ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕೊರೊನಾ ವೈರಸ್ ಭೀತಿ: ನಿಗದಿಯ ಪ್ರಕಾರವೇ ಒಲಿಂಪಿಕ್ಸ್ ನಡೆಸಲು ಬದ್ಧ ಎಂದ ಜಪಾನ್ ಕ್ರೀಡಾ ಸಚಿವ

Japan Committed To Hosting 2020 Tokyo Olympics On Schedule

ಜಗತ್ತಿನಾದ್ಯಂತ ಕೊರೋನಾ ವೈರಸ್ ಭೀತಿ ಹೆಚ್ಚಾಗುತ್ತಿದೆ. ಒಂದು ಕಡೆ ನಿಯಂತ್ರಣಕ್ಕೆ ಬರುತ್ತಿದೆ ಎಂದಾಗಲೆ ಮತ್ತೊಂದು ಭಾಗದಲ್ಲಿ ವೈರಸ್ ಹಬ್ಬುವ ಆತಂಕದ ವಾತಾವರಣವನ್ನುಂಟು ಮಾಡುತ್ತಿದೆ. ಈ ಮಧ್ಯೆ ಈ ಬಾರಿಯ ಒಲಿಂಪಿಕ್ಸ್ ಸಾಕಷ್ಟು ಗೊಂದಲದಿಂದ ಕೂಡಿದೆ.

ಈ ವಿಚಾರವಾಗಿ ಜಪಾನ್ ಕ್ರೀಡಾ ಸಚಿವರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ. ಜಪಾನ್ ನಿಗದಿತ ದಿನಾಂಕದಂದೇ ಒಲಿಂಪಿಕ್ಸ್ ನಡೆಸಲು ಬದ್ಧವಾಗಿದೆ ಎಂಬ ಮಾತನ್ನು ಹೇಳಿದ್ದಾರೆ. ಗುರುವಾರ ಜಪಾನ್ ಪಾರ್ಲಿಮೆಂಟ್‌ನಲ್ಲಿ ಈ ಬಗ್ಗೆ ಜಪಾನ್ ಕ್ರೀಡಾ ಸಚಿವರು ಮಹತ್ವದ ಹೇಳಿಕೆಯನ್ನು ನೀಡಿದ್ದಾರೆ.

ಒಲಿಂಪಿಕ್ ಈಜು ಚಾಂಪಿಯನ್, ಚೀನಾದ ಸನ್ ಯಾಂಗ್‌ಗೆ 8 ವರ್ಷಗಳ ನಿಷೇಧಒಲಿಂಪಿಕ್ ಈಜು ಚಾಂಪಿಯನ್, ಚೀನಾದ ಸನ್ ಯಾಂಗ್‌ಗೆ 8 ವರ್ಷಗಳ ನಿಷೇಧ

ಒಲಿಂಪಿಕ್ಸ್ ಕೂಟವನ್ನು ರದ್ಧುಗೊಳಿಸುವುದು ಅಥವಾ ಮುಂದೂಡುವುದು ಕ್ರಿಡಾಪಟುಗಳ ದೃಷ್ಟಿಕೋನದಿಂದ ಒಳ್ಳೆಯ ನಿರ್ದಾರವಲ್ಲ, ಕ್ರೀಡಾಪಟುಗಳು ನಿರಾಳವಾಗಿ ತಮ್ಮ ಕ್ರೀಡೆಯತ್ತ ಗಮನಹರಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತದೆ ಎಂಬ ಮಾತನ್ನು ಜಪಾನ್ ಕ್ರೀಡಾ ಸಚಿವ ಸಿಕೋ ಹಶಿಮೋಟೋ ಪಾರ್ಲಿಮೆಂಟ್‌ನಲ್ಲಿ ಹೇಳಿದ್ದಾರೆ.

ಜಪಾನ್‌ನಾದ್ಯಂತ ಈವರೆಗೆ ಸಾವಿರಕ್ಕೂ ಅಧಿಕ ಕೊರೋನಾ ವೈರಸ್ ಪ್ರಕರಣ ಧೃಡಪಟ್ಟಿದೆ. ಅದರಲ್ಲೂ ಬುಧವಾರ ಒಂದೇ ದಿನ 36 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇದು ಒಂದು ದಿನದಲ್ಲಿ ಜಪಾನ್‌ನಲ್ಲಿ ಪತ್ತೆಯಾದ ಅತಿ ಹೆಚ್ಚು ಪ್ರಕರಣವಾಗಿದೆ. ಇದಾದ ಮರುದಿನವೇ ಜಪಾನ್ ಕ್ರೀಡಾ ಸಚಿವರು ಈ ಹೇಳಿಕೆಯನ್ನು ನೀಡಿರುವುದು ವಿಶೇಷವೆನಿಸಿದೆ.

ಕೊರೊನಾ ವೈರಸ್ ಭೀತಿ, ಟೋಕಿಯೋ ಒಲಿಂಪಿಕ್ಸ್‌ 2020 ರದ್ದು ಸಾಧ್ಯತೆಕೊರೊನಾ ವೈರಸ್ ಭೀತಿ, ಟೋಕಿಯೋ ಒಲಿಂಪಿಕ್ಸ್‌ 2020 ರದ್ದು ಸಾಧ್ಯತೆ

ಇನ್ನು ಬುಧವಾರ ಒಲಿಂಪಿಕ್ಸ್ ಸಿದ್ಧತಾ ಸಭೆಯ ನಡೆದಿತ್ತು. ಈ ಸಭೆಯಲ್ಲಿ 'ರದ್ಧತಿ' ಅಥವಾ 'ಮುಂದೂಡಿಕೆ' ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿಯ ಅಧ್ಯಕ್ಷ ಥೋಮಸ್ ಬಾಕ್ ಹೇಳಿದ್ದಾರೆ.

Story first published: Thursday, March 5, 2020, 17:30 [IST]
Other articles published on Mar 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X