ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಶೂಟಿಂಗ್ ವರ್ಲ್ಡ್ ಕಪ್: ಡಬಲ್ ಟ್ರ್ಯಾಪ್ ನಲ್ಲಿ ಅಂಕುರ್ ಗೆ ಬಂಗಾರ

ISSF World Championship: Ankur Mittal wins double trap gold

ಚಾಂಗ್ಒನ್, ಸೆಪ್ಟೆಂಬರ್ 8: ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಭಾರತದ ಅಂಕುರ್ ಮಿತ್ತಲ್ ಅವರು ಪುರುಷರ ಡಬಲ್ ಟ್ರ್ಯಾಪ್ ಸ್ಪರ್ಧೆಯಲ್ಲಿ ಬಂಗಾರದ ಪದಕ ಗೆದ್ದಿದ್ದಾರೆ.

ಶೂಟಿಂಗ್ ಚಾಂಪಿಯನ್ ಶಿಪ್: ಚಿನ್ನಕ್ಕೆ ಗುರಿಯಿಟ್ಟ ಹೃದಯ್, ಮಹಿಳಾ ತಂಡಶೂಟಿಂಗ್ ಚಾಂಪಿಯನ್ ಶಿಪ್: ಚಿನ್ನಕ್ಕೆ ಗುರಿಯಿಟ್ಟ ಹೃದಯ್, ಮಹಿಳಾ ತಂಡ

ಶನಿವಾರ ನಡೆದ ಫೈನಲ್ ಸ್ಪರ್ಧೆಯಲ್ಲಿ ಅಂಕುರ್ ಗೆ ಚಿನ್ನ ಒಲಿಯಿತು. ವರ್ಲ್ಡ್ ಕಪ್ ಚಾಂಪಿಯನ್ ಶಿಪ್ ನಲ್ಲಿ ಅನೇಕ ಪದಕಗಳನ್ನು ಗೆದ್ದಿರುವ ಅಂಕುರ್ ಒಟ್ಟು 150 ಅವಕಾಶಗಳಲ್ಲಿ 140 ಹೊಡೆತಗಳನ್ನು ಯಶಸ್ವಿಯಾಗಿ ಪೂರೈಸಿದರು.

ಈ ವಿಭಾಗದಲ್ಲಿ ಬೆಳ್ಳಿ ಪದಕ ಚೀನಾದ ಯಿಯಾಂಗ್ ಯಾಂಗ್ ಅವರ ಪಾಲಾಯಿತು. ಸ್ಲೋವಾಕಿಯಾದ ಹಬರ್ಟ್ ಆಂಡ್ರೆಝ್ ಅವರು ಕಂಚು ತನ್ನದಾಗಿಸಿಕೊಂಡರು. ಅಂಕುರ್, ಮೊಹಮ್ಮದ್ ಅಸಾಬ್, ಶಾರ್ದುಲ್ ವಿಹಾನ್ ಅವರನ್ನೊಳಗೊಂಡ ಪುರುಷರ ತಂಡಕ್ಕೆ ತಂಡ ವಿಭಾಗದಲ್ಲಿ ಕಂಚಿನ ಪದಕ ಲಭಿಸಿದೆ.

Story first published: Saturday, September 8, 2018, 16:38 [IST]
Other articles published on Sep 8, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X