ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಒಲಿಂಪಿಕ್ಸ್‌ ಹತ್ತಿರದಲ್ಲಿರುವಾಗಲೇ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಣೆ

Japans PM announces a coronavirus state of emergency in Tokyo

ಟೋಕಿಯೋ: ಟೋಕಿಯೋ ಒಲಿಂಪಿಕ್ಸ್‌ಗೆ ಇನ್ನು ಕೇವಲ ಎರಡು ವಾರಗಳು ಬಾಕಿಯಿರುವಾಗಲೇ ಜಪಾನ್‌ನ ಟೋಕಿಯೋದಲ್ಲಿ ತುರ್ತು ಪರಿಸ್ಥಿತಿ ಘೋಷಣೆಯಾಗಿದೆ. ಗುರುವಾರ (ಜುಲೈ 8) ಜಪಾನ್‌ನ ಟೋಕಿಯೋದಲ್ಲಿ ಅಲ್ಲಿನ ಪಿಎಂ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

ಟೀಮ್ ಇಂಡಿಯಾ ವಿರುದ್ಧದ ಸರಣಿಯಿಂದ ಶ್ರೀಲಂಕಾ ಮಂಡಳಿ ಗಳಿಸುವ ಆದಾಯ ಎಷ್ಟು ಗೊತ್ತಾ!ಟೀಮ್ ಇಂಡಿಯಾ ವಿರುದ್ಧದ ಸರಣಿಯಿಂದ ಶ್ರೀಲಂಕಾ ಮಂಡಳಿ ಗಳಿಸುವ ಆದಾಯ ಎಷ್ಟು ಗೊತ್ತಾ!

ಕೋವಿಡ್‌-19 ಕಾರಣದಿಂದಾಗಿ ಟೋಕಿಯೋದಲ್ಲಿ ನಿಷೇಧ ಹೇರಲಾಗಿದೆ. ಟೋಕಿಯೋ ಒಲಿಂಪಿಕ್ಸ್‌ ನಡೆಯುವಾಗ ಕನಿಷ್ಠ ಜಪಾನ್‌ನ ಕ್ರೀಡಾ ಅಭಿಮಾನಿಗಳಿಗಾದರೂ ಸ್ಟೇಡಿಯಂಗೆ ಪ್ರವೇಶ ನೀಡಲಾಗುತ್ತದೆ ಎಂದು ಈ ಮೊದಲು ಹೇಳಲಾಗಿತ್ತು. ಆದರೆ ಈಗ ಬಹುತೇಕ ಎಲ್ಲಾ ಸ್ಪರ್ಧೆಗಳಿಗೂ ಅಭಿಮಾನಿಗಳಿಗೆ ಪ್ರವೇಶ ನಿಷೇಧಿಸುವ ಸಾಧ್ಯತೆಯಿದೆ.

'ಟೋಕಿಯೋವನ್ನು ನಾವು ತುರ್ತು ಪರಿಸ್ಥಿತಿಯ ರಾಜ್ಯವಾಗಿ ಘೋಷಿಸಿದ್ದೇವೆ. ಈ ತುರ್ತು ಪರಿಸ್ಥಿತಿಯ ಅವಧಿ ಆಗಸ್ಟ್ 22ರ ವರೆಗೆ ಇರಲಿದೆ," ಎಂದು ಜಪಾನ್ ಪ್ರಧಾನ ಮಂತ್ರಿ ಯೋಶಿಹಿಡೆ ಸುಗಾ ಅವರು ಸೋಂಕಿನ ಕ್ರಮಗಳ ಬಗೆಗಿನ ಸಭೆಯಲ್ಲಿ ತಿಳಿಸಿದ್ದಾರೆ.

ಧೋನಿ ಹುಟ್ಟಹಬ್ಬದಂದು ಗೌತಮ್ ಗಂಭೀರ್ ನಡೆಗೆ ಅಭಿಮಾನಿಗಳ ಆಕ್ರೋಶಧೋನಿ ಹುಟ್ಟಹಬ್ಬದಂದು ಗೌತಮ್ ಗಂಭೀರ್ ನಡೆಗೆ ಅಭಿಮಾನಿಗಳ ಆಕ್ರೋಶ

ಟೋಕಿಯೋದಲ್ಲಿ ಜುಲೈ 23ರಿಂದ ಆಗಸ್ಟ್ 8ರ ವರೆಗೆ ಒಲಿಂಪಿಕ್ಸ್ ನಡೆಯಲಿದೆ. ತುರ್ತು ಪರಿಸ್ಥಿತಿ ಘೋಷಣೆಯಾಗಿರುವ ಕಾರಣ ಒಲಿಂಪಿಕ್ಸ್ ಆರಂಭದಿಂದ ಅಂತ್ಯದ ವರೆಗೂ ಅಭಿಮಾನಿಗಳಿಗೆ ಸ್ಟೇಡಿಯಂ ಪ್ರವೇಶ ನಿಷಿದ್ಧವಿರುವ ಸಾಧ್ಯತೆಯಿದೆ.

Story first published: Thursday, July 8, 2021, 17:05 [IST]
Other articles published on Jul 8, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X