ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಕರ್ನಾಟಕದಲ್ಲಿ 'ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್'ನ 2ನೇ ಆವೃತ್ತಿ

Karnataka to host 2nd Edition of Khelo India University Games 2021

ಬೆಂಗಳೂರು: ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ (ಕೆಐಯುಜಿ) ಎರಡನೇ ಆವೃತ್ತಿ ಕರ್ನಾಟಕದಲ್ಲಿ ನಡೆಯಲಿದೆ. ಈ ವರ್ಷದ ಅಂತ್ಯಕ್ಕೆ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್‌ಗೆ ಕರ್ನಾಟಕ ಆತಿಥ್ಯ ವಹಿಸಲಿದೆ ಎಂದು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ಕೇಂದ್ರ ಕ್ರೀಡಾ ಸಚಿವ ಕಿರಣ್ ರಿಜಿಜು ಘೋಷಿಸಿದ್ದಾರೆ.

ಟಿಆರ್‌ಎಸ್‌ ಎಂಎಲ್‌ಎಯಿಂದ ಐಪಿಎಲ್ ಪಂದ್ಯಗಳ ನಿಲ್ಲಿಸುವ ಬೆದರಿಕೆ!ಟಿಆರ್‌ಎಸ್‌ ಎಂಎಲ್‌ಎಯಿಂದ ಐಪಿಎಲ್ ಪಂದ್ಯಗಳ ನಿಲ್ಲಿಸುವ ಬೆದರಿಕೆ!

ಅಸೋಸಿಯೇಶನ್ ಆಫ್ ಇಂಡಿಯನ್ ಯುನಿವರ್ಸಿಟಿ (ಎಐಯು) ಸಹಭಾಗಿತ್ವದಲ್ಲಿ ಎರಡನೇ ಆವೃತ್ತಿಯ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಮತ್ತು ರಾಜ್ಯದ ಇತರ ತಾಣಗಳಲ್ಲಿ ನಡೆಯಲಿವೆ.

ಭಾರತದ ಕ್ರೀಡಾಪ್ರತಿಭೆಗಳನ್ನು ಹೆಕ್ಕಿ ಪ್ರೋತ್ಸಾಹಿಸಲು ನಡೆಸಲಾಗುತ್ತಿರುವ ಬೃಹತ್ ಕ್ರೀಡಾಕೂಟಗಳಲ್ಲಿ ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ಕೂಡ ಒಂದು. ಈ ಕೂಟದಲ್ಲಿ ಆಯ್ಕೆಯಾದ ಪ್ರತಿಭೆಗಳನ್ನು ಅಂತಾರಾಷ್ಟ್ರೀಯ ಮಟ್ಟ ಮತ್ತು ಒಲಿಂಪಿಕ್ಸ್‌ಗೆ ಸಜ್ಜುಗೊಳಿಸುವ ಉದ್ದೇಶವನ್ನು ಕ್ರೀಡಾಕೂಟ ಇಟ್ಟುಕೊಂಡಿದೆ.

ವಿರಾಟ್ ಕೊಹ್ಲಿ ಮನೆಯಲ್ಲಿ ಸೇವಕರೇ ಇಲ್ಲ: ಸರಂದೀಪ್ ಸಿಂಗ್ವಿರಾಟ್ ಕೊಹ್ಲಿ ಮನೆಯಲ್ಲಿ ಸೇವಕರೇ ಇಲ್ಲ: ಸರಂದೀಪ್ ಸಿಂಗ್

ಕೆಐಯುಜಿ ಮೊದಲ ಆವೃತ್ತಿ ಒಡಿಶಾದ ಭುವನೇಶ್ವರ್‌ನಲ್ಲಿ ಫೆಬ್ರವರಿ 2020ರಲ್ಲಿ ನಡೆದಿತ್ತು. ಅಂಡರ್ 25 ವಯೋಮಾನದವರಿಗಾಗಿ ನಡೆಸಲಾಗಿದ್ದ ಈ ಕ್ರೀಡಾಕೂಟದಲ್ಲಿ ಎಲ್ಲಾ ಕಾಲೇಜುಗಳ ಸುಮಾರು 158 ವಿಶ್ವವಿದ್ಯಾನಿಲಯಗಳಿಂದ 3182 ಕ್ರೀಡಾಪಟುಗಳು ಪಾಲ್ಗೊಂಡಿದ್ದರು.

Story first published: Monday, February 22, 2021, 14:58 [IST]
Other articles published on Feb 22, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X