ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಖೇಲೋ ಇಂಡಿಯಾ ಯೂತ್‌ ಗೇಮ್ಸ್‌ 2021ಗೆ ಮಲ್ಲಕಂಬ ಹಾಗೂ ಕಳರಿಪಯಟ್ಟು

kalaripayattu, mallakamba included in Khelo India Youth Games 2021

ಮಲ್ಲಕಂಬ ಹಾಗೂ ಕಳರಿ ಪಯಟ್ಟು ಸಹಿತ ನಾಲ್ಕು ಸ್ಥಳೀಯ ಕ್ರೀಡೆಗಳಿಗೆ ಕ್ರೀಡಾ ಸಚಿವಾಲಯ 2021ರ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಮ್ಮತಿ ನೀಡಿದೆ. ಮುಂದಿನ ವರ್ಷದಲ್ಲಿ ಹರ್ಯಾಣದಲ್ಲಿ ನಡೆಯಲಿರುವ ಖೇಲೋ ಇಂಡಿಯಾ ಯೂತ್‌ಗೇಮ್ಸ್‌ನಲ್ಲಿ ಈ ಸ್ಥಳೀಯ ಕ್ರೀಡೆಗಳನ್ನು ಕಾಣಬಹುದಾಗಿದೆ.

ಮಲ್ಲ ಕಂಬ, ಕಳರಿಪಯಟ್ಟು, ಗಾಟ್ಕ ಹಾಗೂ ತಾಂಗ್-ಟ ಕ್ರೀಡೆಗಳು ಖೇಲೋ ಇಂಡಿಯಾ ಯೂತ್‌ಗೇಮ್ಸ್‌ನಲ್ಲಿ ಸ್ಥಾನವನ್ನು ಪಡೆದುಕೊಂಡಿದೆ. ಕ್ರೀಡಾ ಸಚಿವ ಕಿರಣ್ ರಿಜಿಜು ಈ ಬಗ್ಗೆ ಮಾಹಿತಿಯನ್ನು ನೀಡಿದ್ದು "ಭಾರತ ಸ್ಥಳೀಯ ಕ್ರೀಡೆಗಳ ಸಮೃದ್ಧವಾದ ಸಂಸ್ಕೃತಿಯನ್ನು ಹೊಂದಿದೆ. ಇಂತಾ ಕ್ರೀಡೆಗಳಿಗೆ ಪ್ರೋತ್ಸಾಹವನ್ನು ನೀಡಿ ಕಾಪಾಡಿಕೊಳ್ಳುವುದು ಕ್ರೀಡಾ ಇಲಾಖೆಯ ಆದ್ಯತೆಯಾಗಿದೆ" ಎಂದಿದ್ದಾರೆ.

ಕತಾರ್ ಫುಟ್ಬಾಲ್ ವಿಶ್ವಕಪ್ 2022: ಅದ್ಧೂರಿಯಾಗಿ ಅನಾವರಣಗೊಂಡ ಅಹ್ಮದ್ ಬಿನ್ ಅಲಿ ಸ್ಟೇಡಿಯಮ್ಕತಾರ್ ಫುಟ್ಬಾಲ್ ವಿಶ್ವಕಪ್ 2022: ಅದ್ಧೂರಿಯಾಗಿ ಅನಾವರಣಗೊಂಡ ಅಹ್ಮದ್ ಬಿನ್ ಅಲಿ ಸ್ಟೇಡಿಯಮ್

"ಈ ಕ್ರೀಡೆಗಳ ಸ್ಪರ್ಧಿಗಳಿಗೆ ಭಾಗಿಯಾಗಲು ಖೇಲೋ ಇಂಡಿಯಾ ಗೇಮ್ಸ್‌ಗಿಂತ ಉತ್ತಮ ವೇದಿಕೆ ದೊರೆಯಲಾರದು. 2021ರ ಖೇಲೋ ಇಂಡಿಯಾ ಯೂತ್ ಗೇಮ್ಸ್‌ನಲ್ಲಿ ಯೋಗಾಸನದ ಜೊತೆಗೆ ಈ ನಾಲ್ಕು ಕ್ರೀಡೆಗಳು ಸಾಕಷ್ಟು ಗಮನಸೆಳೆಯಲಿದೆ ಎಂದು ನಾನು ಭರವಸೆಯನ್ನು ಹೊಂದಿದ್ದೇನೆ" ಎಂದು ಕ್ರೀಡಾ ಸಚಿವರು ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.

