ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಪದಕ ತಂದಿತ್ತ ಉಡುಪಿಯ ಗುರು ಸಂದರ್ಶನ

By ಗೌತಮಿ ಮಾನಸ

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಗೇಮ್ಸ್ 2018ರಲ್ಲಿ ಭಾರ ಎತ್ತುವ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಮೊದಲ ಪದಕ ತಂದಿತ್ತಿದ್ದಾರೆ ಉಡುಪಿ ಜಿಲ್ಲೆಯ ಕುಂದಾಪುರದ ಕನ್ನಡಿಗ ಗುರುರಾಜ್ ಪೂಜಾರಿ. ಈ ಸಂದರ್ಭದಲ್ಲಿ ಹಿಂದೆ ಮಾಡಲಾಗಿದ್ದ ಅವರ ಸಂದರ್ಶನವನ್ನು ಮತ್ತೆ ಪ್ರಕಟಿಸಲಾಗುತ್ತಿದೆ.

***
ಬಡತನದಲ್ಲಿ ಬೆಳೆದ ಇವರು ತನ್ನ ಶ್ರದ್ಧೆ ಮತ್ತು ಹಠದಿಂದ ಏನು ಬೇಕಾದರೂ ಸಾಧಿಸಬಹುದು ಎಂದು ತೋರಿಸುವ ಮೂಲಕ ಕನ್ನಡಿಗರು ಹೆಮ್ಮೆ ಪಡುವ ಸಾಧನೆ ಮಾಡಿದ್ದಾರೆ. ಕರ್ನಾಟಕದ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮದ ವಂಡ್ಸೆಯ ನಿವಾಸಿ ಮಹಾಬಲ ಪೂಜಾರಿ ಮತ್ತು ಪದ್ದು ದಂಪತಿಗಳ ಐದನೇ ಮಗನಾದ ಗುರುರಾಜ್ ಅವರ ಸಾಧನೆ ಬಗ್ಗೆ ಎಲ್ಲರೂ ಸಂಭ್ರಮಿಸುತ್ತಿದ್ದಾರೆ.

ಗುರುರಾಜ್ ಅವರು ಇತ್ತೀಚೆಗೆ ಗುವಾಹಟಿಯಲ್ಲಿ ನಡೆದ 12ನೇ ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ 56 ಕೆಜಿ ವಿಭಾಗದ ವೇಯ್ಟ್ ಲಿಪ್ಟಿಂಗ್ ನಲ್ಲಿ ಕರ್ನಾಟಕದ ಕುವರ ಚಿನ್ನದ ಪದಕ ಗೆದ್ದು ದೇಶದ ಕೀರ್ತಿಯನ್ನು ಹೆಚ್ಚಿಸಿದ್ದಾರೆ.[ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನ ಗೆದ್ದ ಉಡುಪಿಯ ಗುರುರಾಜ್]

ಕಾಲೇಜು ದಿನಗಳಲ್ಲಿ ಅಥ್ಲೆಟಿಕ್ ನಲ್ಲಿ ಸಕ್ರಿಯಯವಾಗಿ ತೊಡಗಿಸಿಕೊಂಡಿದ್ದ ಗುರುರಾಜ ಅವರು ಪವರ್ ಲಿಫ್ಟಿಂಗ್ ಅಭ್ಯಾಸ ನಡೆಸಲು ಆರಂಭಿಸಿದರು. ಇವರಿಗೆ ಎಸ್ ಡಿಎಂ ಇಂಜಿನಿಯರ್ ಕಾಲೇಜಿನ ಫಿಸಿಕಲ್ ಎಜುಕೇಶನ್ ಡೈರೆಕ್ಟರ್ ರಾಜೇಂದ್ರ ಪ್ರಸಾದ್ ಕೋಚ್ ಆಗಿ ಸಿಕ್ಕಿದ್ದು ಇವರ ಕ್ರೀಡಾ ಬದುಕಿನ ದಿಕ್ಕು ಬದಲಿಸಿತು.

