ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಟೋಕಿಯೋ ಒಲಿಂಪಿಕ್ ಮುಂದೂಡಲು ಟ್ರಂಪ್ ಇತ್ತ ಸಲಹೆ ಬದಿಗಿಟ್ಟ ಜಪಾನ್

Japan Says Olympics on Track Despite Trumps Suggestion to Postpone

ಟೋಕಿಯೋ, ಮಾರ್ಚ್ 13: ಟೋಕಿಯೋ ಒಲಿಂಪಿಕ್ 2020 ನಡೆಸುವ ನಿರ್ಧಾರಕ್ಕೆ ಜಪಾನ್ ಗಟ್ಟಿಯಾಗಿದೆ ಎಂದು ಜಪಾನ್ ಸರ್ಕಾರದ ವಕ್ತಾರ ಯೋಶಿಹೈಡ್ ಸೂಗ ಹೇಳಿದ್ದಾರೆ. ಒಲಿಂಪಿಕ್ ಮುಂದೂಡುವಂತೆ ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಸಲಹೆಯ ಹೊರತಾಗಿಯೂ ಕ್ರೀಡಾಕೂಟ ನಡೆಯುವುದರಲ್ಲಿದೆ ಎಂದು ಸೂಗ ಮಾಹಿತಿ ನೀಡಿದ್ದಾರೆ.

ಕೊರೊನಾ ಎಫೆಕ್ಟ್: ತೊಂದರೆಗೀಡಾದ ಪ್ರಮುಖ ಕ್ರೀಡಾ ಸ್ಪರ್ಧೆಗಳ ಪಟ್ಟಿಕೊರೊನಾ ಎಫೆಕ್ಟ್: ತೊಂದರೆಗೀಡಾದ ಪ್ರಮುಖ ಕ್ರೀಡಾ ಸ್ಪರ್ಧೆಗಳ ಪಟ್ಟಿ

ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಈ ಮೊದಲು ಮಾತುಕತೆ ನಡೆದಿದೆ ಎಂದು ಯೋಶಿಹೈಡ್ ಸೂಗ ಹೇಳಿಕೊಂಡಿದ್ದಾರೆ. ಆದರೆ ಟ್ರಂಪ್ ಸಲಹೆಯ ಬಗ್ಗೆ ಅಬೆ, ಸೂಗ ಜೊತೆ ಚರ್ಚೆ ನಡೆಸಿದ್ದಾರೋ ಇಲ್ಲವೋ ಎಂಬ ಬಗ್ಗೆ ಸೂಗ ಸ್ಪಷ್ಟನೆ ನೀಡಿಲ್ಲ. ಒಟ್ಟಿನಲ್ಲಿ ಟ್ರಂಪ್ ಮತ್ತು ಅಬೆ ಮಧ್ಯೆ ಸುಮಾರು 50 ನಿಮಿಷಗಳ ಮಾತುಕತೆ ದೂರವಾಣಿ ಮೂಲಕ ನಡೆದಿದೆ ಎಂದಷ್ಟೇ ತಿಳಿಸಿದ್ದಾರೆ.

ಮಹತ್ವದ ಸಭೆಗೆ ಐಪಿಎಲ್ ಎಲ್ಲಾ ಫ್ರಾಂಚೈಸಿಗಳ ಆಹ್ವಾನಿಸಿದ ಬಿಸಿಸಿಐಮಹತ್ವದ ಸಭೆಗೆ ಐಪಿಎಲ್ ಎಲ್ಲಾ ಫ್ರಾಂಚೈಸಿಗಳ ಆಹ್ವಾನಿಸಿದ ಬಿಸಿಸಿಐ

'ನಾನು ಜೊತೆಗಿದ್ದಾಗ ಅವರು (ಟ್ರಂಪ್-ಅಬೆ) ಜಪಾನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವಿನ ಪ್ರಯಾಣ ನಿರ್ಬಂಧಗಳ ಬಗ್ಗೆ ಏನೂ ಮಾತನಾಡಲಿಲ್ಲ,' ಎಂದು ಸೂಗ ವಿವರಿಸಿದ್ದಾರೆ. ಚೀನಾದಲ್ಲಿ ಕೊರೊನಾ ವೈರಸ್ ಆತಂಕ ಸೃಷ್ಟಿಸಿರುವುದರಿಂದ ಜಪಾನ್‌ ನಲ್ಲಿ ನಡೆಯಲಿರುವ ಟೋಕಿಯೋ ಒಲಿಂಪಿಕ್ಸ್‌ಗೂ ಹೊಡೆತ ಬಿದ್ದಿದೆ. ಆದರೆ ಕ್ರೀಡಾಕೂಟ ನಡೆಸುವುದರಲ್ಲಿದ್ದೇವೆ ಎಂದು ಜಪಾನ್ ಈ ಮೊದಲೂ ಹೇಳಿತ್ತು.

ಟಿ20 ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿರುವ 3 ತಂಡಗಳನ್ನು ಹೆಸರಿಸಿದ ಬ್ರ್ಯಾನ್ ಲಾರಾಟಿ20 ವಿಶ್ವಕಪ್ ಗೆಲ್ಲುವ ಸಾಮರ್ಥ್ಯವಿರುವ 3 ತಂಡಗಳನ್ನು ಹೆಸರಿಸಿದ ಬ್ರ್ಯಾನ್ ಲಾರಾ

ಅಂದ್ಹಾಗೆ, ಪುರಾತನ ಗ್ರೀಕ್‌ನ ಒಲಿಂಪಿಕ್ಸ್ ಸಂಪ್ರದಾಯದಂತೆ ಒಲಿಂಪಿಯಾದಲ್ಲಿ ನಡೆಯಲಿರುವ 2020ರ ಟೋಕಿಯೋ ಒಲಿಂಪಿಕ್ಸ್‌ ಜ್ಯೋತಿ ಬೆಳಗುವ ಕಾರ್ಯಕ್ರಮ ಈಗಾಗಲೇ ನಡೆದಿದೆ. ಆದರೆ ಈ ಕಾರ್ಯಕ್ರಮದಲ್ಲೂ ಹೆಚ್ಚಿನ ವೀಕ್ಷಕರು ಇರಲಿಲ್ಲ ಎಂದು ತಿಳಿದು ಬಂದಿದೆ.

Story first published: Friday, March 13, 2020, 13:25 [IST]
Other articles published on Mar 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X