ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಡೇ ಶುರುವಾದ ಕುತೂಹಲಕಾರಿ ಕತೆ!

International Olympic Day 2021: Interesting history and significance of this day in kannada

ಬೆಂಗಳೂರು: ಸಮ್ಮರ್ ಮತ್ತು ವಿಂಟರ್ ಕ್ರೀಡಾ ಸ್ಪರ್ಧೆಗಳನ್ನು ನಡೆಸುವ ಅಂತಾರಾಷ್ಟ್ರೀಯ ಮುಂಚೂಣಿ ಕ್ರೀಡಾಕೂಟ ಒಲಿಂಪಿಕ್ಸ್. ಒಲಿಂಪಿಕ್ಸ್‌ನಲ್ಲಿ ವಿಶ್ವದಾದ್ಯಂತ ಸಾವಿರಾರು ಕ್ರೀಡಾಪಟುಗಳು ಬೇರೆ ಬೇರೆ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಆಧುನಿಕ ದಿನಗಳಲ್ಲಿ ನಡೆಯುವ ಒಲಿಂಪಿಕ್ಸ್, ಪ್ರಾಚೀನ ಕಾಲದಿಂದಲೂ ಅಂದರೆ ಗ್ರೀಕ್‌ನ ಒಲಿಂಪಿಯಾದಲ್ಲಿ ಕ್ರಿಸ್ತಶಕ 8ನೇ ಶತಮಾನದಿಂದ ಕ್ರಿಸ್ತಪೂರ್ವ 4ನೇ ಶತಮಾನದಲ್ಲಿ ಆಡಿಸಲ್ಪಡುತ್ತಿದ್ದ ಒಲಿಂಪಿಕ್ಸ್ ಕ್ರೀಡಾಕೂಟದಿಂದ ಸ್ಫೂರ್ತಿ ಪಡೆದಿದೆ.

WTC Final: ಅದ್ಭುತ ಕ್ಯಾಚ್‌ ಮೂಲಕ ಟೇಲರ್ ಪೆವಿಲಿಯನ್‌ಗಟ್ಟಿದ ಗಿಲ್-ವಿಡಿಯೋWTC Final: ಅದ್ಭುತ ಕ್ಯಾಚ್‌ ಮೂಲಕ ಟೇಲರ್ ಪೆವಿಲಿಯನ್‌ಗಟ್ಟಿದ ಗಿಲ್-ವಿಡಿಯೋ

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ (ಐಒಸಿ)ಯನ್ನು 1894ರಲ್ಲಿ ಸ್ಥಾಪಿಸಿದ ಹಿರಿಮೆ ಇತಿಹಾಸ ಶಾಸ್ತ್ರಜ್ಞ ಬ್ಯಾರನ್ ಪಿಯರೆ ಡಿ ಕೂಬರ್ಟಿನ್‌ಗೆ ಸಲ್ಲುತ್ತದೆ. ಇದೇ 1896ರಲ್ಲಿ ಅಥೆನ್ಸ್‌ನಲ್ಲಿ ಆಧುನಿಕ ದಿನಗಳ ಮೊದಲ ಒಲಿಂಪಿಕ್ಸ್ ಕ್ರೀಡಾಕೂಟ ನಡೆಯಲು ನಾಂದಿಯಾಯ್ತು.

ಒಲಿಂಪಿಕ್ಸ್ ಡೇ ಚುಟುಕು ಇತಿಹಾಸ

ಒಲಿಂಪಿಕ್ಸ್ ಡೇ ಚುಟುಕು ಇತಿಹಾಸ

ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಡೇಯನ್ನು ಪರಿಚಯಿಸಿದ್ದು 1948ರಲ್ಲಿ. ಪ್ರತೀ ಜೂನ್ 23ರಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಡೇ ಆಚರಿಸಲಾಗುತ್ತದೆ. ಅದು ಆಧುನಿಕ ದಿನಗಳ ಒಲಿಂಪಿಕ್ಸ್ ಗೇಮ್ಸ್ ಶುರುವಾಗಲು ಕಾರಣವಾಯ್ತು. ಇದಕ್ಕೂ ಮುನ್ನ ಅಂದರೆ 1947ರಲ್ಲಿ ಸಾವರಿನ್‌ನ ಜೆಕೊಸ್ಲೊವಾಕಿಯಾದಲ್ಲಿದ್ದ ಒಲಿಂಪಿಕ್ ಕಮಿಟಿ ಮೆಂಬರ್ ಆಗಿದ್ದ ಡಾಕ್ಟರ್ ಗ್ರಸ್ ಅವರು ಒಲಿಂಪಿಕ್ ದಿನ ಆಚರಿಸುವ ಬಗ್ಗೆ ಒಂದು ವರದಿ ಸಲ್ಲಿಸಿದರು. ಆ ಬಳಿಕ ಒಲಿಂಪಿಕ್ ದಿನಾಚರಣೆಗೆ ಅನುಮೋದನೆ ದೊರೆಯಿತು.

