ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ವಿಶ್ವ ಅಂಗವಿಕಲರ ಅಥ್ಲೆಟಿಕ್ಸ್: ಭಾರತದ ಕರಮ್ ಜ್ಯೋತಿಗೆ ಕಂಚು

ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಕರಮ್ ಜ್ಯೋತಿ ಗೆ ಕಂಚು. ಡಿಸ್ಕಸ್ ಥ್ರೋನಲ್ಲಿ ಪಾಲ್ಗೊಂಡಿದ್ದ ಕರಮ್ ಜ್ಯೋತಿ ದಲಾಲ್ ಗೆ ಕಂಚಿನ ಪದಕ.

ನವದೆಹಲಿ, ಜುಲೈ 22: ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಭಾರತದ ಡಿಸ್ಕಸ್ ತ್ರೋ ಕ್ರೀಡಾಳು ಕರಮ್ ಜ್ಯೋತಿ ದಲಾಲ್ ಅವರು ಕಂಚಿನ ಪದಕ ಗೆದ್ದಿದ್ದಾರೆ.

ಅಥ್ಲೆಟಿಕ್ಸ್ : ಭಾರತದ ಕ್ರೀಡಾಪಟುಗಳ ಸಾಧನೆಯ ಸಂಭ್ರಮಅಥ್ಲೆಟಿಕ್ಸ್ : ಭಾರತದ ಕ್ರೀಡಾಪಟುಗಳ ಸಾಧನೆಯ ಸಂಭ್ರಮ

ಮಹಿಳೆಯರ ಎಫ್55 ವಿಭಾಗದ ಡಿಸ್ಕಸ್ ತ್ರೋನಲ್ಲಿ ಭಾಗವಹಿಸಿದ್ದ ಅವರು, 19.02 ಮೀಟರ್ ವರೆಗೆ ಡಿಸ್ಕ್ ಎಸೆದರಲ್ಲದೆ, ತಮ್ಮ ಸಮೀಪದ ಪ್ರತಿಸ್ಪರ್ಧಿ ಬಹರೇನ್ ನ ಅಲೊಮಾರಿ ರೊಬಾ (19.01 ಮೀ.) ಅವರನ್ನು ಹಿಂದಿಕ್ಕಿ ಕಂಚಿನ ಪದಕ ತಮ್ಮದಾಗಿಸಿಕೊಂಡರು.

Karamjyoti Dalal wins bronze at World Para Athletics Championships

ದಲಾಲ್ ಅವರ ಈ ಎಸೆತ, ಈ ಬಾರಿ ವಿಶ್ವ ಅಥ್ಲೆಟಿಕ್ಸ್ ನಲ್ಲಿಯೇ ಅತಿ ದೂರದ ಎಸೆತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅಂದಹಾಗೆ, ದಲಾಲ್ ಅವರ ಈ ಚಿನ್ನದ ಪದಕವು ಈ ಬಾರಿ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ನಲ್ಲಿ ಭಾರತದ ಪದಕಗಳ ಸಂಖ್ಯೆ ಮೂರಕ್ಕೇರಿದೆ.

ಇದೇ ಕ್ರೀಡಾಕೂಟದಲ್ಲಿ, ಸುಂದರ್ ಸಿಂಗ್ ಗುರ್ಜಾರ್ ಅವರು ಪುರುಷರ ಜ್ಯಾವೆಲಿನ್ ಥ್ರೋನಲ್ಲಿ ಚಿನ್ನ ಗೆದ್ದಿದ್ದಾರೆ. ಇನ್ನು, ಅಮಿತ್ ಸರೋಹಾ ಅವರು ಎಫ್-51 ವಿಭಾಗದ ಕ್ಲಬ್ ಥ್ರೋ ನಲ್ಲಿ ಬೆಳ್ಳಿಯ ಪದಕ ತಂದಿದ್ದಾರೆ.

Story first published: Wednesday, January 3, 2018, 10:16 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X