ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಹೊಸ ದಾಖಲೆ ಬರೆದ ಕಮಲ್‌ಪ್ರೀತ್‌ಗೆ ಟೋಕಿಯೋ ಒಲಿಂಪಿಕ್ಸ್ ಟಿಕೆಟ್

Kamalpreet Kaur booked her ticket for the Tokyo Olympic Games

ನವದೆಹಲಿ: ಭಾರತದ ಡಿಸ್ಕಸ್ ಥ್ರೋವರ್‌ ಕಮಲ್‌ಪ್ರೀತ್‌ ಕೌರ್ ಮುಂಬರಲಿರುವ ಟೋಕಿಯೋ ಒಲಿಂಪಿಕ್ಸ್ ಗೇಮ್ಸ್‌ಗೆ ಟಿಕೆಟ್ ಪಡೆದುಕೊಂಡಿದ್ದಾರೆ. ಪಾಟಿಯಾಲದಲ್ಲಿ ನಡೆದ 24ನೇ ಫೆಡರೇಶನ್ ಕಪ್ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಗಮನಾರ್ಹ ಸಾಧನೆ ತೋರಿದ ಕೌರ್‌ ಪ್ರತಿಷ್ಠಿತ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ.

ಟಾಪ್ ಆರ್ಡರ್‌ನಲ್ಲಿ ರೋಹಿತ್, ಧವನ್, ಕೊಹ್ಲಿ: ಆಂಗ್ಲರಿಗೆ ಸೋಲು ಖಚಿತ?!ಟಾಪ್ ಆರ್ಡರ್‌ನಲ್ಲಿ ರೋಹಿತ್, ಧವನ್, ಕೊಹ್ಲಿ: ಆಂಗ್ಲರಿಗೆ ಸೋಲು ಖಚಿತ?!

ಮಹಿಳಾ ವಿಭಾಗದ ಡಿಸ್ಕಸ್ ಥ್ರೋನಲ್ಲಿ ಸ್ಪರ್ಧಿಸಿದ್ದ ಕಮಲ್‌ಪ್ರೀತ್‌ ಕೌರ್ 65.06 ಮೀಟರ್ ದೂರ ಸಾಧನೆ ತೋರುವುದರೊಂದಿಗೆ ಗಮನ ಸೆಳೆದಿದ್ದಾರೆ. ಮೂರು ಎಸೆತಗಳಲ್ಲಿ ಕೌರ್ ಎಸೆದಿದ್ದು ಒಂದೇ ಲೀಗಲ್ ಥ್ರೋ. ಅದರೆ ಆ ಥ್ರೋನಲ್ಲಿ ಕೌರ್‌ ಅತ್ಯುತ್ತಮ ಸಾಧನೆ ತೋರಿದ್ದಾರೆ.

ಈ ಅತ್ಯುತ್ತಮ ಥ್ರೋನೊಂದಿಗೆ ಕಮಲ್‌ಪ್ರೀತ್‌ ನೂತನ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ. ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಲು 63.50 ಮೀ. ದೂರ ಮಾನದಂಡ ವಿಧಿಸಲಾಗಿತ್ತು. ಆದರೆ ಕೌರ್ ಈ ಕನಿಷ್ಠ ದೂರವನ್ನು ಮೀರಿದ ಸಾಧನೆ ತೋರಿದರು.

ಸನತ್ ಜಯಸೂರ್ಯರ ಬೆರಗು ಮೂಡಿಸುವ ಸ್ಫೂರ್ತಿಯ ಕತೆಯಿದು!ಸನತ್ ಜಯಸೂರ್ಯರ ಬೆರಗು ಮೂಡಿಸುವ ಸ್ಫೂರ್ತಿಯ ಕತೆಯಿದು!

ಡಿಸ್ಕಸ್ ಥ್ರೋನಲ್ಲಿ ಹಿಂದಿನ ರಾಷ್ಟ್ರೀಯ ದಾಖಲೆ ಕೃಷ್ಣ ಪೂನಿಯಾ ಅವರ ಹೆಸರಿನಲ್ಲಿತ್ತು. 2012ರಲ್ಲಿ 64.76 ಮೀ. ದೂರ ಡಿಸ್ಕಸ್ ಎಸೆಯುವ ಮೂಲಕ ಪೂನಿಯಾ ಈ ದಾಖಲೆ ನಿರ್ಮಿಸಿದ್ದರು. ಕೌರ್ ಅವರು 2014ರಲ್ಲಿ ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸೀಮಾ ಪೂನಿಯ ತೋರಿದ್ದ 62.64 ಮೀ. ಸಾಧನೆಯನ್ನೂ ಸರಿಗಟ್ಟಿದಂತಾಗಿದೆ.

Story first published: Tuesday, March 23, 2021, 12:25 [IST]
Other articles published on Mar 23, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X