ಅಂತಾರಾಷ್ಟ್ರೀಯ ಒಲಿಂಪಿಕ್ ದಿನದ ಮಹತ್ವ

ಅಂತಾರಾಷ್ಟ್ರೀಯ ಒಲಿಂಪಿಕ್ ದಿನದ ಮಹತ್ವ

ಅಂತಾರಾಷ್ಟ್ರೀಯ ಒಲಿಂಪಿಕ್ ದಿನದ ಮಹತ್ವವೆಂದರೆ ಒಲಿಂಪಿಕ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಹೆಚ್ಚಿನ ಜನರನ್ನು ಪ್ರೋತ್ಸಾಹಿಸುವುದು ಮತ್ತು ಈ ಸಂದರ್ಭದಲ್ಲಿ ನಡೆಯುವ ಕ್ರೀಡಾಕೂಟಗಳ ಬಗ್ಗೆ ಜಾಗೃತಿ ಮೂಡಿಸುವುದು. 1978ರ ಒಲಿಂಪಿಕ್ ಚಾರ್ಟರ್ ಆವೃತ್ತಿಯಲ್ಲಿ, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಎಲ್ಲಾ ಎನ್‌ಒಸಿ (ನ್ಯಾಷನಲ್ ಒಲಿಂಪಿಕ್ ಕಮಿಟಿ)ಗಳು ಪ್ರತಿವರ್ಷ ಒಲಿಂಪಿಕ್ ದಿನವನ್ನು ಆಯೋಜಿಸಲು ಮತ್ತು ಒಲಿಂಪಿಕ್ ಚಳವಳಿಯನ್ನು ಉತ್ತೇಜಿಸಲು ಶಿಫಾರಸು ಮಾಡಿದೆ.

ಒಲಿಂಪಿಕ್ ಡೇ ರನ್ ಅಂದರೇನು?

ಒಲಿಂಪಿಕ್ ಡೇ ರನ್ ಅಂದರೇನು?

ಒಲಿಂಪಿಕ್ ಡೇ ರನ್ ಎನ್ನುವುದು ವಿಶ್ವಾದ್ಯಂತ ಆಯೋಜಿಸಲಾಗುವ ಒಂದು ಚಟುವಟಿಕೆಯಾಗಿದ್ದು, ಜೂನ್‌ನಲ್ಲಿ ನಡೆಯುವ ಕ್ರೀಡೆಗಳಲ್ಲಿ ಸಾಮೂಹಿಕ ಭಾಗವಹಿಸುವಿಕೆಯನ್ನು ಉತ್ತೇಜಿಸುತ್ತದೆ. ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯು ಓಟವನ್ನು ಆಯೋಜಿಸುತ್ತದೆ. ಅಥ್ಲೆಟಿಕ್ ಸಾಮರ್ಥ್ಯವನ್ನು ಲೆಕ್ಕಿಸದೆ ವಿಶ್ವದ ಮೂಲೆ ಮೂಲೆಗಳಿಂದ ಪುರುಷರು, ಮಹಿಳೆಯರು ಮತ್ತು ಮಕ್ಕಳು ಕ್ರೀಡೆಯಲ್ಲಿ ಭಾಗವಹಿಸುವಿಕೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ. 1987ರಲ್ಲಿ ಮೊದಲ ಬಾರಿಗೆ ಒಲಿಂಪಿಕ್ ಡೇ ರನ್ ಅನ್ನು ಆಯೋಜಿಸಲಾಗಿತ್ತು. 10 ಕಿ.ಮೀ. ದೂರದ ಓಟ ಇದಾಗಿತ್ತು.

Story first published: Wednesday, June 23, 2021, 9:14 [IST]
Other articles published on Jun 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X