ಅಪ್ಪಟ ಗ್ರಾಮೀಣ ಪ್ರತಿಭೆ 23 ಹರೆಯದ ಲಿಫ್ಟರ್ ಗುರುರಾಜ್ ಗೆ ಅನೇಕ ಕನಸುಗಳಿವೆ ಸಾಧಿಸುವ ಛಲವಿದೆ. ಅದೊಂದು ಅವಿಸ್ಮರಣೀಯ ಸಮಯ ಭಾರತದ ಪತಾಕೆ ಹಿಡಿದಾಗ ಮೈ ರೋಮಾಂಚನವಾಯಿತು, ನನಗೆ ಚಿನ್ನದ ಪದಕ ಬರಬಹುದು ಅಂದುಕೊಂಡಿರಲಿಲ್ಲ ಎಂದು ಪದಕ ಗೆದ್ದ ಖುಷಿಯಲ್ಲಿ ಗುರುರಾಜ್ ಪ್ರತಿಕ್ರಿಯಿಸಿದ್ದಾರೆ.ಪ್ರಸ್ತುತ ಕ್ರೀಡಾಕೋಟಾದಲ್ಲಿ ಭಾರತೀಯ ವಾಯಸೇನೆಗೆ ಆಯ್ಕೆಯಾಗಿ ತರಬೇತಿ ಪಡೆಯುತ್ತಿರುವ ಗುರುರಾಜ ಅವರೊಂದಿಗೆ ಒನ್ ಇಂಡಿಯಾ ಕನ್ನಡ ಪ್ರತಿನಿಧಿ ನಡೆಸಿದ ಸಂದರ್ಶನ ಇಲ್ಲಿದೆ...

ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ ಪದಕದ ಭೇಟೆ ಆಡಿದ್ದೀರಿ ಏನನ್ನಿಸುತ್ತಿದೆ?

ದಕ್ಷಿಣ ಏಷ್ಯನ್ ಗೇಮ್ಸ್ ನಲ್ಲಿ ಪದಕದ ಭೇಟೆ ಆಡಿದ್ದೀರಿ ಏನನ್ನಿಸುತ್ತಿದೆ?

ಇಂಡಿಯಾದಿಂದ ಗುರುರಾಜ್ ಅಂತ ಕರೆದರು, ಸ್ಟೇಜ್ ಗೆ ಹತ್ತುವಾಗ ವೀಕ್ಷಕರ ಶಿಳ್ಳೆ ಚಪ್ಪಾಳೆಗಳೆ ನನಗೆ ಸ್ಫೂರ್ತಿಯಾಯ್ತು, ಎನರ್ಜಿ ತುಂಬಿದ್ದೇ ವೀಕ್ಷಕರು ಅಂತ ಹೇಳಬಹುದು. ಅಮೇಲೆ ಮೊದಲ ಸಲ ಭಾಗವಹಿಸಿದ್ದು ಮೊದಲ ಸಲವೇ ಪದಕ ಗೆದ್ದದ್ದು ಮತ್ತು ಒಟ್ಟು 241ಕೆ.ಜಿ ಭಾರ ಎತ್ತಿದೆ. ಸ್ನಾಚ್ ವಿಭಾಗದಲ್ಲಿ 104ಕೆ.ಜಿ ಹಾಗೂ ಕ್ಲೀನ್ ಎಂಡ್‌ ಜರ್ಕ್ ನಲ್ಲಿ 137ಕೆ.ಜಿ ಇದು ದಾಖಲೆ ಹಾಗಾಗಿ ತುಂಬಾ ಖುಷಿ ಇದೆ.

ಪದಕ ಗೆದ್ದಾಗ ಪ್ರತಿಕ್ರಿಯೆಗಳು ಹೇಗಿದ್ದವು?

ಪದಕ ಗೆದ್ದಾಗ ಪ್ರತಿಕ್ರಿಯೆಗಳು ಹೇಗಿದ್ದವು?

ಎಲ್ಲರೂ ತುಂಬಾ ಖುಷಿ ಪಟ್ಟರು. ಅದರಲ್ಲೂ ನನ್ನ ಅಪ್ಪ ಅಮ್ಮ ಅವರ ಸಂತೋಷಕ್ಕಿಂತ ಇನ್ನೇನು ಬೇಕು ನನಗೆ. ನಾನು ಸ್ಟೇಜ್ ಹಿಂಭಾಗದಲ್ಲಿ ಇರಬೇಕಾದರೆ ಈಗಿನ ಗೈಡ್ ಹೇಳುತ್ತಿದ್ದರು ಮೊದಲ ಬಾರಿಗೆ ಭಾಗವಹಿಸುತ್ತಿದ್ದಿ ಸಂಕೋಚ ಬೇಡ ಅಂತೆಲ್ಲಾ ಅಮೇಲೆ ಎಲ್ಲರೂ ತುಂಬಾ ಖುಷಿಪಟ್ಟರು.

ಕ್ರೀಡೆ ಬಗ್ಗೆ ಆಸಕ್ತಿ ಹೇಗೆ ಮೂಡಿತು?

ಕ್ರೀಡೆ ಬಗ್ಗೆ ಆಸಕ್ತಿ ಹೇಗೆ ಮೂಡಿತು?

