ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕರ್ನಾಟಕ ರಾಜ್ಯ ಮಿನಿ ಒಲಿಂಪಿಕ್ ಕ್ರೀಡಾಕೂಟ 2022ಕ್ಕೆ ಚಾಲನೆ: ಒಂದು ವಾರಗಳ ಕಾಲ 21 ಕ್ರೀಡಾ ಸ್ಪರ್ಧೆ

Karnataka state mini olympic

ಎರಡನೇ ಆವೃತ್ತಿಯ ರಾಜ್ಯ ಮಿನಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ಸೋಮವಾರ (ಮೇ. 16)ರಂದು ಚಾಲನೆ ಸಿಕ್ಕಿದೆ. ಒಂದು ವಾರಗಳ ನಡೆಯುವ ಈ ಸ್ಪರ್ಧೆಯಲ್ಲಿ 21 ಕ್ರೀಡಾ ಸ್ಪರ್ಧೆಗಳಿವೆ. ಈ ಕ್ರೀಡಾಕೂಟವನ್ನ ಕರ್ನಾಟಕ ಸರ್ಕಾರದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಒಲಿಂಪಿಕ್ ಸಂಸ್ಥೆ (ಕೆ.ಓ.ಎ)ವತಿಯಿಂದ ಆಯೋಜಿಸಲಾಗಿದೆ.

ಭಾರತದ ಭವಿಷ್ಯದ ಕ್ರೀಡಾಪಟುಗಳನ್ನ ಬೆಳೆಸುವ ದೃಷ್ಟಿಯಲ್ಲಿ ಮಿನಿ ಒಲಿಂಪಿಕ್ಸ್‌ ಅನ್ನು ದೇಶದಲ್ಲಿ ಮೊದಲನೆಯ ಬಾರಿಗೆ ಆರಂಭಿಸಲಾಯಿತು. ಆದ್ರೆ ಕೋವಿಡ್ ಕಾರಣಗಳಿಂದಾಗಿ ಕಳೆದ ಎರಡು ವರ್ಷಗಳು ನಡೆದಿಲ್ಲ, ಈ ಬಾರಿ ಎರಡನೇ ವರ್ಷ ಕ್ರೀಡಾಕೂಟವನ್ನ ಆಯೋಜಿಸಲಾಗಿದೆ.

ರಾಜ್ಯ ಮಿನಿ ಒಲಿಂಪಿಕ್‌ ಉದ್ಘಾಟನಾ ಸಮಾರಂಭದಲ್ಲಿ ರಾಜ್ಯಪಾಲರಾದ ಶ್ರೀ ಥಾವರ್ ಚಂದ್ ಗೆಹ್ಲೋಟ್, ಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವರಾದ ಡಾ. ಕೆ.ಸಿ. ನಾರಾಯಣಗೌಡರು ಉಪಸ್ಥಿತರಿದ್ದರು.

2020ರಲ್ಲಿ ಮೊದಲ ಬಾರಿಗೆ ಪ್ರಾರಂಭವಾದ ಕ್ರೀಡಾಕೂಟವು ಬಹು ಯಶಸ್ವಿಯಾಗಿ ನಡೆಯಿತು. ರಾಜ್ಯದಲ್ಲಿ ಎರಡನೇ ಬಾರಿಗೆ ಈ ಕ್ರೀಡಾಕೂಟವನ್ನ ಆಯೋಜಿಸಲಾಗುತ್ತಿದ್ದು, ದಿನಾಂಕ 16.05.2022 ರಿಂದ ದಿನಾಂಕ 22.05.2022ರವರೆಗೆ ಬೆಂಗಳೂರಿನ ವಿವಿಧ ಸ್ಥಳಗಳಲ್ಲಿ ನಡೆಯಲಿದೆ.

ನಮ್ಮೂರ ಪ್ರತಿಭೆ: ಇಕ್ವೆಸ್ಟ್ರಿಯನ್ ಚಾಂಪಿಯನ್, ಬೆಂಗಳೂರಿನ ಫವಾದ್ ಮಿರ್ಜಾನಮ್ಮೂರ ಪ್ರತಿಭೆ: ಇಕ್ವೆಸ್ಟ್ರಿಯನ್ ಚಾಂಪಿಯನ್, ಬೆಂಗಳೂರಿನ ಫವಾದ್ ಮಿರ್ಜಾ

ಸೋಮವಾರ(ಮೇ. 16) ಮೊದಲ ದಿನದ ಸ್ಪರ್ಧೆಯಲ್ಲಿ ಈ ಕೆಳಗಿನ ಸ್ಥಳಗಳಲ್ಲಿ ಸ್ಪರ್ಧೆಗಳನ್ನ ನಡೆಸಲಾಯಿತು
ಆರ್ಚರಿ (200 ಮೀಟರ್ ಟ್ರ್ಯಾಕ್): ಶ್ರೀ ಕಂಠೀರವ ಸ್ಟೇಡಿಯಂ
ಬಾಕ್ಸಿಂಗ್: ಶ್ರೀ ಕಂಠೀರವ ಸ್ಟೇಡಿಯಂ, ಬಾಕ್ಸಿಂಗ್ ರಿಂಗ್
ಹಾಕಿ: ಕೆ.ಎಂ ಕರಿಯಪ್ಪ ಹಾಕಿ ಸ್ಟೇಡಿಯಂ
ಲಾನ್ ಟೆನಿಸ್: ಕೆಎಸ್‌ಎಲ್‌ಟಿಎ ಗ್ರೌಂಡ್ ಮತ್ತು ಶ್ರೀ ಕಂಠೀರವ ಸ್ಟೇಡಿಯಂ
ನೆಟ್ ಬಾಲ್: ವಿದ್ಯಾ ನಗರ ಸ್ಪೋರ್ಟ್ಸ್‌ ಕಾಂಪ್ಲೆಕ್ಸ್‌
ಟೇಬಲ್ ಟೆನಿಸ್: ಶ್ರೀ ಕಂಠೀರವ ಸ್ಟೇಡಿಯಂ, ಟೇಬಲ್ ಟೆನಿಸ್ ಹಾಲ್
ವುಶು: ಶ್ರೀ ಕಂಠೀರವ ಇಂಡೋರ್ ಸ್ಟೇಡಿಯಂ

