ISSF World Cup: ಕಂಚಿನ ಪದಕಕ್ಕೆ ಗುರಿಯಿಟ್ಟ ಸೌರಭ್ ಚೌಧರಿ

ಒಸಿಜೆಕ್: ಕ್ರೊವೇಷಿಯಾದ ಒಸಿಜೆಕ್‌ನಲ್ಲಿ ನಡೆಯುತ್ತಿರುವ ಇಂಟರ್ ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ಸ್ (ಐಎಸ್‌ಎಸ್‌ಎಫ್‌) ವಿಶ್ವಕಪ್‌ ಕ್ರೀಡಾಕೂಟದಲ್ಲಿ ಭಾರತದ ಯುವ ಶೂಟರ್ ಸೌರಭ್ ತಿವಾರಿ ಕಂಚಿನ ಪದಕಕ್ಕೆ ಗುರಿಯಿಟ್ಟಿದ್ದಾರೆ. ಇದು ಭಾರತಕ್ಕೆ ಕ್ರೀಡಾಕೂಟದಲ್ಲಿ ಲಭಿಸುತ್ತಿರುವ ಚೊಚ್ಚಲ ಪದಕ.

World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!World Test Championship 2ನೇ ಆವೃತ್ತಿಗೆ ಭಾರತದ ವೇಳಾಪಟ್ಟಿ ಪ್ರಕಟ!

ಪುರುಷರ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಸೌರಭ್ ಚೌಧರಿ ಕಂಚಿನ ಪದಕ ತನ್ನದಾಗಿಸಿಕೊಂಡಿದ್ದಾರೆ. 581 ಅರ್ಹತಾ ಅಂಕಗಳೊಂದಿಗೆ ಸ್ಪರ್ಧಿಸಿದ್ದ 19ರ ಹರೆಯದ ಚೌಧರಿ 220 ಪಾಯಿಂಟ್ಸ್‌ನೊಂದಿಗೆ ಕಂಚು ಗೆದ್ದಿದ್ದಾರೆ.

ಚೌಧರಿ ಜೊತೆಗಿದ್ದ ಸಹ ಶೂಟರ್ ಅಭಿಷೇಕ್ ವರ್ಮಾ ಅದೇ ವಿಭಾದಲ್ಲಿ 5ನೇ ಸ್ಥಾನ ಪಡೆದುಕೊಂಡಿದ್ದಾರೆ. ಶರ್ಮಾ ಕೂಡ 581 ಅರ್ಹತಾ ಪಾಯಿಂಟ್ಸ್‌ ಕಲೆ ಹಾಕಿದ್ದರಾದರೂ ಸ್ಪರ್ಧೆಯಲ್ಲಿ 179.3 ಅಂಕ ಗಳಿಸಿದರು. ಭಾರತದ ಮತ್ತೊಬ್ಬಳು ಭರವಸೆಯ ಶೂಟರ್ ಮನು ಭಾಕರ್ ಕೂಡ 7ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿ ನಿರಾಸೆ ಮೂಡಿಸಿದ್ದಾರೆ.

WTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರWTC Final: ನಗದು ಪುರಸ್ಕಾರ, ಕುತೂಹಲಕಾರಿ ದಾಖಲೆಗಳ ಸಂಪೂರ್ಣ ವಿವರ

ಮಹಿಳಾ 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಸ್ಪರ್ಧಿಸಿದ್ದ ಮನು ಭಾಕರ್, ಫೈನಲ್‌ನಲ್ಲಿ 137.3 ಅಂಕಗಳೊಂದಿಗೆ ಏಳನೇ ಸ್ಥಾನ ಪಡೆದುಕೊಂಡಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, June 24, 2021, 23:26 [IST]
Other articles published on Jun 24, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X