ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ನಮ್ಮೂರ ಪ್ರತಿಭೆ: ಭಾರತೀಯ ವಾಲಿಬಾಲ್‌ನಲ್ಲಿ ಮಿಂಚುತ್ತಿರುವ ಅಶ್ವಲ್ ರೈ

Karnataka Volleyball talent Ashwal Rai shining in international level

ಭಾರತೀಯ ವಾಲಿಬಾಲ್ ಲೋಕದಲ್ಲಿ ಈಗ ಹೆಚ್ಚು ಸದ್ದು ಮಾಡುತ್ತಿರುವ ಹೆಸರು ಅದು ಅಶ್ವಲ್ ರೈ. ಭಾರತ ವಾಲಿಬಾಲ್ ತಂಡದ ಪ್ರಮುಖ ಆಟಗಾರನಾಗಿ ಮಿಂಚುತ್ತಿರುವ ಅಶ್ವಲ್ ರೈ ಪ್ರೊ ವಾಲಿಬಾಲ್ ಲೀಗ್‌ನಲ್ಲಿಯೂ ಅಮೋಘ ಪ್ರದರ್ಶನದ ಮೂಲಕ ವಾಲಿಬಾಲ್ ಪ್ರೇಮಿಗಳಿಗೆ ಚಿರಪರಿಚಿತವಾಗಿದ್ದಾರೆ. ಈ ಪ್ರತಿಭಾನ್ವಿತ ಕ್ರೀಡಾಪಟು ಕರ್ನಾಟಕದ ದಕ್ಷಿಣ ಕನ್ನಡದ ಬೆಳ್ತಂಗಡಿ ಮೂಲದವರು ಎಂಬುದು ಕನ್ನಡಿಗರಿಗೆ ಹೆಮ್ಮೆಯ ಸಂಗತಿ. ಇತ್ತೀಚೆಗಷ್ಟೇ ಅಶ್ವಲ್ ರೈ ವಾಲಿಬಾಲ್ ಕ್ಷೇತ್ರದ ತನ್ನ ಸಾಧನೆಗಾಗಿ ಏಕಲವ್ಯ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯ ಮಧ್ಯಮ ವರ್ಗದ ಕುಟುಂಬದಿಂದ ಬಂದ ಅಶ್ವಲ್ ರೈ ತನ್ನ ಸ್ವಂತ ಸಾಮರ್ಥ್ಯದಿಂದ ಇಂದು ಕ್ರೀಡಾ ಕ್ಷೇತ್ರದಲ್ಲಿ ತನ್ನದೇ ಆದ ವಿಶೇಷ ಸಾಧನೆಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ತನ್ನ ಎತ್ತರವನ್ನು ಸಾಮರ್ಥ್ಯವನ್ನಾಗಿ ಬಳಸಿಕೊಂಡ ಅಶ್ವಲ್ ರೈ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡುತ್ತಿದ್ದಾರೆ. ಮತ್ತಷ್ಟು ದೊಡ್ಡ ಕನಸನ್ನು ಇಟ್ಟುಕೊಂಡಿದ್ದಾರೆ ಅಶ್ವಲ್ ರೈ.

ನಮ್ಮೂರ ಪ್ರತಿಭೆ: ಕುಂದಾಪುರದ ಬಲಭೀಮ ವಿಶ್ವನಾಥ್‌ ಭಾಸ್ಕರ್ ಗಾಣಿಗನಮ್ಮೂರ ಪ್ರತಿಭೆ: ಕುಂದಾಪುರದ ಬಲಭೀಮ ವಿಶ್ವನಾಥ್‌ ಭಾಸ್ಕರ್ ಗಾಣಿಗ

ಹಾಗಾದರೆ ಅಶ್ವಲ್ ರೈ ಕ್ರೀಡಾ ಲೋಕದ ಹಾದಿ ಹೇಗಿತ್ತು. ಅವರ ಸಾಧನೆ ಕುರಿತಾದ ಕುತೂಹಲಕಾರಿ ಮಾಹಿತಿ ನಿಮಗಾಗಿ.

