ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕಂಬಳದಲ್ಲಿ ಮತ್ತೊಂದು ವಿಶ್ವದಾಖಲೆಯ ಸದ್ದು: ಕಂಬಳವೀರರಿಗೆ ಬೋಲ್ಟ್ ದಾಖಲೆ ಮುರಿಯುವುದು ಸುಲಭ!

By ಪ್ರತಿನಿಧಿ
kambala racer compared with usain bolt

ಕಂಬಳ, ತುಳುನಾಡಿನ ಮಣ್ಣಿನ ಆಟ. ರೈತರ ನೆಚ್ಚಿನ ಈ ಕ್ರೀಡೆ ಜನಪದ ಕ್ರೀಡೆಯಾಗಿ ಮಾತ್ರವಲ್ಲ ಆಧುನಿಕತೆಯೊಂದಿಗೂ ಹೊಂದಿಕೊಂಡು ಜನರಿಗೆ ಮನರಂಜನೆಯ ಭಾಗವಾಗಿ ಒಗ್ಗಿಕೊಂಡಿದೆ. ಎರಡು ವರ್ಷದ ಬೇಡದ ಕಾರಣಕ್ಕೆ ಸುದ್ದಿಯಾಗಿದ್ದ ಕಂಬಳ ಈಗ ಮತ್ತೊಮ್ಮೆ ವಿಶ್ವಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ ಈ ಬಾರಿ ಸುದ್ದಿಯಾಗಿದ್ದು ವೇಗದ ಓಟಗಾರ ಉಸೇನ್ ಬೋಲ್ಟ್‌ಗೆ ಹೋಲಿಕೆ ಮಾಡಿದ ಕಾರಣಕ್ಕೆ.

ಮೊನ್ನೆಯಷ್ಟೇ ಕಂಬಳದ ಓಟಗಾರ ಶ್ರೀನಿವಾಸ ಗೌಡ ಅವರು ವಿಶ್ವದಾಖಲೆಯ ಓಟಗಾರ ಉಸೇನ್ ಬೋಲ್ಟ್ ಅವರ ಹೆಸರಿನಲ್ಲಿದ್ದ ದಾಖಲೆಯನ್ನು ಮುರಿಯಲಾಗಿದೆ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿಯಾಗಿತ್ತು. ಅದಾದ ಕೆಲವೇ ದಿನದ ಅಂತರದಲ್ಲಿ ಶ್ರೀನಿವಾಸ ಗೌಡರ ದಾಖಲೆಯನ್ನೂ ಮುರಿದ ಸುದ್ದಿ ಸುದ್ದಿಕೇಂದ್ರಕ್ಕೆ ತಲುಪಿದೆ. ನಿಶಾಂತ್ ಗೌಡ ಎಂಬ ಮತ್ತೋರ್ವ ಯುವಕ ಕಂಬಳದ ಓಟದಲ್ಲಿ ಶ್ರೀನಿವಾಸ ಗೌಡರನ್ನೂ ಮೀರಿಸಿದ್ದಾರೆ.

ಹಾಗಾದರೆ ಕಂಬಳದ ಓಟಗಾರರಿಗೆ ಉಸೇನ್ ಬೋಲ್ಟ್ ದಾಖಲೆಯನ್ನು ಮುರಿಯುವುದಕ್ಕೆ ಯಾಕೆ ಸಾಧ್ಯವಾಯಿತು. ಕಂಬಳದ ಅಂಗಳದ ಓಟಕ್ಕೂ ಟ್ರ್ಯಾಕ್ ಓಟಕ್ಕೂ ಏನಿದೆ ವ್ಯತ್ಯಾಸ. ಉಸೇನ್ ಬೋಲ್ಟ್‌ಗೂ ಶ್ರೀನಿವಾಸ ಗೌಡ ಅವರ ಓಟಕ್ಕೂ ಏನಿದೆ ವ್ಯತ್ಯಾಸ ಮುಂದೆ ನೋಡಿ:

ಹೋಲಿಕೆ ಸರಿಯೇ!

ಹೋಲಿಕೆ ಸರಿಯೇ!

ಓಟ ಓಟವೇ. ಆದರೆ ಕಂಬಳದ ಓಟಕ್ಕೂ ಟ್ರ್ಯಾಕ್ ಓಟಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಎರಡನ್ನೂ ಹೋಲಿಕೆ ಮಾಡಿ ಪ್ರಚಾರ ಮಾಡಿದ ರೀತಿಯೇ ತಪ್ಪು. ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ಈ ಹೋಲಿಕೆ ಬಳಿಕ ಅಂತಾರಾಷ್ಟ್ರೀಯ ಮಟ್ಟದ ಮಾಧ್ಯಮಗಳೂ ಪ್ರಚಾರ ಮಾಡುವ ಮಟ್ಟಕ್ಕೆ ತಲುಪಿತು.

ಯಾಕೆ ಹೋಲಿಕೆ ಮಾಡಬಾರದು

ಯಾಕೆ ಹೋಲಿಕೆ ಮಾಡಬಾರದು

ಕಂಬಳದ ಓಟದ ರೀತಿಯೇ ಬೇರೆ. ಟ್ರ್ಯಾಕ್ ರೇಸ್‌ನ ರೀತಿಯೇ ಬೇರೆ. ಹಾಗೆ ನೋಡಿದರೆ ಟ್ರ್ಯಾಕ್‌ರೇಸ್‌ಗಿಂತ ಕಂಬಳದ ಓಟ ಕಠಿಣ. ಇಲ್ಲಿ ಬರಿಗಾಲಲ್ಲಿ ಓಡಬೇಕು. ಅದರಲ್ಲೂ ಪಾದ ಮಟ್ಟದವರೆಗಿನ ಕೆಸರು ನೀರಿನಲ್ಲಿ ಕಂಬಳದ ಓಟಗಾರರು ಓಡಬೇಕು. ಆದರೆ ಟ್ರ್ಯಾಕ್ ರೇಸರ್‌ಗಳಿಗೆ ಹಾಗಿಲ್ಲ. ಆಧುನಿಕ ಟ್ರ್ಯಾಕ್‌ನಲ್ಲಿ ಶೂಗಳನ್ನು ಧರಿಸಿಕೊಂಡು ಓಡಲಾಗುತ್ತದೆ.