ನಾನು ತುಂಬಾ ಹಳ್ಳಿ ಪ್ರದೇಶದವನು ಕುಂದಾಪುರದ ವಂಡ್ಸೆ ನನ್ನೂರು ಚಿಕ್ಕದಿನಿಂದಲೇ ಗದ್ದೆಯಲ್ಲಿ ಖೋ ಖೋ, ಕಬ್ಬಡಿ ಆಡುತ್ತಿದ್ದೆ. ಆಮೇಲೆ ಪ್ರಾಥಮಿಕ ಶಾಲೆಯಲ್ಲಿ ಟೀಂ ನಲ್ಲಿ ಒಬ್ಬನಾಗಿ ಹಲವಾರು ಆಟೋಟಗಳಲ್ಲಿ ಭಾಗವಹಿಸುತ್ತಿದ್ದೆ. ಪಿಯುಸಿ ಬಂದಾಗ ರೆಸ್ಲಿಂಗ್ ಬಗ್ಗೆ ತುಂಬಾ ಆಸಕ್ತಿ ಬಂತು. ಇದಕ್ಕೆ ಸುಕೇಶ್ ಶೆಟ್ಟಿ ಅಂತ ನನ್ನ ಫಿಟ್ನೆಸ್ ಕೋಚ್ ಆಗಿದ್ರು, ಅಮೇಲೆ ಶಾರದಾ ಬಾರ್ಕೂರು (ಎಸ್ ಡಿಎಂ ವಾಲಿಬಾಲ್ ಕೋಚ್) ಅವರ ಸಲಹೆಯಂತೆ ಎಸ್ ಡಿಎಂ ಫಿಸಿಕಲ್ ಎಜುಕೇಶನ್ ಅಥ್ಲೆಟಿಕ್ಸ್ ಗೆ ಸೇರಿದೆ.

ಫಿಸಿಕಲ್ ಡೈರೆಕ್ಟರ್ ರಮೇಶ್ ನೆರವಾದರು

ಫಿಸಿಕಲ್ ಡೈರೆಕ್ಟರ್ ರಮೇಶ್ ನೆರವಾದರು

ಎಸ್ ಡಿಎಂ ಪದವಿಯ ಫಿಸಿಕಲ್ ಡೈರೆಕ್ಟರ್ ರಮೇಶ್ ಅವರನ್ನು ಈ ಸಂದರ್ಭದಲ್ಲಿ ನೆನೆಸಿಕೊಳ್ಳುತ್ತೇನೆ. ನಂತರ ಪವರ್ ಲಿಫ್ಟಿಂಗ್ ಕಲಿತೆ, ಇದರಲ್ಲಿ ರಾಜ್ಯ ಮಟ್ಟದಲ್ಲಿ ಬೆಳ್ಳಿ ಬಂತು ನನಗೆ ಸಿಕ್ಕ ಮೊದಲ ಪದಕ ಇದೇ ನನಗೆ ಅಡಿಪಾಯ ಅಂತ ಹೇಳಬಹುದು. ಅಮೇಲೆ ವೈಟ್ ಲಿಫ್ಟಿಂಗ್ ಕಡೆಗೆ ಮನಸುವಾಲಿತು. ಮೊದಲ ಸಲ ವೈಟ್ ಲಿಫ್ಟಿಂಗ್ ನಲ್ಲಿ ಭಾಗವಹಿಸಿದಾಗ ಪದಕ ಸಿಕ್ಕಿಲ್ಲ. ಅದಕ್ಕೇನು ಬೇಜಾರು ಮಾಡಿಕೊಂಡಿಲ್ಲ ಅವಕಾಶಕ್ಕಾಗಿ ಕಾಯ್ತಾ ಇದ್ದೆ.

ವೇಯ್ಟ್ ಲಿಫ್ಟಿಂಗ್ ಸ್ಪೂರ್ತಿ ಯಾರು?

ವೇಯ್ಟ್ ಲಿಫ್ಟಿಂಗ್ ಸ್ಪೂರ್ತಿ ಯಾರು?

