ವಿರಾಟ್ ಕೊಹ್ಲಿ ಅಭಿಮಾನಿಗಳಲ್ಲಿ ಆಶ್ಚರ್ಯವನ್ನುಂಟುಮಾಡಿದ ಜಾನ್ ಸೀನಾ

ಈ ಹಿಂದಿನ ಒಂದು ಸಮಯದಲ್ಲಿ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್‌ನ ನಂಬರ್ ಒನ್ ಎನಿಸಿಕೊಂಡಿದ್ದ ಜಾನ್ ಸೀನ ಇದೀಗ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್‌ನಲ್ಲಿ ಅರೆಕಾಲಿಕ ಸದಸ್ಯನಾಗಿದ್ದು ನಟನಾಗಿಯೂ ಸಹ ಮಿಂಚುತ್ತಿದ್ದಾರೆ. ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್‌ನಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದ ಜಾನ್ ಸೀನಾ ಸಿನಿಮಾಗಳಲ್ಲಿಯೂ ಮಿಂಚಿ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಆದ ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಫೀಲ್ಡಿಂಗ್ ವೇಳೆ ಸಹ ಆಟಗಾರನಿಗೆ ಡಿಕ್ಕಿ ಹೊಡೆದು ಮೈದಾನದಲ್ಲೇ ಕುಸಿದು ಬಿದ್ದ ಡು ಪ್ಲೆಸಿಸ್

ಇನ್ಸ್ಟಾಗ್ರಾಂನಲ್ಲಿ 15 ಮಿಲಿಯನ್ ಹಾಗೂ ಟ್ವಿಟ್ಟರ್‌ನಲ್ಲಿ 13 ಮಿಲಿಯನ್ ಅನುಯಾಯಿಗಳನ್ನು ಹೊಂದಿರುವ ಜಾನ್ ಸೀನಾ ಕೆಲ ಗಂಟೆಗಳ ಹಿಂದಷ್ಟೆ ವಿರಾಟ್ ಕೊಹ್ಲಿ ಅಭಿಮಾನಿಗಳಿಗೆ ಆಶ್ಚರ್ಯ ಉಂಟಾಗುವಂತಹ ಫೋಟೋವನ್ನು ಹಾಕಿದ್ದಾರೆ. ಹೌದು ಜಾನ್ ಸೀನಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಕೆಲ ಗಂಟೆಗಳ ಹಿಂದಷ್ಟೇ ವಿರಾಟ್ ಕೊಹ್ಲಿಯ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಇದ್ದಕ್ಕಿದ್ದಂತೆ ಜಾನ್ ಸೀನಾ ವಿರಾಟ್ ಕೊಹ್ಲಿಯ ಫೋಟೋ ಪೋಸ್ಟ್ ಮಾಡಿರುವುದನ್ನು ಕಂಡು ಕೊಹ್ಲಿ ಅಭಿಮಾನಿಗಳು ಆಶ್ಚರ್ಯ ಮತ್ತು ಸಂತಸಕ್ಕೊಳಗಾಗಿದ್ದು ಸಾಲು ಸಾಲು ಕಾಮೆಂಟ್ ಮಾಡುತ್ತಿದ್ದಾರೆ.

ಜಾನ್ ಸೀನಾ ವಿರಾಟ್ ಕೊಹ್ಲಿಯ ಫೋಟೋವನ್ನು ಪೋಸ್ಟ್ ಮಾಡುತ್ತಿರುವುದು ಇದೇ ಮೊದಲೇನಲ್ಲ, 2019ರ ವಿಶ್ವಕಪ್ ಸಮಯದಲ್ಲಿಯೂ ಸಹ ವಿರಾಟ್ ಕೊಹ್ಲಿಯ ಫೋಟೋವನ್ನು ಜಾನ್ ಸೀನಾ ಪೋಸ್ಟ್ ಮಾಡಿದ್ದರು. ಅಷ್ಟೇ ಅಲ್ಲದೆ ಭಾರತದ ಸೆಲೆಬ್ರಿಟಿಗಳಾದ ರಾಹುಲ್ ದ್ರಾವಿಡ್, ಸಚಿನ್ ತೆಂಡೂಲ್ಕರ್ ಹಾಗೂ ಶಾರುಖ್ ಖಾನ್‌ರ ಫೋಟೋಗಳನ್ನು ಸಹ ಜಾನ್ ಸೀನಾ ಆಗಾಗ ಪೋಸ್ಟ್ ಮಾಡಿ ಭಾರತೀಯರ ಗಮನವನ್ನು ಸೆಳೆದಿದ್ದಾರೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, June 13, 2021, 10:55 [IST]
Other articles published on Jun 13, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X