ಕಂಬಳದ ಓಟಗಾರನಿಗೆ ಕೋಣಗಳೇ ಶಕ್ತಿ

ಕಂಬಳದ ಓಟಗಾರನಿಗೆ ಕೋಣಗಳೇ ಶಕ್ತಿ

ಉಸೇನ್ ಬೋಲ್ಟ್ ದಾಖಲೆಯನ್ನು ಮುರಿಯಲು ಶ್ರೀನಿವಾಸ ಗೌಡರಿಗೆ ಮತ್ತು ನಿಶಾಂತ್ ಶೆಟ್ಟಿಗೆ ಸಾಧ್ಯವಾಗಲು ಕಾರಣವಾಗಿದ್ದೇ ಕೋಣಗಳು. ಕೋಣಗಳು ಓಟದಲ್ಲಿ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಮೀರಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಕಂಬಳದ ಓಟಗಾರರು ಈ ಕೋಣಗಳ ವೇಗದಿಂದಲೇ ತಮ್ಮ ವೇಗವನ್ನು ಹೆಚ್ಚಿಸಿಕೊಳ್ಳುತ್ತಾರೆ. ಕೋಣಗಳನ್ನು ನಿಯಂತ್ರಣ ಮಾಡುವ ಹಗ್ಗದ ಸಹಾಯದಿಂದ ಈ ದಾಖಲೆಯ ನಿರ್ಮಾಣ ಸಾಧ್ಯವಾಗಿದೆ ಎಂಬುದು ಒಪ್ಪಿಕೊಳ್ಳಲೇ ಬೇಕಾದ ಸತ್ಯ.

ಪ್ರತಿ ವರ್ಷವೂ ಕರಾವಳಿಯಲ್ಲಿ ಈ ಸುದ್ಧಿ

ಪ್ರತಿ ವರ್ಷವೂ ಕರಾವಳಿಯಲ್ಲಿ ಈ ಸುದ್ಧಿ

ಕರಾವಳಿಯಲ್ಲಿ ಕಂಬಳದ ಸೀಸನ್ ಆರಂಭವಾದಗಲೂ ಬೋಲ್ಟ್ ದಾಖಲೆ ಸುದ್ದಿಮಾಡುತ್ತಲೇ ಇರುತ್ತದೆ. ಆದರೆ ಈ ಮಾತ್ರ ಈ ಸುದ್ದಿ ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ತಲುಪಿತ್ತು. ಹೀಗಾಗಿ ಕೇಂದ್ರ ಕ್ರೀಡಾ ಸಚಿವರೇ ಶ್ರೀನಿವಾಸ ಗೌಡರಿಗೆ ಅಭಿನಂದಿಸಿ ತರಭೇತಿಯ ಭರವಸೆ ನೀಡಿದರು.

ಓಟಗಾರರಿಗೆ ಪ್ರೋತ್ಸಾಹ ಅಗತ್ಯ

ಓಟಗಾರರಿಗೆ ಪ್ರೋತ್ಸಾಹ ಅಗತ್ಯ

ಕಂಬಳ ಕರಾವಳಿಯಲ್ಲಿ ಮನರಂಜನಾ ಕ್ರೀಡೆಯಾಗಿ ಮಾತ್ರವೇ ಉಳಿದಿಲ್ಲ. ಅದೊಂದು ಪ್ರತಿಷ್ಟೆಯೇ ಆಗಿದೆ. ಇಂತಾ ಕ್ರೀಡೆಯಲ್ಲಿ ಸಾಕಷ್ಟು ಪ್ರತಿಭಾನ್ವಿತ ಓಟಗಾರರು ಕಣಕ್ಕಿಳಿಯುತ್ತಾರೆ. ತಮ್ಮ ಜೋಡಿ ಕೋಣಗಳನ್ನು ಆದಷ್ಟು ಕಡಿಮೆ ಸಮಯದಲ್ಲಿ ಗುರಿ ತಲುಪಿಸುವುದು ಇವರ ಗುರಿ. ಅನೇಕ ಪ್ರತಿಭಾನ್ವಿತ ಓಟಗಾರರಿಗೆ ಇದು ಜನ್ಮ ನೀಡಿದರೂ ಕಂಬಳದ ಅಂಗಳದಲ್ಲಷ್ಟೇ ಇವರಿಗೆ ಮನ್ನಣೆ. ಇಂತಾ ಓಟಗಾರರಿಗೆ ಮತ್ತಷ್ಟು ಉತ್ತೇಜನ ಸಿಗಬೇಕಾದ ಅನಿವಾರ್ಯತೆಯಿದೆ. ಆಗ ಖಂಡಿತಾ ಓಟದ ದಾಖಲೆಯಲ್ಲಿ ಬೋಲ್ಟ್ ದಾಖಲೆಯನ್ನು ಮೀರಲು ಅವಕಾಶ ಇದ್ದೆ ಇದೆ.

Story first published: Tuesday, February 18, 2020, 16:08 [IST]
Other articles published on Feb 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X