ಇಂದು ಖೇಲೋ ಇಂಡಿಯಾ ಯೂತ್‌ಗೇಮ್ಸ್‌ಗೆ ಆಯ್ಕೆಯಾದ ನಾಲ್ಕು ಕ್ರೀಡೆಗಳು ನಾಲ್ಕು ವಿಭಿನ್ನ ಪ್ರದೇಶಗಳ ಸಂಸ್ಕೃತಿಯ ಭಾಗವಾಗಿದೆ. ಕಳರಿಪಯಟ್ಟು ಕೇರಳದ ಮೂಲವನ್ನು ಹೊಂದಿದ್ದು ಸದ್ಯ ವಿಶ್ವಾದ್ಯಂತ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದೆ. ಮಲ್ಲಕಂಬ ಕೂಡ ಭಾರತದಾದ್ಯಂತ ಸಾಕಷ್ಟು ಜನಪ್ರಿಯವಾಘಿದ್ದು ಮಧ್ಯ ಪ್ರದೇಶ ಮಹಾರಾಷ್ಟ್ರ ಹಾಗೂ ಕರ್ನಾಟಕದಲ್ಲಿ ಹೆಚ್ಚು ಪ್ರಖ್ಯಾತವಾಗಿದೆ.

ಫ್ಲ್ಯಾಶ್‌ಬ್ಯಾಕ್‌ 2020: 143 ವರ್ಷಗಳಲ್ಲಿ ಮೊದಲ ಬಾರಿಗೆ ನಡೆಯಿತು ಪ್ರೇಕ್ಷಕರಿಲ್ಲದೆ ಟೆಸ್ಟ್ ಪಂದ್ಯಫ್ಲ್ಯಾಶ್‌ಬ್ಯಾಕ್‌ 2020: 143 ವರ್ಷಗಳಲ್ಲಿ ಮೊದಲ ಬಾರಿಗೆ ನಡೆಯಿತು ಪ್ರೇಕ್ಷಕರಿಲ್ಲದೆ ಟೆಸ್ಟ್ ಪಂದ್ಯ

ಗಾಟ್ಕಾ ಪಂಜಾಬ್ ಮೂಲದ ಯುದ್ಧ ಕೌಶಲ್ಯವನ್ನು ಹೊಂದಿರುವ ಕ್ರೀಡೆಯಾಗಿದ್ದು ಪಂಜಾಬ್‌ನ ನಿಹಾಂಗ್ ಸಿಖ್ ಯೋಧರು ಆತ್ಮ ರಕ್ಷಣೆ ಹಾಗೂ ಕ್ರೀಡೆಯಾಗಿ ಇದು ಸಂಸ್ಕೃತಿಯ ಭಾಗವಾಗಿದೆ. ಇನ್ನು ತಾಂಗ್-ಟ ಮನಿಪುರಿ ಮಾರ್ಶಲ್ ಆರ್ಟ್ ಕಲೆಯಾಗಿದ್ದು ಇತ್ತೀಚಿನ ದಶಕಗಳಲ್ಲಿ ತೆರೆಮರೆಗೆ ಸರಿದಿದೆ. ಕ್ರೀಡಾ ಇಲಾಖೆ ತೆಗೆದುಕೊಂಡ ಈ ನಿರ್ಧಾರದಿಂದ ಈ ಕ್ರೀಡೆಗಳಿಗೆ ಮತ್ತಷ್ಟು ಜನಪ್ರಿಯತೆ ದೊರೆಯಲಿದೆ.

Story first published: Monday, December 21, 2020, 10:13 [IST]
Other articles published on Dec 21, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X