಕಲ್ಪನೆಯ ಈ ಸಂಸ್ಥೆಯನ್ನು ನಾಲ್ಕು ವರ್ಷಗಳ ಹಿಂದೆ ಅಭಿವೃದ್ಧಿಪಡಿಸಲಾಗಿತ್ತು. ಈಗಾಗಲೇ ಇಲ್ಲಿ 120 ಕ್ಕೂ ಹೆಚ್ಚು ಯುವ ಕ್ರೀಡಾಪಟುಗಳಿಗೆ ಕುಸ್ತಿ, ಜೂಡೋ ಮತ್ತು ಬಾಕ್ಸಿಂಗ್ ತರಬೇತಿ ನೀಡಲಾಗುತ್ತಿದೆ. ಈ ಕ್ರೀಡಾಪಟುಗಳು ದೇಶದ ವಿವಿಧ ಭಾಗಗಳಿಂದ ಬಂದವರಾಗಿದ್ದಾರೆ. ಇತ್ತೀಚೆಗೆ ತಾನೆ ಟ್ರ್ಯಾಕ್-ಅಂಡ್-ಫೀಲ್ಡ್ ಕಾರ್ಯಕ್ರಮವನ್ನು ಇಲ್ಲಿ ಪರಿಚಯಿಸಲಾಗಿದ್ದು, ಮುಂಬರುವ ತಿಂಗಳುಗಳಲ್ಲಿ ಅಥ್ಲೆಟಿಕ್ಸ್‍ನ ಹೊಸ ಹೊಸ ವಿಭಾಗಗಳನ್ನು ಆರಂಭಿಸಲಾಗುತ್ತದೆ.

ಎಫ್‍ಐಎನ್‍ಎ ಅಂಗೀಕಾರ ನೀಡಿರುವ ಈಜು ತರಬೇತಿ ಕೇಂದ್ರವನ್ನು ಅಭಿವೃದ್ಧಿಪಡಿಸಲಾಗುತ್ತಿದ್ದು, 2019 ರ ವೇಳೆಗೆ ಕಾರ್ಯಾರಂಭ ಮಾಡಲಿದೆ. ವಸತಿಯುತ ತರಬೇತಿ ನೀಡಲಾಗುತ್ತಿದ್ದು, ಇಲ್ಲಿ ಶಿಬಿರಾರ್ಥಿಗಳಿಗೆ ಪೂರ್ಣ ಪ್ರಮಾಣದ ವಿದ್ಯಾರ್ಥಿ ವೇತನ, ಪೂರ್ಣ ಪ್ರಮಾಣದ ತರಬೇತಿ ಸೌಲಭ್ಯಗಳು, ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲಾಗುತ್ತದೆ. ಇದಲ್ಲದೇ, ಅಭಿವೃದ್ಧಿಶೀಲ ದೇಶಗಳಲ್ಲಿ ಕ್ರೀಡಾಪಟುಗಳಿಗೆ ನೀಡಲಾಗುತ್ತಿರುವ ಪೌಷ್ಟಿಕ ಆಹಾರದ ಮಾದರಿಯಲ್ಲಿಯೇ ಇಲ್ಲಿಯೂ ಕ್ರೀಡಾಪಟುಗಳಿಗೆ ಪೌಷ್ಟಿಕ ಪದಾರ್ಥಗಳನ್ನು ಪೂರೈಕೆ ಮಾಡಲಾಗುತ್ತದೆ.

ಜೆಎಸ್‍ಡಬ್ಲ್ಯೂ ಗ್ರೂಪ್‍ನ ಈ ವಿನೂತನವಾದ ಉಪಕ್ರಮಕ್ಕೆ 20 ಕಾರ್ಪೊರೇಟ್ ದಾನಿಗಳು ನೆರವಾಗಿವೆ. ಈ ಮೂಲಕ ಭಾರತೀಯ ಒಲಿಂಪಿಕ್ ಕ್ರೀಡೆಗಳಿಗೆ ಸರ್ಕಾರ ನೀಡುತ್ತಿರುವ ಪ್ರೋತ್ಸಾಹಕ್ಕೆ ಪೂರಕವಾಗಿ ಈ ವಿನೂತನವಾದ ಕ್ರೀಡಾ ತರಬೇತಿ ಸಂಸ್ಥೆಯನ್ನು ಸ್ಥಾಪನೆ ಮಾಡಲಾಗಿದೆ.