Karnataka state Mini olympic 1

ಕ್ರೀಡಾಕೂಟದಲ್ಲಿ ಒಟ್ಟಾರೆಯಾಗಿ 21 ಸ್ಪರ್ಧೆಗಳು ನಡೆಯಲಿದ್ದು, ಅವುಗಳು ಈ ಕೆಳಗಿನಂತಿದೆ.

ಅಥ್ಲೆಟಿಕ್ಸ್, ಆರ್ಚರಿ, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಬಾಕ್ಸಿಂಗ್, ಸೈಕ್ಲಿಂಗ್, ಫೆನ್ಸಿಂಗ್, ಫುಟ್ಬಾಲ್, ಜಿಮ್ನಾಸ್ಟಿಕ್‌, ಹ್ಯಾಂಡ್ ಬಾಲ್, ಹಾಕಿ, ಜೂಡೋ, ಖೊಖೊ, ಲಾನ್ ಟೆನ್ನಿಸ್, ನೆಟ್‌ ಬಾಲ್‌, ರೈಫಲ್ ಶೂಟಿಂಗ್, ಸ್ವಿಮ್ಮಿಂಗ್, ಟೇಬಲ್ ಟೆನಿಸ್, ಟೆಕ್‌ವ್ಯಾಂಡೋ, ವೈಟ್‌ಲಿಫ್ಟಿಂಗ್, ಮುಂತಾದವುಗಳು ಈ ಮಿನಿ ಒಲಿಂಪಿಕ್ಸ್‌ನಲ್ಲಿ ಆಯಾ ರಾಜ್ಯ ಕ್ರೀಡಾ ಸಂಸ್ಥೆಗಳಿಂದ ಪ್ರತಿ ಕ್ರೀಡಾ ಸ್ಪರ್ಧೆಯಲ್ಲಿ ಆಯ್ಕೆಗೊಂಡ ಅಗ್ರ 8 ಶ್ರೇಯಾಂಕದ ಕ್ರೀಡಾಳುಗಳು ಭಾಗವಹಿಸುತ್ತಾರೆ.

Karnataka state Mini olympic 2

ಸ್ಪರ್ಧೆಗಳು ನಡೆಯುವ ಸ್ಥಳಗಳು:
ಹ್ಯಾಂಡ್‌ಬಾಲ್, ನೆಟ್‌ಬಾಲ್ ಹಾಗೂ ಖೊಖೊ ಸ್ಪರ್ಧೆಗಳು ವಿದ್ಯಾನಗರದಲ್ಲಿರುವ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಕ್ರೀಡಾಂಗಣದಲ್ಲಿ, ರೈಫಲ್ ಶೂಟಿಂಗ್ ಭಾರತೀಯ ಕ್ರೀಡಾ ಪ್ರಾಧಿಕಾರದ ದಕ್ಷಿಣದ ಕೇಂದ್ರದಲ್ಲಿ ನಡೆಯಲಿದೆ. ಸೈಕ್ಲಿಂಗ್‌ ನೈಸ್ ರಸ್ತೆಯಲ್ಲಿ, ಫುಟ್ಬಾಲ್ ಕ್ರೀಡೆಯು ಕರ್ನಾಟಕ ರಾಜ್ಯ ಫುಟ್ಬಾಲ್ ಅಸೋಸಿಯೇಷನ್‌ ಸ್ಟೇಡಿಯಂನಲ್ಲಿ, ಜಿಮ್ನಾಸ್ಟಿಕ್ ಹೂಡಿಯಲ್ಲಿರುವ ಗೋಪಾಲನ್ ಸ್ಪೋರ್ಟ್ಸ್‌ ಕೇಂದ್ರದಲ್ಲಿ, ಸ್ವಿಮ್ಮಿಂಗ್ ಬಸವನಗುಡಿಯ ಸ್ವಿಮ್ಮಿಂಗ್ ಪೂಲ್‌ನಲ್ಲಿ ಹಾಗೂ ಹಾಕಿ ಶಾಂತಿನಗರದ ಹಾಕಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇನ್ನುಳಿದಂತೆ ಸ್ಪರ್ಧೆಗಳು ಶ್ರೀ ಕಂಠೀರವ ಸ್ಟೇಡಿಯಂ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ಆಯೋಜನೆಗೊಂಡಿದೆ.

Story first published: Tuesday, May 17, 2022, 9:26 [IST]
Other articles published on May 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X