ನನ್ನ ಕೋಚ್ ರಾಜೇಂದ್ರ ಅವರನ್ನು ಮರೆಯಲು ಸಾಧ್ಯವೇ ಇಲ್ಲ . 1998 ರಲ್ಲಿ ಯುನಿವರ್ಸಿಟಿ ಲೆವೆಲ್ ನಲ್ಲಿ ಅವರು ಮಾಡಿದ ಸಾಧನೆಯನ್ನು 14 ವರ್ಷ ಗಳ ಬಳಿಕ ನಾನು ಬ್ರೇಕ್ ಮಾಡಿದಾಗ ನನ್ನ ಕಣ್ಣಲ್ಲಿ ನೀರು ಬಂದಿತ್ತು ಎಂಥಾ ಗುರುವನ್ನು ಪಡೆದೆ ಎಂದು . ಈವಾಗಲೂ ಅಷ್ಟೇ ಚಿನ್ನದ ಪದಕ ಗೆದ್ದಿದ್ದೇನೆ ಎಂದು ತಿಳಿದು ತುಂಬಾ ಸಂತೋಷ ಪಟ್ಟರು. ಇನ್ನೂ ಅವಕಾಶ ಇದೆ ಮುಂದುವರೆಸು ಒಲಂಪಿಕ್ಸ್ ಇದೆ ಅಂತೆಲ್ಲಾ ಹೇಳಿದರು.

ಹೇಗೆಲ್ಲಾ ತಯಾರಿ ನಡೆಸುತ್ತೀರಿ? ನಿಮ್ಮ ಮುಂದಿನ ಗುರಿ ಏನು?

ಹೇಗೆಲ್ಲಾ ತಯಾರಿ ನಡೆಸುತ್ತೀರಿ? ನಿಮ್ಮ ಮುಂದಿನ ಗುರಿ ಏನು?

ಮುಂಜಾನೆ ಎದ್ದು ಪ್ರತಿದಿನ ವರ್ಕೌಟ್ ಮಾಡ್ತೇನೆ. ಆಮೇಲೆ 10 ರಿಂದ 12 ಗಂಟೆವರೆಗೆ ವರ್ಕೌಟ್ ನಂತರ ಸಾಯಂಕಾಲ 4.30 ರಿಂದ 7.30ರವರೆಗೆ ಅಬ್ಯಾಸ ನಡೆಸುತ್ತೇನೆ.ಈಗ ಜವಾಬ್ದಾರಿ ಹೆಚ್ಚಿದೆ. ಒಲಂಪಿಕ್ ಮತ್ತು ಕಾಮನ್ವೆಲ್ತ್ ನಲ್ಲಿ ಗೆಲ್ಲುವುದು ನನ್ನ ಕನಸು ಗುರಿ ಎರಡೂ ಆಗಿದೆ.

ಕೋಚ್ ರಾಜೇಂದ್ರ ಪ್ರಸಾದ್ ಅವರ ಪ್ರತಿಕ್ರಿಯೆ

ಕೋಚ್ ರಾಜೇಂದ್ರ ಪ್ರಸಾದ್ ಅವರ ಪ್ರತಿಕ್ರಿಯೆ

ನನಗೆ ಮೊದಲು ಇಷ್ಟು ದೊಡ್ಡ ಮಟ್ಟದಲ್ಲಿ ಸಾಧನೆ ಮಾಡ್ತಾನೆ ಎಂದು ಕೊಂಡಿರಲಿಲ್ಲ್ಲ. ಅವನು ತುಂಬಾ ಹಾರ್ಡ್ ವರ್ಕರ್, ಶಾಲಾ ದಿನಗಳಲ್ಲಿ ರಜೆ ಇದ್ರೂ ಅವನು ಮನೆಗೆ ಹೋಗ್ತಿರಲಿಲ್ಲ. ಅನಿವಾರ್ಯವಾಗಿ ಹೋದ್ರೂ ಫೋನ್ ಮಾಡಿ ಪ್ರಾಕ್ಟೀಸ್ ಬಗ್ಗೆ ಸಲಹೆ ಕೇಳ್ತಿದ್ದ. ಈ ಕ್ರೀಡೆಗೆ ತುಂಬಾ ಒಳ್ಳೆಯ ಆಹಾರ, ನ್ಯೂಟ್ರೀಷಿಯನ್ ಫುಡ್ ತಗೋಬೇಕು . ಅವರ ತಂದೆ ಒಬ್ಬ ಡ್ರೈವರ್ ಆಗಿ ತುಂಬಾ ಸಪೋರ್ಟ್ ಮಾಡಿದ್ದಾರೆ, 1999 ರ ನನ್ನ ರೆಕಾರ್ಡ್ ಬ್ರೇಕ್ ಮಾಡಿದ್ದು, ಸಂತೋಷವಾಯ್ತು. -ರಾಜೇಂದ್ರ ಪ್ರಸಾದ್, ಫಿಸಿಕಲ್ ಎಜುಕೇಶನ್ ಡೈರೆಕ್ಟರ್ ಎಸ್ ಡಿಎಂ ಇಂಜಿನಿಯರಿಂಗ್ ಕಾಲೇಜು

Story first published: Thursday, April 5, 2018, 16:03 [IST]
Other articles published on Apr 5, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X