ಸ್ವಾತಂತ್ರ್ಯ ದಿನಾಚರಣೆಯ ಶುಭ ಸಂದರ್ಭದಲ್ಲಿ ಈ ಕ್ರೀಡಾ ತರಬೇತಿ ಸಂಸ್ಥೆಗೆ ಚಾಲನೆ ನೀಡಿದ ನಂತರ ಮಾತನಾಡಿದ ಐಐಎಸ್‍ನ ಸಂಸ್ಥಾಪಕ ಪಾರ್ಥ್ ಜಿಂದಾಲ್ ಅವರು, 'ಈ ಇನ್‍ಸ್ಪೈರ್ ಇನ್‍ಸ್ಟಿಟ್ಯೂಟ್ ಆಫ್ ಸ್ಪೋಟ್ರ್ಸ್ ಉಳಿದ ಸಂಸ್ಥೆಗಳಂತೆ ಅಲ್ಲ. ಇದೊಂದು ಆಂದೋಲನ. ಇದು ಭಾರತೀಯರಿಗಾಗಿ ಭಾರತೀಯರು ಸ್ಥಾಪಿಸಿರುವ ಸಂಸ್ಥೆಯಾಗಿದ್ದು, ಭಾರತೀಯ ಕ್ರೀಡಾಪಟುಗಳು ಜಾಗತಿಕ ಮಟ್ಟದಲ್ಲಿ ಸಾಧನೆ ಮಾಡಲು ನೆರವಾಗಲೆಂದೇ ಸ್ಥಾಪಿಸಲ್ಪಟ್ಟಿರುವ ಸಂಸ್ಥೆಯಾಗಿದೆ. ಒಲಿಂಪಿಕ್‍ನಲ್ಲಿ ಪಾಲ್ಗೊಂಡು ಸಾಧನೆ ಮಾಡ್ಳಬೇಕೆಂದು ಹೆಬ್ಬಯಕೆ ಹೊಂದಿರುವ ಪ್ರತಿಯೊಬ್ಬ ಭಾರತೀಯನಿಗೂ ಇಲ್ಲಿ ಅವಕಾಶ ಸಿಗಬೇಕೆಂಬುದು ಐಐಎಸ್‍ನ ದೂರದೃಷ್ಟಿಯಾಗಿದೆ. ದೇಶದ ಯಾವುದೇ ಒಬ್ಬ ಪ್ರತಿಭಾನ್ವಿತ ಕ್ರೀಡಾಪಟುವೂ ಸಾಧನೆ ಮಾಡುವ ಅವಕಾಶದಿಂದ ವಂಚಿತನಾಗಬಾರದು ಎಂಬ ಉದ್ದೇಶದಿಂದ ಅವರಿಗೊಂದು ಸೂಕ್ತ ತರಬೇತಿ ನೀಡಿ ಸಾಧನೆ ಮಾಡಲು ಪೂರಕವಾದ ವಾತಾವರಣ ನಿರ್ಮಾಣ ಮಾಡಲೆಂದೇ ಈ ತರಬೇತಿ ಸಂಸ್ಥೆಯನ್ನು ಆರಂಭಿಸಲಾಗಿದೆ'' ಎಂದು ತಿಳಿಸಿದರು.

ಐಐಎಸ್‍ನಲ್ಲಿ 300 ಕ್ರೀಡಾಪಟುಗಳಿಗೆ ತರಬೇತಿ ನೀಡಲಾಗುವುದು. ಇಲ್ಲಿರುವ ಮೂಲಸೌಕರ್ಯಗಳು ಇಂತಿವೆ:
* 400 ಮೀಟರ್ ಅಥ್ಲೆಟಿಕ್ಸ್ ಟ್ರ್ಯಾಕ್‍ಗೆ ಐಎಎಎಫ್ ಮಾನ್ಯತೆ
* ಮೂರು ಜೂಡೋ ಮ್ಯಾಟ್‍ಗಳು, ಮೂರು ಕುಸ್ತಿ ಮ್ಯಾಟ್‍ಗಳು ಮತ್ತು ಮೂರು ಬಾಕ್ಸಿಂಗ್ ರಿಂಗ್‍ಗಳಿವೆ.
* 42,000 ಚದರಡಿ ವಿಸ್ತೀರ್ಣದ ಹೈ-ಪರ್ಫಾರ್ಮೆನ್ಸ್ ಸೆಂಟರ್.
* 16,000 ಚದರಡಿಯ ಸ್ಟ್ರೆಂತ್ ಅಂಡ್ ಕಂಡೀಶನಿಂಗ್ ಏರಿಯಾ
* 5,000 ಚದರಡಿಯ ಕೆಫೆಟೇರಿಯಾ
* ಎಫ್‍ಐಎನ್‍ಎ ಮಾನ್ಯತೆ ನೀಡಿರುವ ಅಕ್ವಾಟಿಕ್ ಸೆಂಟರ್. 2019 ರ ವೇಳೆಗೆ ಆರಂಭ.
* 2017 ರ ಏಪ್ರಿಲ್‍ನಲ್ಲಿ ಈ ಸಂಸ್ಥೆ ಕಾರ್ಯಾರಂಭ ಮಾಡಿದ್ದು, ಇಲ್ಲಿ ಹೆಸರಾಂತ ಕ್ರೀಡಾಪಟುಗಳು ತರಬೇತಿಗಾಗಿ ಆಗಮಿಸಿದ್ದಾರೆ. ಇಲ್ಲಿ ತರಬೇತಿ ಹೊಂದಿದ ಹಲವಾರು ಕ್ರೀಡಾಪಟುಗಳು ಈಗಾಗಲೇ ಹಲವು ಕ್ರೀಡಾಕೂಟದಲ್ಲಿ ಪಾಲ್ಗೊಂಡು ಉತ್ತಮ ಪ್ರದರ್ಶನವನ್ನೂ ನೀಡಿದ್ದಾರೆ.

ಕಾಮನ್‍ವೆಲ್ತ್ ಗೇಮ್ಸ್‍ನಲ್ಲಿ ಪದಕ ವಿಜೇತರಾದ ನೀರಜ್ ಚೋಪ್ರಾ, ವಿಕಾಸ್ ಕೃಷ್ಣನ್ ಯಾದವ್ ಮತ್ತು ವಿನೇಶ್ ಫೊಗತ್, ರಿಯೋ ಕಂಚು ಪದಕ ವಿಜೇತರಾದ ಸಾಕ್ಷಿ ಮಲಿಕ್, ಯುವ ಅಥ್ಲೀಟ್‍ಗಳಾದ ಬಾಕ್ಸರ್ ನಿಖತ್‍ಝರೇನ್, ಹೈಜಂಪ್ ಪಟು ತೇಜಸ್ವಿನ್ ಶಂಕರ್ ಸೇರಿದಂತೆ ಮೊದಲಾದವರು ಇಲ್ಲಿ ತರಬೇತಿ ಪಡೆದಿದ್ದಾರೆ.

Story first published: Friday, August 14, 2020, 19:39 [IST]
Other articles published on Aug 14, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X