ವಾಲಿಬಾಲ್ ಕ್ಷೇತ್ರಕ್ಕೆ ಕಾಲಿಟ್ಟಿದ್ದೇ ಅಚ್ಚರಿ

ವಾಲಿಬಾಲ್ ಕ್ಷೇತ್ರಕ್ಕೆ ಕಾಲಿಟ್ಟಿದ್ದೇ ಅಚ್ಚರಿ

ಪ್ರಸ್ತುತ ವಾಲಿಬಾಲ್ ಲೋಕದಲ್ಲಿ ಅದ್ಭುತ ಸಾಧನೆ ಮಾಡುತ್ತಿರುವ ಅಶ್ವಲ್ ರೈ ವಾಲಿಬಾಲ್ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡಿದ್ದೇ ಕುತೂಹಲಕಾರಿ ಸಂಗತಿ. ದ್ವಿತೀಯ ವರ್ಷದ ಪದವಿವರೆಗೂ ಅಶ್ವಲ್ ರೈಗೆ ವಾಲಿಬಾಲ್ ನೋಡಿ ಮಾತ್ರವೇ ಗೊತ್ತಿದ್ದ ಆಟವಾಗಿತ್ತು. ಅಲ್ಲಿಯವರೆಗೂ ಒಮ್ಮೆಯೂ ವಾಲಿಬಾಲ್ ಆಡಿರಲಿಲ್ಲವಂತೆ ಅಶ್ವಲ್. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ದ್ವಿತೀಯ ವರ್ಷದ ಪದವಿ ವ್ಯಾಸಾಂಗದ ಸಂದರ್ಭದಲ್ಲಿ ಕಾಲೇಜಿನ ದೈಹಿಕ ಶಿಕ್ಷಕರು ಅಶ್ವಲ್ ಎತ್ತರವನ್ನು ನೋಡಿ ವಾಲಿಬಾಲ್ ಅಭ್ಯಾಸಕ್ಕೆ ಬರುವಂತೆ ಸಲಹೆಯನ್ನು ನೀಡಿದ್ದರಂತೆ. ಅವರ ಮಾತಿನಂತೆ ವಾಲಿಬಾಲ್ ಅಭ್ಯಾಸ ಆರಂಭಿಸಿದ ಅಶ್ವಲ್ ನಂತರ ನಿರಂತರ ಪರಿಶ್ರಮದಿಂದಾಗಿ ಇದೀಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತ ತಂಡವನ್ನು ಪ್ರತಿನಿಧಿಸುವ ಮಟ್ಟಿಗೆ ಬೆಳೆದಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಅಶ್ವಲ್

ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುತ್ತಿರುವ ಅಶ್ವಲ್

ಭಾರತೀಯ ವಾಲಿಬಾಲ್ ತಂಡದ ಪ್ರಮುಖ ಆಟಗಾರನಾಗಿ ಅಶ್ವಲ್ ರೈ ಗುರುತಿಸಿಕೊಂಡಿದ್ದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಏಷ್ಯಾದ ಬೆಸ್ಟ್ ಬ್ಲಾಕರ್ ಎನಿಸಿಕೊಂಡಿರುವ ಇವರು 2021ರಲ್ಲಿ ಜಪಾನ್‌ನ ಟೋಕಿಯೋದಲ್ಲಿ ನಡೆದ ಏಷ್ಯನ್ ಗೇಮ್ಸ್ ಚಾಂಪಿಯನ್‌ಶಿಪ್‌ನಲ್ಲಿ ಪುರುಷರ ವಿಭಾಗದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಭಾರತದ ವಾಲಿಬಾಲ್ ಕ್ಷೇತ್ರದಲ್ಲಿ ಮಿಂಚುತ್ತಿದ್ದಾರೆ. ಈ ಹಿಂದೆ ಚೀನಾದಲ್ಲಿ ನಡೆದ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಏಷ್ಯಾದ ಬೆಸ್ಟ್ ಬ್ಲಾಕರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದರು ಅಶ್ವಲ್ ರೈ.

ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಅಶ್ವಲ್ ದಾಖಲೆ

ಪ್ರೈಮ್ ವಾಲಿಬಾಲ್ ಲೀಗ್‌ನಲ್ಲಿ ಅಶ್ವಲ್ ದಾಖಲೆ

ಭಾರತದಲ್ಲಿ ಇದೇ ಮೊದಲ ಬಾರಿಗೆ ವಾಲಿಬಾಲ್ ಲೀಗ್ "ಪ್ರೈಮ್ ವಾಲಿಬಾಲ್ ಲೀಗ್" ಆಯೋಜನೆ ಮಾಡಲಾಯಿತು. ಇದರ ಹರಾಜಿನಲ್ಲಿ ಅಶ್ವಲ್ ರೈ ಅತಿ ಹೆಚ್ಚು ಮೊತ್ತಕ್ಕೆ ಹರಾಜಾದ ಆಟಗಾರ ಎನಿಸಿಕೊಂಡಿದ್ದಾರೆ. 'ಕೊಲ್ಕತ್ತಾ ಥಂಡರ್ ಬೋಲ್ಟ್' ತಂಡ 15 ಲಕ್ಷ ನೀಡಿ ಅಶ್ವಲ್ ರೈ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿತ್ತು. ಅಲ್ಲದೆ ಕೊಲ್ಕತ್ತಾ ಥಂಡರ್ ಬೋಲ್ಟ್ ತಂಡವನ್ನು ನಾಯಕನಾಗಿ ಮುನ್ನಡೆಸಿದ್ದಾರೆ ಅಶ್ವಲ್. 'ಕೊಲ್ಕತ್ತಾ ಥಂಡರ್ ಬೋಲ್ಟ್' ಅಶ್ವಲ್ ರೈ ನಾಯಕತ್ವದಲ್ಲಿ ಚೊಚ್ಚಲ ಪ್ರೈಮ್ ವಾಲಿಬಾಲ್ ಟೂರ್ನಿಯ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ಈ ಮೂಲಕ ಆಟಗಾರನಾಗಿ ಮಾತ್ರವಲ್ಲದೆ ತಂಡದ ನಾಯಕನಾಗಿಯೂ ತನ್ನ ಸಾಮರ್ಥ್ಯವನ್ನು ಅಶ್ವಲ್ ಸಾಬೀತುಪಡಿಸಿದ್ದಾರೆ.

ಏಕಲವ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ಅಶ್ವಲ್

ಏಕಲವ್ಯ ಪ್ರಶಸ್ತಿ ಮುಡಿಗೇರಿಸಿಕೊಂಡ ಅಶ್ವಲ್

ವಾಲಿಬಾಲ್ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಾ ಮಿಂಚುತ್ತಿರುವ ಅಶ್ವಲ್ ರೈ ಅನೇಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಇದರಲ್ಲಿ ಇತ್ತೀಚೆಗೆ ರಾಜ್ಯ ಸರ್ಕಾರ ನೀಡಿದ ಏಕಲವ್ಯ ಪ್ರಶಸ್ತಿ ಅತ್ಯಂತ ಪ್ರಮುಖವಾದದ್ದು. 2020-21ನೇ ಸಾಲಿನಲ್ಲಿ ರಾಜ್ಯ ಸರ್ಕಾರ ಈ ಪ್ರಶಸ್ತಿಗೆ ಕರ್ನಾಟಕ ರಾಜ್ಯ ಸರ್ಕಾರ ಅಶ್ವಲ್ ರೈ ಸಾಧನೆಯನ್ನು ಗುರುತಿಸಿ ಏಕಲವ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

Story first published: Friday, May 6, 2022, 17:11 [IST]
Other articles published on May 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X