ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಉದ್ದೀಪನ ಪರೀಕ್ಷೆಯಲ್ಲಿ ಸಂಜಿತಾ ಫೇಲಾಗಿದ್ದು IWF ತಪ್ಪಿನಿಂದ!

IWF Admits Mistake In Sanjita Chanu Doping Row

ನವದೆಹಲಿ, ಜುಲೈ 27: ಉದ್ದೀಪನ ಮದ್ದು ಸೇವನೆ ಪರೀಕ್ಷೆಯಲ್ಲಿ ವೇಟ್ ಲಿಫ್ಟರ್ ಸಂಜಿತಾ ಚಾನು ವಿಫಲರಾಗಿದ್ದು, ಇಂಟರ್ ನ್ಯಾಷನಲ್ ವೇಟ್ ಲಿಫ್ಟಿಂಗ್ ಫೆಡರೇಶನ್ (ಐ.ಡಬ್ಲ್ಯೂ.ಎಫ್.) ನಿಂದಾದ ತಪ್ಪಿನಿಂದ. ಪರೀಕ್ಷೆಗಾಗಿ ಪಡೆದಿದ್ದ ಎರಡು ಮಾದರಿಗಳು ಅದಲು ಬದಲಾಗಿದ್ದರಿಂದ ಸಂಜಿತಾ ಮೇಲೆ ಉದ್ದೀಪನ ಸೇವನೆ ಆರೋಪ ಬಂದಿತ್ತು ಎಂದು ಐ.ಡಬ್ಲ್ಯೂ.ಎಫ್. ಒಪ್ಪಿಕೊಂಡಿದೆ.

ಭಾರತದಲ್ಲಿ ಕೊಹ್ಲಿ, ಸಚಿನ್ ಗಿಂತ ಧೋನಿ ಹೆಚ್ಚು ಜನಪ್ರಿಯ ಆಟಗಾರ!ಭಾರತದಲ್ಲಿ ಕೊಹ್ಲಿ, ಸಚಿನ್ ಗಿಂತ ಧೋನಿ ಹೆಚ್ಚು ಜನಪ್ರಿಯ ಆಟಗಾರ!

ಉದ್ದೀಪನ ಆರೋಪಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿರುವ ಸಮಿತಿಯೆದುರು ಐ.ಡಬ್ಲ್ಯೂ.ಎಫ್., ತಪ್ಪಾಗಿದ್ದು ನಮ್ಮಿಂದಲೇ ಎಂದು ಒಪ್ಪಿಕೊಂಡಿದೆ. ಉದ್ದೀಪನ ಪರೀಕ್ಷೆಗೆ ಪಡೆಯಲಾಗಿದ್ದ ಎರಡು ಸ್ಯಾಂಪಲ್ ಗಳು ಬದಲಾಗಿದ್ದರಿಂದ ಸಂಜಿತಾ ಫಲಿತಾಂಶ ಪಾಸಿಟಿವ್ ಎಂದು ಬಂದಿತ್ತು ಎಂದು ಅಂತಾರಾಷ್ಟ್ರೀಯ ಲಿಫ್ಟಿಂಗ್ ಫೆಡರೇಶನ್ ಹೇಳಿದೆ.

ಈ ವರ್ಷದ ಆರಂಭದಲ್ಲಿ ನಡೆಸಲಾದ ಡೋಪ್ ಟೆಸ್ಟ್ ಬಳಿಕ ಮೂತ್ರದ ಎರಡು ಸ್ಯಾಂಪಲ್ ಗಳನ್ನು ಪರೀಕ್ಷೆಗಾಗಿ ಕಳುಹಿಸಲಾಗಿತ್ತು. ಹೀಗಾಗಿ ಪ್ರಮಾದ ಘಟಿಸಿತ್ತು ಎಂದು ಐ.ಡಬ್ಲ್ಯೂ.ಎಫ್. ನ್ಯಾಷನಲ್ ಆ್ಯಂಟಿ ಡೋಪಿಂಗ್ ಏಜೆನ್ಸಿ (ನಾಡಾ)ಗೆ ಕಳುಹಿಸಿರುವ ಪತ್ರದಲ್ಲಿ ತಿಳಿಸಿದೆ.

ಪ್ರಕರಣದ ಆರಂಭದಿಂದಲೂ ತಾನು ಮುಗ್ಧೆ, ಉದ್ದೀಪನ ಸೇವನೆಯಂಥ ತಪ್ಪು ಮಾಡಿಲ್ಲ ಎಂದು ಚಾನು ಹೇಳುತ್ತಲೇ ಬಂದಿದ್ದರು. ಈಗ ಅಂತಾರಾಷ್ಟ್ರೀಯ ಫೆಡರೇಷನ್ ಗೆ ಪತ್ರ ಬರೆದಿರುವ ಚಾನು, ಫೆಡರೇಷನ್ ಸಾಮರ್ಥ್ಯವನ್ನೇ ಪ್ರಶ್ನಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಯಬೇಕು. ತಪ್ಪಿತಸ್ಥರು ಯಾರೆಂಬುದು ಗೊತ್ತಾಗಬೇಕು ಎಂದು ಒತ್ತಾಯಿಸಿದ್ದಾರೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಕಾಮನ್ವೆಲ್ತ್ ಗೇಮ್ಸ್ ನ ವನಿತಾ ವೇಟ್ ಲಿಫ್ಟಿಂಗ್ ನಲ್ಲಿ ಚಿನ್ನದ ಪದಕ ವಿಜೇತೆ ಸಂಜಿತಾ ಜೂನ್ ನಲ್ಲಿ ಉದ್ದೀಪನ ಸೇವನೆ ಆರೋಪದಡಿಯಲ್ಲಿ ಇಂಟರ್ ನ್ಯಾಷನಲ್‌ ವೇಟ್ ಲಿಫ್ಟಿಂಗ್ ಫೆಡರೇಷನ್ (IWF) ನಿಂದ ಅಮಾನತಾಗಿದ್ದರು.

Story first published: Friday, July 27, 2018, 14:20 [IST]
Other articles published on Jul 27, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X